ಹಿರಿಯ ನಟಿ ಸಾಹುಕಾರ್ ಜಾನಕಿ ನಿಧನ

Sowcar Janaki: ಹಿರಿಯ ಬಹುಭಾಷಾ ನಟಿ ಸಾಹುಕಾರ್ ಜಾನಕಿ, ವಯೋಸಹಜ ಕಾಯಿಲೆಯಿಂದ ಇಂದು (ಶುಕ್ರವಾರ) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧಾನರಾಗಿದ್ದಾರೆ.

Aug 21, 2026 - 17:11
ಹಿರಿಯ ನಟಿ ಸಾಹುಕಾರ್ ಜಾನಕಿ ನಿಧನ

ಹಿರಿಯ ಬಹುಭಾಷಾ ನಟಿ ಸಾಹುಕಾರ್ ಜಾನಕಿ (Sowcar Janaki), ವಯೋಸಹಜ ಕಾಯಿಲೆಯಿಂದ ಇಂದು (ಶುಕ್ರವಾರ) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧಾನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.   
 
ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ 450ಕ್ಕೂ ಸಿನಿಮಾಗಳಲ್ಲಿ ನಟಿಸಿದ್ದಾರೆ. 1931 ಡಿಸೆಂಬರ್ 12 ರಂದು ಆಂಧ್ರಪ್ರದೇಶ ರಾಜಮಂಡ್ರಿಯಲ್ಲಿ ಜನಿಸಿದ್ದರು. 
 
1950ರಲ್ಲಿ ಬಿಡುಗಡೆಗೊಂಡ ತೆಲುಗಿನ 'ಸಾಹುಕಾರ್' ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಆ ಬಳಿಕ 'ಸಾಹುಕಾರ್' ಜಾನಕಿ ಎಂಬ ಹೆಸರು ಬಂದಿತು. 
 
ಕನ್ನಡದಲ್ಲಿ ದೇವಕನ್ನಿಕಾ, ಸ್ಕೂಲ್ ಮಾಸ್ಟರ್, ಕನ್ಯಾರತ್ನ, ತಾಯಿಗೆ ತಕ್ಕ ಮಗ ಹಾಗೂ ಶಬ್ದವೇದಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ, ಕಲೈಮಾಮಣಿ ಮತ್ತು ನಂದಿ ಪ್ರಶಸ್ತಿಗಳು ಲಭಿಸಿವೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.