ಅಕ್ಷಯ ಕಾಲೇಜು: ಎಲೈಟ್ ಅಸೋಸಿಯೇಷನ್ ಚಟುವಟಿಕೆಗಳ ಉದ್ಘಾಟನೆ
Akshaya College: ಪುತ್ತೂರಿನ ಅಕ್ಷಯ ಕಾಲೇಜಿನಲ್ಲಿ ಎಲೈಟ್ ಅಸೋಸಿಯೇಷನ್ & ಐಕ್ಯೂಎಸಿ ವತಿಯಿಂದ, ಆಂತರಿಕ ವಿನ್ಯಾಸ ವಿಭಾಗದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಗ್ರಾಫಿಕ್ ವಿನ್ಯಾಸ ಕಾರ್ಯಾಗಾರವು ಈಚೆಗೆ ನಡೆಯಿತು.
ಪುತ್ತೂರು: ಇಲ್ಲಿನ ಅಕ್ಷಯ ಕಾಲೇಜಿನಲ್ಲಿ ಎಲೈಟ್ ಅಸೋಸಿಯೇಷನ್ & ಐಕ್ಯೂಎಸಿ ವತಿಯಿಂದ, ಆಂತರಿಕ ವಿನ್ಯಾಸ ವಿಭಾಗದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಗ್ರಾಫಿಕ್ ವಿನ್ಯಾಸ ಕಾರ್ಯಾಗಾರವು ಈಚೆಗೆ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಅದೀಕ್ಷಾ ಎಸ್ ಪೂಜಾರಿ ಭಾಗವಹಿಸಿದ್ದರು. ಗ್ರಾಫಿಕ್ ವಿನ್ಯಾಸದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಪ್ರಾಯೋಗಿಕ ಮಾರ್ಗದರ್ಶನ ನೀಡಿದರು.
ಈ ವೇಳೆ ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ, ಎಲೈಟ್ ಅಸೋಸಿಯೇಷನ್ ಸಂಯೋಜಕಿ ನಿವೇದಿತಾ ಜೆ.ಎಸ್, ವಿದ್ಯಾರ್ಥಿ ಕಾರ್ಯದರ್ಶಿ ಸ್ಪೂರ್ತಿ ಕೆ.ಎನ್ ಮತ್ತು ಸಹ ಕಾರ್ಯದರ್ಶಿ ಶರತ್ ಉಪಸ್ಥಿತರಿದ್ದರು.
ನಿವೇದಿತಾ ಜೆ.ಎಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಸ್ಪೂರ್ತಿ ಸ್ವಾಗತಿಸಿದರು. ನಿಖಿತಾ & ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿ ಶರತ್ ವಂದಿಸಿದರು. ದುರ್ಗಾಲಕ್ಷ್ಮಿ ನಿರೂಪಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.