MG Hector Tomahawk PHEV: ಹೊಸ ಎಂಜಿ ಹೆಕ್ಟರ್ ಟೊಮಾಹಾಕ್ ಪಿಹೆಚ್ಇವಿ ಬಿಡುಗಡೆ.. ಬೆಲೆ ಎಷ್ಟು?
MG Hector Tomahawk PHEV: ನೂತನ 2026ರ 'ಎಂಜಿ ಹೆಕ್ಟರ್ ಟೊಮಾಹಾಕ್ ಪಿಹೆಚ್ಇವಿ' ಎಸ್‌ಯುವಿ ಇಂದು ಬಿಡುಗಡೆಗೊಂಡಿದೆ.
ನೂತನ 2026ರ ಎಂಜಿ ಹೆಕ್ಟರ್ ಟೊಮಾಹಾಕ್ ಪಿಹೆಚ್ಇವಿ (MG Hector Tomahawk PHEV) ಎಸ್‌ಯುವಿ ಇಂದು ಬಿಡುಗಡೆಗೊಂಡಿದೆ. ಇದೊಂದು ಪ್ಲಗ್-ಇನ್ ಹೈಬ್ರಿಡ್ ಮಾಡೆಲ್ ಆಗಿದೆ.
ಈ ಕಾರು ರೂ.25.70 ಲಕ್ಷದಿಂದ ರೂ.27.80 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬಾಸ್ (ಬ್ಯಾಟರಿ-ಆಸ್-ಎ-ಸರ್ವಿಸ್) ಯೋಜನೆಯಡಿಯೂ ಲಭ್ಯವಿದ್ದು, ರೂ. 21.79 ಬೆಲೆಯನ್ನು ಹೊಂದಿದೆ. ಪ್ರತಿ ಕಿ.ಮೀಗೆ ರೂ.3.2 ಪಾವತಿಸಬೇಕು. ಎಕ್ಸ್‌ಕ್ಯೂಸಿವ್ (Exclusive) ಹಾಗೂ ಎಸೆನ್ಸ್ (Essence) ಎಂಬ ರೂಪಾಂತರಗಳೊಂದಿಗೂ ಸಿಗುತ್ತದೆ.
ಇದು ಬಾಕ್ಸಿ ಸಿಲೂಯೆಟ್ ವಿನ್ಯಾಸವನ್ನು ಪಡೆದಿದ್ದು, ದೊಡ್ಡದಾದ ಬ್ಲ್ಯಾಕ್ ಗ್ರಿಲ್‌ನ್ನು ಪಡೆದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಲಾರ್ಜ್ ವಿಂಡೋಗಳು, ಬ್ಲ್ಯಾಕ್ ರೂಫ್ ರೈಲ್ ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ 18-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
ಹೊಸ 'ಎಂಜಿ ಹೆಕ್ಟರ್ ಟೊಮಾಹಾಕ್' ಎಸ್‌ಯುವಿಯು ಪರ್ಲ್ ವೈಟ್, ಸ್ಟಾರಿ ಬ್ಲ್ಯಾಕ್, ಅರೋರಾ ಸಿಲ್ವರ್, ಸೆಲಾಡಾನ್ ಬ್ಲೂ, ಟರ್ಕೋಯಿಸ್ ಗ್ರೀನ್ ಮತ್ತು ಶ್ಯಾಡೋ ಗೋಲ್ಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 4745 ಎಂಎಂ ಉದ್ದ, 2130 ಎಂಎಂ ಅಗಲ, 1770 ಎಂಎಂ ಎತ್ತರ ಹಾಗೂ 2810 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.
ಈ ಕಾರು 7 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 192 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ.
ಇದು ಶಕ್ತಿಶಾಲಿಯಾದ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ + 20.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರುವ ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಎಲೆಕ್ಟ್ರಿಕ್ ಮೋಡ್‌ನಲ್ಲಿ 115 ಕಿ.ಮೀ ರೇಂಜ್ ನೀಡುತ್ತದೆ. ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿದರೆ, ಒಟ್ಟಾರೆ 1100 ಕಿ.ಮೀ ಓಡುತ್ತದೆ.
ನೂತನ 'ಎಂಜಿ ಹೆಕ್ಟರ್ ಟೊಮಾಹಾಕ್' ಎಸ್‌ಯುವಿ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 8.8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10-ಸ್ಪೀಕರ್ ಇನ್ಫಿನಿಟಿ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ಡ್ರೈವ್, ಕನೆಕ್ಟ್ಡ್ ಕಾರ್ ಟೆಕ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಫ್ರಂಟ್-ರೇರ್ ಪಾರ್ಕಿಂಗ್ ಸೆನ್ಸರ್ಸ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.