iQOO Z11: ಐಕ್ಯೂಒ ಜಡ್11 ಫೋನ್‌ ಮಾರಾಟ ಶುರು.. ಬೆಲೆ ಎಷ್ಟು.. ವಿಶೇಷತೆಗಳೇನು?

iQOO Z11: ಹೊಚ್ಚ ಹೊಸ 'ಐಕ್ಯೂಒ ಜಡ್11' ಸ್ಮಾರ್ಟ್‌ಫೋನ್‌, ಮಾರಾಟವು ಶುರುವಾಗಿದೆ.

Aug 26, 2026 - 15:01
iQOO Z11: ಐಕ್ಯೂಒ ಜಡ್11 ಫೋನ್‌ ಮಾರಾಟ ಶುರು.. ಬೆಲೆ ಎಷ್ಟು.. ವಿಶೇಷತೆಗಳೇನು?

ಹೊಚ್ಚ ಹೊಸ ಐಕ್ಯೂಒ ಜಡ್11 (iQOO Z11) ಸ್ಮಾರ್ಟ್‌ಫೋನ್‌ ಈಚೆಗೆ ಆದ್ದೂರಿಯಾಗಿ ಬಿಡುಗಡೆಗೊಂಡಿತ್ತು. ಸದ್ಯ ಮಾರಾಟವು ಶುರುವಾಗಿದೆ. ಆ.25 ಮಂಗಳವಾರದಿಂದ ಗ್ರಾಹಕರ ಖರೀದಿಗೆ ಸಿಗುತ್ತಿದೆ. 

ಇದು 6GB RAM + 128GB, 8GB RAM + 128GB, 8GB RAM + 256GB ಮತ್ತು 12GB RAM + 256GB ಇಂಟರ್ನಲ್ ಸ್ಟೋರೇಜ್‌ನ್ನು ಹೊಂದಿದೆ. ಕ್ರಮವಾಗಿ ರೂ.34,999, ರೂ.39,999, ರೂ.44,999 ಮತ್ತು ರೂ.49,999 ಬೆಲೆಯನ್ನು ಹೊಂದಿದೆ. 

7,050mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 44W ಫಾಸ್ಟ್ ಚಾರ್ಜರ್ ಆಯ್ಕೆಯನ್ನು ಬೆಂಬಲಿಸುತ್ತದೆ. ಆಂಡ್ರಾಯ್ಡ್ ಚಾಲಿತ  ಸ್ಮಾರ್ಟ್‌ಫೋನ್‌ ಆಗಿದ್ದು, 6.83-ಇಂಚಿನ 1.5K (2800×1260p) 3D ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. 144Hz ರಿಫ್ರೆಶ್ ರೇಟ್, HDR10+ ಮತ್ತು 2,000 nits ಬ್ರೈಟ್‌ನೆಸ್‌ನ್ನು ಪಡೆದಿದೆ.

ಡುಯಲ್-ಸಿಮ್, ಟೈಪ್-ಸಿ ಯುಎಸ್‌ಬಿ ಪೋರ್ಟ್, ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ನ್ನು ಹೊಂದಿದೆ. 50MP ಮೇನ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7500 ಟರ್ಬೊ ಪ್ರೊಸೆಸರ್‌ನ್ನು ತನ್ನದಾಗಿಸಿಕೊಂಡಿದೆ. ಅರೋರಾ ಗ್ರೀನ್ & ಸೆಲೆಸ್ಟಿಯಲ್ ಬ್ಲೂ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.