ಪುತ್ತೂರು: ವಿಶ್ವ ಛಾಯಾಗ್ರಹಣ ದಿನ.. ಕೋನಡ್ಕ ವೇಣುಗೋಪಾಲರಿಗೆ ಸನ್ಮಾನ
Puttur: ವಿಶ್ವ ಛಾಯಾಗ್ರಹಣ ದಿನ'ದ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಸ್‌ಕೆಪಿಎ) ದ.ಕನ್ನಡ-ಉಡುಪಿ ಜಿಲ್ಲೆ & ಪುತ್ತೂರು ವಲಯದ ವತಿಯಿಂದ, ಹಿರಿಯ ಛಾಯಾಗ್ರಾಹಕ ವೇಣುಗೋಪಾಲ ಕೋನಡ್ಕ ಅವರನ್ನು ಸನ್ಮಾನಿಸಲಾಯಿತು.
ಪುತ್ತೂರು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಸ್‌ಕೆಪಿಎ), ದ.ಕನ್ನಡ-ಉಡುಪಿ ಜಿಲ್ಲೆ & ಪುತ್ತೂರು ವಲಯದ ವತಿಯಿಂದ 'ವಿಶ್ವ ಛಾಯಾಗ್ರಹಣ ದಿನ' ಆಯೋಜಿಸಲಾಗಿತ್ತು.
ರೋಟರಿ ಬ್ಲಡ್ ಬ್ಯಾಂಕ್ ಆವರಣದಲ್ಲಿ ಇಂದು (ಬುಧವಾರ) ನಡೆದ ಕಾರ್ಯಕ್ರಮದಲ್ಲಿ, ಬೆಟ್ಟಂಪಾಡಿ ಕೋನಡ್ಕ ನಿವಾಸಿ ವೇಣುಗೋಪಾಲ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಳೆದ 4 ದಶಕಗಳಿಂದ ಅವರು, ಛಾಯಾಗ್ರಹಣ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಅನುಭವ ಮತ್ತು ವೃತ್ತಿಪರ ಬದ್ಧತೆಯಿಂದ ಗುರುತಿಸಿಕೊಂಡಿದ್ದಾರೆ.

ಈ ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಕೆಪಿಎ ಪುತ್ತೂರು ವಲಯದ ಅಧ್ಯಕ್ಷ ಜಯಂತ್ ಗೌಡ ಕರ್ಕುಂಜ ವಹಿಸಿದ್ದರು.
ರೋಟರಿ ಕ್ಲಬ್ ಅಧ್ಯಕ್ಷ ರೊಟೇರಿಯನ್ ದತ್ತಾತ್ರೇಯ ರಾವ್, ಎಸ್‌ಕೆಪಿಎ ಸಹಕಾರಿ ಸಂಘದ ಸುದರ್ಶನ್ ರಾವ್, ಗೌರವಾಧ್ಯಕ್ಷ ರಘುಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಟ್ಟಪುಣಿ, ಕೋಶಾಧಿಕಾರಿ ಚಂದ್ರಶೇಖರ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಇದೇ ವೇಳೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.