Amartha: ಸೆ.18ಕ್ಕೆ 'ಅಮರ್ಥ' ಸಿನಿಮಾ ಬಿಡುಗಡೆ

Amartha: ಶ್ರೀನಗರ ಕಿಟ್ಟಿ & ಮೇಘನಾ ರಾಜ್ ಅಭಿನಯದ ಕನ್ನಡ ಬಹುನಿರೀಕ್ಧಿತ 'ಅಮರ್ಥ' ಸಿನಿಮಾ, ಸೆ.18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Sep 13, 2026 - 14:44
Sep 13, 2026 - 15:44
Amartha: ಸೆ.18ಕ್ಕೆ 'ಅಮರ್ಥ' ಸಿನಿಮಾ ಬಿಡುಗಡೆ

ಶ್ರೀನಗರ ಕಿಟ್ಟಿ & ಮೇಘನಾ ರಾಜ್ ಅಭಿನಯದ ಕನ್ನಡ ಬಹುನಿರೀಕ್ಧಿತ ಅಮರ್ಥ (Amartha) ಸಿನಿಮಾ, ಸೆ.18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದು ಭಾವನಾತ್ಮಕ ಅಂಶಗಳ ಸುತ್ತ ಸಾಗುವ ಕಥೆಯನ್ನು ಆಧರಿಸಿದೆ. 

ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಂ ಜಂಟಿಯಾಗಿ ಆಕ್ಷನ್ ಕಟ್ ಹೇಳಿದ್ದು, ಪಂಚರಂಗಿ ಫಿಲಂಸ್ ಬ್ಯಾನರ್‌ನಡಿ ನಿರ್ಮಿಸಲಾಗಿದೆ. ಅರವಿಂದ್ ಬೋಳಾರ್, ಕೃತಿ ಶೆಟ್ಟಿ, ಪುಷ್ಪರಾಜ್ ಬೋಳಾರ್, ರೂಪಾ ವೋರ್ಕಾಡಿ ಮತ್ತು ಹರೀಶ್ ಹಿರಿಯೂರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಈ ಚಿತ್ರಕ್ಕೆ ಪಂಚಮ್ ಜೀವ್ ಮ್ಯೂಸಿಕ್ ನೀಡಿದ್ದು, ರಾಜು ಆರ್ಯನ್ ಸಂಕಲನ ಮಾಡಿದ್ದಾರೆ.  

ಇನ್ನು, 12 ವರ್ಷಗಳ ನಂತರ, 'ಅಮರ್ಥ' ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆ, 'ಬಹುಪರಾಕ್' ಮತ್ತು 'ಬುದ್ಧಿವಂತ 2' ಚಿತ್ರಗಳಲ್ಲಿ ನಟಿಸಿದ್ದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar TG ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.