ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಹೈದರಾಬಾದ್‌ನ ಕ್ಷೇತ್ರ ಮಟ್ಟದ ಚೆಸ್ ಟೂರ್ನಿಗೆ ಆಯ್ಕೆ

Ambika Vidyalaya: ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಹೈದರಾಬಾದ್‌ನ ಕ್ಷೇತ್ರ ಮಟ್ಟದ ಚೆಸ್ ಟೂರ್ನಿಗೆ ಆಯ್ಕೆಯಾಗಿದ್ದಾರೆ.

Aug 29, 2026 - 14:44
Aug 29, 2026 - 14:45
ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಹೈದರಾಬಾದ್‌ನ ಕ್ಷೇತ್ರ ಮಟ್ಟದ ಚೆಸ್ ಟೂರ್ನಿಗೆ ಆಯ್ಕೆ

ಪುತ್ತೂರು: ಈಚೆಗೆ ಹಾಸನದ ಭೂದೇಶ್ವರ ಮಠದಲ್ಲಿ, ವಿದ್ಯಾಭಾರತಿ ಪ್ರಾಂತೀಯ ಮಟ್ಟದ ಚೆಸ್ ಟೂರ್ನಿ ನಡೆಯಿತು. ಇಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ. ಈ ಮೂಲಕ ಹೈದರಾಬಾದ್‌ನಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಆಯೋಜನೆಗೊಂಡಿರುವ ಕ್ಷೇತ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. 

ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ, ಪೆರ್ನೆಯ ನಿವಾಸಿ ಗಿರೀಶ ಗೌಡ ಹಾಗೂ ಸುಮಿತ್ರಾ ದಂಪತಿಯ ಪುತ್ರ 10ನೇ ತರಗತಿಯ ಸಾತ್ವಿಕ್ ಜಿ ದ್ವಿತೀಯ ಸ್ಥಾನಕ್ಕೆ ಭಾಜನರಾಗಿದ್ದಾರೆ.

ಬಾಲವರ್ಗದ ಬಾಲಕರ ವಿಭಾಗದಲ್ಲಿ, ಉಪ್ಪಿನಂಗಡಿ ನೆಕ್ಕಿಲಾಡಿಯ ಡಾ.ಸುಪ್ರೀತ್ ಜೋಯಲ್ ಲೋಬೋ ಮತ್ತು ಡಾ.ಶೈನಿ ಪಾಯಸ್  ದಂಪತಿಯ ಪುತ್ರ 7ನೇ ತರಗತಿಯ ಸಂಹಿತ್ ಜೊಸ್ಸಿ ಲೋಬೋ, ಕಾಣಿಯೂರಿನ ಅರವಿಂದ ಕುಮಾರ್ ಕೆ ಹಾಗೂ ಜ್ಯೋತಿ ಕುಮಾರಿ ಕೆ ದಂಪತಿಯ ಪುತ್ರ 7ನೇ ತರಗತಿಯ ರತುಲ್ ಅದ್ವೈತ್, ಕುಂಜುರ್ ಪಂಜದ ಶ್ರೀನಿವಾಸ ಮಯ್ಯ ಡಿ ಮತ್ತು ಜಯಲಕ್ಷ್ಮೀ ಎಸ್ ಮಯ್ಯ ದಂಪತಿಯ ಪುತ್ರ 7ನೇ ತರಗತಿಯ ಮಯೂರ್ ಎಸ್ ಮಯ್ಯ, ಕಲ್ಲಾರೆಯ ಪ್ರವೀಣ್ ರೈ ಸಿ ಹಾಗೂ ತೃಪ್ತಿ ರೈ ದಂಪತಿಯ ಪುತ್ರ 7ನೇ ತರಗತಿಯ ತ್ರಿನಯ್ ರೈ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ, ಪೆರ್ನೆಯ ನಿವಾಸಿ ಗಿರೀಶ ಗೌಡ ಮತ್ತು ಸುಮಿತ್ರ ದಂಪತಿಯ ಪುತ್ರಿ 8ನೇ ತರಗತಿಯ ಸಾನ್ವಿ ಜಿ, ಸಂಪ್ಯಾದ ರವಿಕುಮಾರ ಕೆ ಹಾಗೂ ಸುಮಿತ್ರ ಕೆ ದಂಪತಿಯ ಪುತ್ರಿ 8ನೇ ತರಗತಿಯ ನೈನಿಕ ಎ.ಆರ್, ದರ್ಬೆಯ ಕೆ.ಜಿ.ಮುರಳೀಧರ ಮತ್ತು ಕೆ.ಉಷಾ ಮುರಳೀಧರ ದಂಪತಿಯ ಪುತ್ರಿ 8ನೇ ತರಗತಿಯ ಕೆ.ಎಂ.ಶಮಿತ ಭಟ್, ಪಡೀಲ್'ನ ನಿವಾಸಿ ಸಂಜೀವ ರಂಜನ್ ಹಾಗೂ ಅರ್ಪಣಾ ಕುಮಾರಿ ದಂಪತಿಯ ಪುತ್ರಿ 8ನೇ ತರಗತಿಯ ಶಾಂಭವಿ ರಂಜನ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.