ದಿನ ಭವಿಷ್ಯ: ಇಂದು ಯಾರಿಗೆ ಶುಭ ಫಲ?

Daily Horoscope: ಇಂದು (ಶುಕ್ರವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Sep 18, 2026 - 09:49
ದಿನ ಭವಿಷ್ಯ: ಇಂದು ಯಾರಿಗೆ ಶುಭ ಫಲ?

ಮೇಷ:

ನಿಮ್ಮ ಸಾಮರ್ಥ್ಯಕ್ಕೆ ಸಂಪೂರ್ಣ ಯಶಸ್ಸು.. ಉದ್ಯೋಗ ಸಹಕಾರ, ಸಾಮರಸ್ಯ. ಹೂಡಿಕೆಗಳಲ್ಲಿ ಲಾಭದ ಸೂಚನೆ. ಪ್ರವಾಸಕ್ಕೆ  ಹೊರಟ  ಗೆಳೆಯರಿಂದ ಸಂತೋಷದ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಕೀರ್ತಿಯ ಲಾಭ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.

ವೃಷಭ:

ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು ತರುವ ಶುಕ್ರವಾರ.. ಖಾದಿ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ದುಡಿಯುವವರಿಗೆ  ಅನುಕೂಲವಾದ ವಾತಾವರಣ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿ.ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.

ಮಿಥುನ:

ಮಕ್ಕಳಿಗೆ ಸಂಸ್ಕಾರ ನೀಡುವ ಪ್ರಯತ್ನ.. ಮಾತಿನ ಮೋಡಿಗೆ ಮರುಳಾಗಿ ಮೋಸ ಹೋಗದಿರಿ. ಹಿತಶತ್ರುಗಳ ವಿಷಯದಲ್ಲಿ ಎಚ್ಚರ ಇರಲಿ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ದಿನಾಂತ್ಯದಲ್ಲಿ ವಿದೇಶದಿಂದ ಕರೆ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ಆದಿತ್ಯ ಹೃದಯ ಓದಿ.

ಕರ್ಕಾಟಕ: 

ಯಾವುದಕ್ಕೂ ಅವಸರ ಪಡದಿರಿ.. ಉದ್ಯೋಗಸ್ಥರ ಆರ್ಥಿಕ ತೊಂದರೆ  ಪರಿಹಾರ. ಉದ್ಯಮಗಳಿಗೆ ಅನಾಯಾಸವಾಗಿ ನೆರವು. ಸತ್ಪುರುಷರ ಹೆಸರು ಕೆಡಿಸುವ ಯತ್ನ ಬಯಲು. ಮಹಿಳಾ ಉದ್ಯಮಿಗಳಿಗೆ ಸಾಂಸ್ಥಿಕ ನೆರವು ಲಭ್ಯ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಕಾರ್ತಿಕೇಯ ಸ್ತೋತ್ರ ಓದಿ.

ಸಿಂಹ:

ಆಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.. ಹಲವು  ವ್ಯವಹಾರಗಳತ್ತ ಗಮನ ಕೊಡಲು ಒತ್ತಡ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಉದ್ಯಮದ ಸ್ವರೂಪ ಬದಲಾವಣೆಯ ಪ್ರಕ್ರಿಯೆಗೆ ಚಾಲನೆ. ಸಿವಿಲ್ ಎಂಜಿನಿಯರರಿಗೆ ಅನುಕೂಲದ ದಿನ. ಗಣೇಶ ಕವಚ, ನರಸಿಂಹ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕನ್ಯಾ:

ಕಾರ್ಯಕ್ಷೇತ್ರದಲ್ಲಿ ಸಾಮರಸ್ಯದ ನಡೆಗಳು.. ಪ್ರತಿಭೆ  ಹಾಗೂ ಕಾರ್ಯನಿಷ್ಠೆಗೆ ಮಾಲಿಕರಿಂದ ಶ್ಲಾಘನೆ. ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆಯ ಭರವಸೆ.. ಹತ್ತಿರದ ದೇವತಾಕ್ಷೇತ್ರಕ್ಕೆ ಭೇಟಿ. ಅಧ್ಯಾಪಕರಿಗೆ ಕೀರ್ತಿ ತರುವ ದಿನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ,  ರಾಮ ಭುಜಂಗಪ್ರಯಾತ. ಸ್ತೋತ್ರ ಓದಿ.

ತುಲಾ:

ವ್ಯಾಪಾರಿ ವರ್ಗಕ್ಕೆ ಅನುಕೂಲದ ದಿನ.. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭಸೂಚನೆ. ಲೇವಾದೇವಿ ವ್ಯವಹಾರ ಬೇಡ. ಸಂಸಾರದಲ್ಲಿ ಹುಳಿ ಹಿಂಡುವವರಿಗೆ ಮುಖಭಂಗ. ಹಿರಿಯರ ಆಸ್ತಿ ಜೋಪಾನಕ್ಕೆ ಕ್ರಮ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ವೃಶ್ಚಿಕ:

ವಿವಿಧ ಬಗೆಯ ವೃತ್ತಿಗಳವರಿಗೆ ಹಿತಾನುಭವ.. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿ ಇಲ್ಲ. ಸರ್ಕಾರಿ ಅಧಿಕಾರಿಗಳಿಗೆ ಪುಢಾರಿಗಳ ಕಾಟ. ಉನ್ನತ ರಾಜಕಾರಣಿಗಳಿಗೆ ಅಧಿಕಾರ ದಾಹ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣೇಶ ಸ್ತೋತ್ರ, ಶಿವ ಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ. 

ಧನು:

ಪ್ರತಿಭೆ ಕೌಶಲದಿಂದ ಗೌರವ ಪ್ರಾಪ್ತಿ.. ಉದ್ಯೋಗ ಘಟಕದ ಕಾರ್ಯ ನಿರ್ವಹಣೆಗೆ ಹೊಸ ರೂಪ. ಪರಿಸರದ ಸ್ವರೂಪ ಬವಣೆಗೆ ಆದ್ಯತೆ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಹಿರಿಯರ ಆರೋಗ್ಯದ ಕುರಿತು ಕಾಳಜಿ. ಗಣೇಶ ಕವಚ, ಶಿವಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.

ಮಕರ:

ಕೆಲಸದ ಒತ್ತಡದ ನಡುವೆ ಆನಂದದ ಕ್ಷಣಗಳು.. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಪರೀಕ್ಷೆಗಳಲ್ಲಿ ವಿಜಯ. ಬಂಧುವರ್ಗದಲ್ಲಿ ವೈಷಮ್ಯ ನಿವಾರಣೆ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಮಕ್ಕಳನ್ನು ಸಾಕುಪ್ರಾಣಿಗಳಿಂದ ದೂರವಿಡಿ. ಗಣೇಶ ಕವಚ, ಮಹಾಲಕ್ಷ್ಮಿ ಅಷ್ಟಕ, ಹನುಮಾನ್ ಚಾಲೀಸಾ ಓದಿ.

ಕುಂಭ.

ಉದ್ಯೋಗ, ವ್ಯವಹಾರಗಳಲ್ಲಿ ಯಥಾರೀತಿಯ ಅನುಭವ.. ಸರ್ಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿಗಳು. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತೃಪ್ತಿಯ ಅನುಭವ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ಹಿರಿಯ ಅಧಿಕಾರಿಗಳಿಂದ ಸರ್ವವಿಧ ಸಹಾಯ.. ಎಲ್ಲ ಬಗೆಯ ಕಾರ್ಯಗಳು  ಮುನ್ನಡೆ. ಸ್ವಂತ ಉದ್ಯಮದಲ್ಲಿ ಹೊಸ ವಿಭಾಗ  ಆರಂಭ.  ದೇವತಾ ಸಾನ್ನಿಧ್ಯಕ್ಕೆ ಭೇಟಿ. ಮಕ್ಕಳ ಅಧ್ಯಯನಾಸಕ್ತಿಯ ಕಡೆಗೆ ಗಮನ ಇರಲಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ಟಿಜಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.