ಮಾರುತಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ 14ನೇ ವಾರ್ಷಿಕೋತ್ಸವ - ಆಟೋಟ & ತುಳು ನಾಟಕ ಪ್ರದರ್ಶನ

Bantwal: ಇಲ್ಲಿನ ವಿಟ್ಲ ಪಡ್ನೂರು ಗ್ರಾಮದ ಕೋಡಪದವು 'ಶ್ರೀ ಮಾರುತಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್'ನ 14ನೇ ವಾರ್ಷಿಕೋತ್ಸವ ಪ್ರಯುಕ್ತ, ವಿವಿಧ ಕ್ರೀಡಾ ಸ್ಪರ್ಧೆಗಳು, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ.

Aug 28, 2026 - 19:47
ಮಾರುತಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ 14ನೇ ವಾರ್ಷಿಕೋತ್ಸವ - ಆಟೋಟ & ತುಳು ನಾಟಕ ಪ್ರದರ್ಶನ

ಬಂಟ್ವಾಳ: ಇಲ್ಲಿನ ವಿಟ್ಲ ಪಡ್ನೂರು ಗ್ರಾಮದ ಕೋಡಪದವು 'ಶ್ರೀ ಮಾರುತಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್'ನ 14ನೇ ವಾರ್ಷಿಕೋತ್ಸವ ಪ್ರಯುಕ್ತ, ವಿವಿಧ ಕ್ರೀಡಾ ಸ್ಪರ್ಧೆಗಳು, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ.

ವಿವಿಧ ಆಟೋಟ ಸ್ಪರ್ಧೆಗಳು: ಸೆಪ್ಟೆಂಬರ್ 06 ಭಾನುವಾರ ಬೆಳಗ್ಗೆ 9 ಗಂಟೆಗೆ ಶುರುವಾಗಲಿದೆ. 

ಸನ್ಮಾನ ಸಭಾ ಕಾರ್ಯಕ್ರಮ & ಬಹುಮಾನ ವಿತರಣೆ: ಸೆಪ್ಟೆಂಬರ್ 14 ಸೋಮವಾರ ಸಂಜೆ 6.30 ಗಂಟೆಗೆ ಆರಂಭವಾಗಲಿದೆ. ಈ ವೇಳೆ ಲಕ್ಷ್ಮಿ ಕೆ.ಆರ್ ಭಟ್ ಮತ್ತು ಡಾ.ಕೆ.ರಾಮಕೃಷ್ಣ ಭಟ್ ಮಾಳ ಅವರಿಗೆ ಗೌರವ ಸನ್ಮಾನವನ್ನು ಏರ್ಪಡಿಸಲಾಗಿದೆ.

ಮನೋರಂಜನಾ ಕಾರ್ಯಕ್ರಮ: ಅಂದು ರಾತ್ರಿ 8 ಗಂಟೆಗೆ ಜಿಲ್ಲಾ ತುಳು ನಾಟಕೋತ್ಸವ ಪ್ರಶಸ್ತಿ ಪುರಸ್ಕೃತ 'ಉಡಲ್ ಕಲಾವಿದೆರ್' ಕನ್ಯಾನ ಅಭಿನಯಿಸುವ ಜನಪ್ರಿಯ ತುಳು ಸಾಂಸಾರಿಕ ನಾಟಕ 'ಮದಿಮೆದ ಇಲ್ಲಡ್' ಪ್ರದರ್ಶನಗೊಳ್ಳಲಿದೆ.

ಈ ವಾರ್ಷಿಕೋತ್ಸವ ಸಮಾರಂಭಕ್ಕೆ ಸಾರ್ವಜನಿಕರು ಹಾಗೂ ಅಭಿಮಾನಿಗಳು ತನು-ಮನ-ಧನಗಳಿಂದ ಸಹಕರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ಕೋರಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.