ಈಶ್ವರಮಂಗಲ: 22ನೇ ವರ್ಷದ ಆಯುಧ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ
Ishwaramangala: ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 22ನೇ ವರ್ಷದ ಆಯುಧ ಪೂಜೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಈಚೆಗೆ ಬಿಡುಗಡೆಗೊಳಿಸಲಾಯಿತು.
ಈಶ್ವರಮಂಗಲ (ಪುತ್ತೂರು): ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 22ನೇ ವರ್ಷದ ಆಯುಧ ಪೂಜೆ ಅಂಗವಾಗಿ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಈಚೆಗೆ ಬಿಡುಗಡೆಗೊಳಿಸಲಾಯಿತು.
ಪ್ರಧಾನ ಅರ್ಚಕ ರವೀಂದ್ರ ಮಾಣಿಲತಾಯ ಅವರು ಆಮಂತ್ರಣ ಪತ್ರಿಕೆ ಹೊರತಂದರು. ಇಲ್ಲಿನ 'ಆಯುಧ ಪೂಜೆ ಸೇವಾ ಸಮಿತಿ' ನೇತೃತ್ವದಲ್ಲಿ, ನಾನಾ ಕಾರ್ಯಕ್ರಮಗಳನ್ನು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ.
ಈ ವೇಳೆ, ಆಯುಧ ಪೂಜೆ ಸೇವಾ ಸಮಿತಿ ಅಧ್ಯಕ್ಷ ಸನತ್ ಮೂಡಯೂರು, ಸಂದೀಪ್ ಕಾರಂತ್ ಈಶ್ವರಮಂಗಲ, ವಕೀಲ ಚಿನ್ಮಯಿ ಈಶ್ವರಮಂಗಲ, ಗೌರೀಶ್ ಈಶ್ವರಮಂಗಲ, ರಮಾನಂದ ಕೋರಿ ಗದ್ದೆ, ಪೂರ್ಣಚಂದ್ರ ನೆಲ್ಲಿತಡ್ಕ, ಅಮರನಾಥ ಆಳ್ವ ಈಶ್ವರಮಂಗಲ, ರಾಜೇಶ್ ಪಂಚೋಡಿ, ಜಯಂತ ಸುರುಳಿಮೂಲೆ, ಗಣೇಶ್ ವಜ್ರಮೂಲೆ, ಅನಿಲ್ ಬೆಳ್ಳಿಚಡವು, ಅಶೋಕ್ ಪಳನೀರು ಸೇರಿದಂತೆ ಹಲವು ಕಾರ್ಯಕರ್ತರು ಮತ್ತು ಸಮಿತಿ ಸದಸ್ಯರು ಹಾಜರಿದ್ದರು.
ಆಯುಧ ಪೂಜೆ ಪ್ರಯುಕ್ತ ಜರುಗುವ ಕಾರ್ಯಕ್ರಮಗಳಲ್ಲಿ, ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿವಂತೆ ಸಮಿತಿಯ ವತಿಯಿಂದ ಕೋರಲಾಗಿದೆ.