ಈಶ್ವರಮಂಗಲ: ಪಂಚಲಿಂಗೇಶ್ವರ ದೇಗುಲದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ & ಸಾಧಕರಿಗೆ ಸನ್ಮಾನ

Ishwaramangala: ಇಲ್ಲಿನ ಪಂಚಲಿಂಗೇಶ್ವರ ದೇಗುಲದ ಸಭಾಭವನದಲ್ಲಿ, 'ಶ್ರೀ ಪಂಚಲಿಂಗೇಶ್ವರ ವರಮಹಾಲಕ್ಷ್ಮಿ ಪೂಜಾ ಸಮಿತಿ' ವತಿಯಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.

Aug 29, 2026 - 12:25
Aug 29, 2026 - 12:29
ಈಶ್ವರಮಂಗಲ: ಪಂಚಲಿಂಗೇಶ್ವರ ದೇಗುಲದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ & ಸಾಧಕರಿಗೆ ಸನ್ಮಾನ

ಪುತ್ತೂರು (ಈಶ್ವರಮಂಗಲ): ಇಲ್ಲಿನ ಪಂಚಲಿಂಗೇಶ್ವರ ದೇಗುಲದ ಸಭಾಭವನದಲ್ಲಿ, 'ಶ್ರೀ ಪಂಚಲಿಂಗೇಶ್ವರ ವರಮಹಾಲಕ್ಷ್ಮಿ ಪೂಜಾ ಸಮಿತಿ' ವತಿಯಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.    

ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರ ಮಾರ್ಗದರ್ಶನದಲ್ಲಿ, ಪುರೋಹಿತ ವೇದಮೂರ್ತಿ ನಾಗರಾಜ ಭಟ್ ಸುಳ್ಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. 

ಬೆಳಗ್ಗೆ ಸಂಕಲ್ಪ, ವ್ರತಧಾರಣೆ, ಮಹಾಪೂಜೆ, ಮಧ್ಯಾಹ್ನ ಸಭಾ ಕಾರ್ಯಕ್ರಮ ಮತ್ತು ಧಾರ್ಮಿಕ ಭಾಷಣವು ಜರುಗಿತು. 

ಪಡ್ನೂರು ಬಾಲಗೋಕುಲದ ತರಬೇತಿದಾರರು ಮತ್ತು ವಿದ್ಯಾಸರಸ್ವತಿ ಶಿಶುಮಂದಿರದ ಆಡಳಿತ ಮಂಡಳಿ ಸದಸ್ಯೆ ಪವಿತ್ರಾ ವಿಜಯನಾರಾಯಣ ಕುಳೂರು ಧಾರ್ಮಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ, ಯು.ಆರ್.ಪ್ರಾಪರ್ಟೀಸ್‌ನ ಉಜ್ಜಲ್ ಕುಮಾರ್ ಪ್ರಭು ಭಾಗವಹಿಸಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸನ್ಮಾನ:

ಶೈಕ್ಷಣಿಕ ಕ್ಷೇತ್ರ: ಅನನ್ಯ ಎ (ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ - ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ). 

ದೇಶ ಸೇವೆ: ಚಂದ್ರಶೇಖರ ಗೌಡ ಉರಿಕ್ಕಾಡಿ (ನಿವೃತ್ತ ಹವಾಲ್ದಾರ್, ಭಾರತೀಯ ಸೇನೆ). 

ಕೃಷಿ ಕ್ಷೇತ್ರ: ಪ್ರಫುಲ್ಲರಾಜೇಶ್ ರೈ ಮದಕ ಡೈರಿ/ ಹೈನುಗಾರಿಕೆ).

ಅಂಗನವಾಡಿ ಕಾರ್ಯಕರ್ತೆಯರು: ಜ್ಯೋತಿ ಎಂ, ಸವಿತಾ ಬಿ ರೈ, ಸಾವಿತ್ರಿ ಪಿ, ಸೌಮ್ಯ ಎ, ಸುಂದರಿ ಇ, ಜುಬೇದಾ ಎಸ್, ಸೀತಮ್ಮ, ರೂಪವಾಣಿ ಎಸ್ (ಮೈರೋಳು), ಆಶಾಕಿರಣ್ ಎಸ್, ಮೋಕ್ಷಿಣಿ, ಶೈಲಜಾ ಕೆ.ಆರ್, ಸೀತಾರತ್ನ ಬಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಗಣ್ಯ ವ್ಯಕ್ತಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮಗಳ ನಂತರ, ಮಧ್ಯಾಹ್ನ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.