ಪುತ್ತೂರು: ಹೆಚ್‌ಪಿಆರ್‌ ಇನ್‌ಸ್ಟಿಟ್ಯೂಟ್‌ನಿಂದ ಅದ್ಧೂರಿ ಓಣಂ ಆಚರಣೆ

Puttur: ಇಲ್ಲಿನ ಪುತ್ತೂರು ಗಾರ್ಡನ್‌ನಲ್ಲಿ ಹೆಚ್‌ಪಿಆರ್‌ ಇನ್‌ಸ್ಟಿಟ್ಯೂಟ್‌ ಆಫ್ ನರ್ಸಿಂಗ್ & ಪ್ಯಾರಾ ಮೆಡಿಕಲ್ ಸನ್ಸಸ್ ವತಿಯಿಂದ 'ಓಣಂ ಸಂಭ್ರಮಾಚರಣೆ–2026'ನ್ನು ಈಚೆಗೆ ಅದ್ಧೂರಿಯಾಗಿ ಆಚರಿಸಲಾಯಿತು.

Aug 24, 2026 - 17:59
ಪುತ್ತೂರು: ಹೆಚ್‌ಪಿಆರ್‌ ಇನ್‌ಸ್ಟಿಟ್ಯೂಟ್‌ನಿಂದ ಅದ್ಧೂರಿ ಓಣಂ ಆಚರಣೆ

ಪುತ್ತೂರು: ಇಲ್ಲಿನ ಪುತ್ತೂರು ಗಾರ್ಡನ್‌ನಲ್ಲಿ ಹೆಚ್‌ಪಿಆರ್‌ ಇನ್‌ಸ್ಟಿಟ್ಯೂಟ್‌ ಆಫ್ ನರ್ಸಿಂಗ್ & ಪ್ಯಾರಾ ಮೆಡಿಕಲ್ ಸನ್ಸಸ್ ವತಿಯಿಂದ 'ಓಣಂ ಸಂಭ್ರಮಾಚರಣೆ–2026'ನ್ನು ಈಚೆಗೆ ಅದ್ಧೂರಿಯಾಗಿ ಆಚರಿಸಲಾಯಿತು.

ಮಹಾಬಲಿಯ ಸ್ವಾಗತ ಮೆರವಣಿಗೆಯೊಂದಿಗೆ, ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಆ ಬಳಿಕ ಪೂಜಾ ವಿಧಿ ವಿಧಾನಗಳು, ನೃತ್ಯ ಪ್ರದರ್ಶನಗಳು ಮತ್ತು ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂಭ್ರಮಕ್ಕೆ ಮೆರುಗು ನೀಡಿದವು. ಸಾಂಪ್ರದಾಯಿಕ ಓಣಂ ಆಚರಣೆಯ ಅಂಗವಾಗಿ ವಿವಿಧ ಮನೋರಂಜನಾ ಹಾಗೂ ಕ್ರೀಡಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು.

ಪ್ರಾಂಶುಪಾಲೆ ಇವ್ನಿಸ್ ಆಗ್ನೆಸ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ಸ್ಟೂಡೆಂಟ್ ವೆಲ್ಫೇರ್ ಎಜುಕೇಷನ್ ಟ್ರಸ್ಟ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಜೋಮನ್ ಎಂ.ಜೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಿನಿಮಾ, ಧಾರಾವಾಹಿ ಹಾಗೂ ರಂಗಭೂಮಿ ಕಲಾವಿದ & ಆರ್ಯಭಟ ಪ್ರಶಸ್ತಿ ಪುರಸ್ಕೃತ ದಯಾನಂದ ಅಗಲ್ಪಾಡಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು.

ಉಪಪ್ರಾಂಶುಪಾಲೆ ಜಲಜಾ, ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಶಾಹಿದ್ ಸೇರಿದಂತೆ ಸಂಸ್ಥೆಯ ಬೋಧಕ - ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ರಿನಾದ ಹಾಗೂ ಅನ್ಸಿಫಾ ನಿರೂಪಿಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.