Maruti Suzuki Ertiga: ಮಾರುತಿ ಸುಜುಕಿ ಎರ್ಟಿಗಾ ಜನಪ್ರಿಯ ಎಂಪಿವಿಯಾಗಿದೆ. ಈ ಕಾರಿಗೆ ಗ್ರಾಹಕರು ಕೂಡ ಮನಸೊತ್ತಿದ್ದಾರೆ. ಈ 2026ರ ಸೆಪ್ಟೆಂಬರ್ ತಿಂಗಳಲ್ಲೂ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 16,911 ಯುನಿಟ್ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 12,115 ಯುನಿಟ್ಗಳನ್ನು ಮಾರಲಾಗಿತ್ತು. ಇದರೊಂದಿಗೆ ವರ್ಷದಿಂದ ವರ್ಷಕ್ಕೆ (YoY) ಶೇಕಡ +40% ಬೆಳವಣಿಗೆಯಾಗಿದೆ.
ಈ ಎಂಪಿವಿ ರೂ.8.90 ಲಕ್ಷದಿಂದ ರೂ.13.14 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಜಡ್ಎಕ್ಸ್ಐ ಮತ್ತು ಜಡ್ಎಕ್ಸ್ಐ ಪ್ಲಸ್ ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ.
ಇದು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದ್ದು, ನೋಡಲು ಕೂಡ ಉತ್ತಮವಾಗಿದೆ. ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆಬರ್ನ್ ರೆಡ್ ಹಾಗೂ ಪರ್ಲ್ ಮೆಟಾಲಿಕ್ ಆಕ್ಸ್ಫರ್ಡ್ ಬ್ಲೂ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.
ನೂತನ 'ಎರ್ಟಿಗಾ'ದಲ್ಲಿ 7-ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಪ್ರಯಾಣ ಮಾಡಬಹುದು. ಜಾಸ್ತಿ ಲಗೇಜ್ ತೆಗೆದುಕೊಂಡು ಹೋಗಲು 209 ಲೀ.ನಷ್ಟು ಬೂಟ್ ಸ್ಪೇಸ್ನ್ನು ಪಡೆದಿದೆ.
ಈ ಎಂಪಿವಿ ಶಕ್ತಿಶಾಲಿಯಾದ ಪವರ್ಟ್ರೇನ್ನ್ನು ಒಳಗೊಂಡಿದೆ. 1.5-ಲೀ. ಪೆಟ್ರೋಲ್ ಮತ್ತು 1.5-ಲೀ. ಸಿಎನ್ಜಿ ಎಂಜಿನ್ನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್ಬಾಕ್ಸ್ನ್ನು ಹೊಂದಿದೆ. 20 ರಿಂದ 26.11 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ.
ಇದು 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಕ್ರೂಸ್ ಕಂಟ್ರೋಲ್ ಸೇರಿದಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಹೊಸ 'ಎರ್ಟಿಗಾ' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್ಬ್ಯಾಗ್ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಗಳನ್ನು ಒಳಗೊಂಡಿದೆ.