ದಿನ ಭವಿಷ್ಯ: ಇವತ್ತು ಯಾರಿಗೆ ಶುಭ?
Daily Horoscope: ಇಂದು (ಶನಿವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ವಾರದ ಸಾಧನೆಗಳಿಗೆ ತೃಪ್ತಿ ಪಡುವ ದಿನ.. ಕಟ್ಟಡ ನಿರ್ಮಾಪಕರಿಗೆ ಅನುಕೂಲ. ಕೃಷ್ಯುತ್ಪನ್ನಗಳ ಮಾರಾಟ ವೃದ್ಧಿ. ಅಪರೂಪದ ಬಂಧುಗಳ ಭೇಟಿ. ಹಿರಿಯ ಮನೆಯಲ್ಲಿ ಪಿತೃಕಾರ್ಯ. ಗಣೇಶ ಸ್ತೋತ್ರ, ವಿಶ್ವನಾಥಾಷ್ಟಕ, ಶನಿಮಹಾತ್ಮೆ ಓದಿ.
ವೃಷಭ:
ಹಣಕಾಸು ವ್ಯವಹಾರ ಸುಗಮ.. ಸರ್ಕಾರಿ ನೌಕರರಿಗೆ ಕೊಂಚ ಆತಂಕ.. ಹಿರಿಯರ ಮನೆಯಲ್ಲಿ ಪೂರ್ವಜರಿಗೆ ಶ್ರದ್ಧಾಂಜಲಿ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.ಗೃಹೋತ್ಪನ್ನ ಖಾದ್ಯಗಳಿಂದ ಅಧಿಕ ಆದಾಯ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ಮಿಥುನ:
ಹಳೆಯ ತೊಂದರೆಗಳಿಂದ ಬಿಡುಗಡೆ.. ಉದ್ಯೋಗಸ್ಥರಿಗೆ ಹಿತಶತ್ರುಗಳ ಪೀಡೆ. ವ್ಯವಹಾರಸ್ಥರಿಗೆ ಸಾಮಾನ್ಯ ಅನುಕೂಲ. ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ. ಗೃಹಿಣಿಯರು,ಮಕ್ಕಳಿಗೆ ನೆಮ್ಮದಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಕರ್ಕಾಟಕ:
ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ ನೆಮ್ಮದಿ.. ಪಾಲುದಾರಿಕೆ ವ್ಯವಹಾರ ಮುನ್ನಡೆ. ಭೂಮಿ ವ್ಯವಹಾರಸ್ಥರಿಗೆ ಉತ್ತಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ. ಹೊಸ ವ್ಯವಹಾರ ಆರಂಭಕ್ಕೆ ಚಿಂತನೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಾಪರಾಧ ಕ್ಷಮಾಪಣಾ ಸ್ತೋತ್ರ, ಗುರುಸ್ತೋತ್ರ ಓದಿ.
ಸಿಂಹ:
ಸ್ವಯಂ ಉದ್ಯೋಗಸ್ಥರಿಗೆ ಶುಭದಿನ.. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಹತ್ತಿರದ ದೇವಮಂದಿರಕ್ಕೆ ಸಂದರ್ಶನ.
ಕನ್ಯಾ:
ಎಣಿಸದ ವ್ಯಕ್ತಿಗಳಿಂದ ಧನಸಹಾಯ.. ಉದ್ಯೋಗಸ್ಥರಿಗೆ ಸಹೋದ್ಯೋಗಿಗಳ ಸಹಾಯ. ವ್ಯವಹಾರಸ್ಥರಿಂದ ಹೊಸ ಅವಕಾಶಗಳ ಹುಡುಕಾಟ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಪಂಚರತ್ನ, ನರಸಿಂಹ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ತುಲಾ:
ವಾರಾಂತ್ಯದಲ್ಲೇ ಕಾರ್ಯಗಳ ಪುನರ್ವ್ಯವಸ್ಥೆ.. ನಿವೇಶನ, ಮನೆ ಖರೀದಿ-ಮಾರಾಟ ವ್ಯವಹಾರದಲ್ಲಿ ಲಾಭ. ಕೃಷಿ ಉತ್ಪನ್ನ ಮಾರಾಟಗಾರರಿಗೆ ತೃಪ್ತಿಕರ ಲಾಭ. ಅಧ್ಯಾಪಕ ವೃತ್ತಿಯವರಿಗೆ ಕೆಲಸದ ಮಕ್ಕಳಿಗೆ ಪರೀಕ್ಷೆಯಲ್ಲಿ ಮಗ್ನತೆ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ವೃಶ್ಚಿಕ:
ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಸಮಾಧಾನ.. ಮಾಲಿಕ-ನೌಕರರ ಬಾಂಧವ್ಯ ವೃದ್ಧಿ. ಆಸ್ತಿ, ಮನೆ ದಳ್ಳಾಳಿಗಳಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ ಸ್ವಲ್ಪಮಟ್ಟಿನ ಲಾಭ. ಕುಟುಂಬದ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ವೆಂಕಟೇಶ್ವರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಧನು:
ಹೊಂದಾಣಿಕೆ, ಕಾರ್ಯನಿಷ್ಠೆಗಳಿಂದ ಯಶಸ್ಸು.. ಸಹೋದ್ಯೋಗಿಗಳಿಂದ ಸಹಕಾರ. ಪಾರದರ್ಧಕ ವ್ಯವಹಾರದಿಂದ ಕ್ಷೇಮ. ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಮಕ್ಕಳ ವ್ಯಾಸಂಗಾಸಕ್ತಿ ಸುಧಾರಣೆ. ಗಣೇಶ ಪಂಚರತ್ನ, ಶಿವ ಕವಚ,ಮಹಿಷಮರ್ದಿನಿ ಸ್ತೋತ್ರ ಓದಿ.
ಮಕರ:
ಕೆಲಸದ ಒತ್ತಡ ಇದ್ದರೂ ಸಮಾಧಾನ.. ಮನೆಮಂದಿಯ ಸಹಕಾರ,ಉತ್ತಮ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಹೆಚ್ಚಿನವರಿಗೆ ಮಿಶ್ರಫಲಗಳ ಅನುಭವ. ಗಣೇಶ ಕವಚ, ದೇವೀಕವಚ, ಹನುಮಾನ್ ಚಾಲೀಸಾ ಓದಿ.
ಕುಂಭ:
ಸಾಮಾಜಿಕ ಚಟುವಟಿಕೆಗಳ ಒತ್ತಡ.. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಅವಿಶ್ರಾಂತ ಚಟುವಟಿಕೆಗಳಿಂದ ಆಯಾಸ. ಕುಟುಂಬದ ಪೂರ್ವಜರಿಗೆ ಶ್ರದ್ಧಾಂಜಲಿ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಕವಚ ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ವಾರದ ಕಾರ್ಯಗಳು ಮುಕ್ತಾಯ.. ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ.. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯಿಂದ ವ್ಯವಹಾರದಲ್ಲಿ ಉತ್ತಮ ಸಹಕಾರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ ಶನಿಮಹಾತ್ಮೆ ಓದಿ.