ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ 'ಇಂದು ಏನೆಗೆ ಗೋವಿಂದ' ಬಯೋಪಿಕ್‌ ಪ್ರದರ್ಶನ

Bannanje Govindacharya Biopic Screened: ಖ್ಯಾತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ 'ಇಂದು ಏನೆಗೆ ಗೋವಿಂದ' ಬಯೋಪಿಕ್ ಸೋಮವಾರ ಅವರ ಜನ್ಮದಿನದ ಅಂಗವಾಗಿ ಭವ್ಯವಾಗಿ ಪ್ರದರ್ಶಿಸಲಾಯಿತು.

Aug 4, 2026 - 12:02
ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ 'ಇಂದು ಏನೆಗೆ ಗೋವಿಂದ' ಬಯೋಪಿಕ್‌ ಪ್ರದರ್ಶನ

ಬೆಂಗಳೂರು: ಚಾಮರಾಜಪೇಟೆಯ ಅಂಬರೀಶ್ ಸಭಾಂಗಣದಲ್ಲಿ, ಖ್ಯಾತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ 'ಇಂದು ಏನೆಗೆ ಗೋವಿಂದ' ಬಯೋಪಿಕ್ ಸೋಮವಾರ ಅವರ ಜನ್ಮದಿನದ ಅಂಗವಾಗಿ ಭವ್ಯವಾಗಿ ಪ್ರದರ್ಶಿಸಲಾಯಿತು.

ಚಲನಚಿತ್ರದ ಪ್ರಥಮ ಪ್ರದರ್ಶನದಲ್ಲಿ ಆಹ್ವಾನಿತ ಅಭಿಮಾನಿಗಳು, ಶಿಷ್ಯರು ಮತ್ತು ಗಣ್ಯರು ಭಾಗವಹಿಸಿದ್ದರು. ಈ ಬಯೋಪಿಕ್‌ನಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಅದ್ಭುತ ವ್ಯಕ್ತಿತ್ವ, ಅಪಾರ ಶಾಸ್ತ್ರ ಪಾಂಡಿತ್ಯ ಹಾಗೂ ಭಾರತೀಯ ಸಂಸ್ಕೃತಿಗೆ ಅವರು ನೀಡಿದ ಕೊಡುಗೆಯನ್ನು ತೋರಿಸಲಾಗಿದೆ. ಚಿತ್ರ ವೀಕ್ಷಿಸಿದ ಎಲ್ಲರೂ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ವಿಶೇಷ ಪ್ರದರ್ಶನಕ್ಕೆ ಅದಮಾರು ಮಠಾಧೀಶರಾದ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮತ್ತು ಮೂಡಬಿದಿರೆಯ ಜೈನ ಮಠದ ಜಾರುಕಿರ್ತಿ ಭಟ್ಟಾರಕ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

ಆಶೀರ್ವಚನ ನೀಡಿದ ಶ್ರೀಪಾದರುಗಳು, 'ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಭಾರತೀಯ ಜ್ಞಾನಪರಂಪರೆಯ ಮಹೋನ್ನತ ಪ್ರತಿನಿಧಿಗಳು. ವೇದ, ವೇದಾಂತ, ಭಾರತೀಯ ತತ್ತ್ವಶಾಸ್ತ್ರ ಹಾಗೂ ಸನಾತನ ಸಂಸ್ಕೃತಿಯ ಪ್ರಚಾರಕ್ಕಾಗಿ ಅವರು ಸಲ್ಲಿಸಿರುವ ಸೇವೆ ಅನನ್ಯವಾಗಿದೆ. ಇಂತಹ ಮಹನೀಯರ ಜೀವನವನ್ನು ಚಿತ್ರರೂಪದಲ್ಲಿ ದಾಖಲಿಸಿರುವುದು ಸಮಾಜಕ್ಕೆ ಶಾಶ್ವತ ಪ್ರೇರಣೆಯಾಗಲಿದೆ' ಎಂದರು.

ವಿಶೇಷವಾಗಿ ಯುವಜನತೆ ಈ ಚಿತ್ರವನ್ನು ನೋಡಿ ಭಾರತೀಯ ಶಾಸ್ತ್ರ, ಸಂಸ್ಕೃತಿ ಹಾಗೂ ಮೌಲ್ಯಗಳ ಬಗ್ಗೆ ಅಭಿಮಾನ ಬೆಳೆಸಿ, ಸಮಾಜಮುಖಿ ಜೀವನಕ್ಕೆ ಸ್ಫೂರ್ತಿ ಪಡೆಯಲಿ' ಎಂದು ಹಾರೈಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.