Gandhi Old Age Home: ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಗಾಂಧೀ ವೃದ್ಧಾಶ್ರಮ
Gandhi Old Age Home: ಬೆಂಗಳೂರಿನ ಕಡಬಗೆರೆ ಕ್ರಾಸ್‌ನ ಮಾಗಡಿ ಮುಖ್ಯ ರಸ್ತೆಯಲ್ಲಿರುವ ಗಾಂಧೀ ಓಲ್ಡ್ ಏಜ್ ಹೋಮ್ ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.
ಬೆಂಗಳೂರು: ಗಾಂಧೀಜಿ ಅವರ ತತ್ವ–ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಜಾತಿ–ಧರ್ಮದ ಭೇದವಿಲ್ಲದೆ ಅನಾಥರು, ನಿರ್ಗತಿಕರು, ನಿರಾಶ್ರಿತರು ಹಾಗೂ ವಿಕಲಚೇತನರಿಗೆ ಆಶ್ರಯ ನೀಡುತ್ತಿರುವ ಬೆಂಗಳೂರಿನ ಕಡಬಗೆರೆ ಕ್ರಾಸ್‌ನ ಮಾಗಡಿ ಮುಖ್ಯ ರಸ್ತೆಯಲ್ಲಿರುವ ಗಾಂಧೀ ಓಲ್ಡ್ ಏಜ್ ಹೋಮ್ ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.
ಎಸ್‌ಬಿಐ ಬ್ಯಾಂಕ್ ಸಮೀಪದಲ್ಲಿರುವ ಈ ವೃದ್ಧಾಶ್ರಮವು ಸೊಸೈಟಿ ಕಾಯ್ದೆಯಡಿ ಸರಕಾರದಿಂದ ನೋಂದಾಯಿತ ಸಂಸ್ಥೆಯಾಗಿದ್ದು, ಡಾ.ಲಯನ್ ಉಗ್ರಯ್ಯ ಪರಿಕಲ್ಪನೆ ಹಾಗೂ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆಯಲ್ಲಿ 100ಕ್ಕೂ ಹೆಚ್ಚು ಹಿರಿಯ ಪುರುಷರು ಮತ್ತು ಮಹಿಳೆಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಕಳೆದ 25 ವರ್ಷಗಳಲ್ಲಿ ಸಾವಿರಾರು ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ. ಜೀವನದ ಕೊನೆಯ ಹಂತದಲ್ಲಿ ಕುಟುಂಬದ ಆಸರೆಯಿಲ್ಲದ ಅನೇಕ ಹಿರಿಯ ಜೀವಿಗಳಿಗೆ ಗೌರವಯುತ ಬದುಕಿನ ಜೊತೆಗೆ ಅಂತಿಮ ದಿನಗಳಲ್ಲೂ ಮಾನವೀಯ ಸ್ಪಂದನೆ ದೊರೆತಿದೆ. ಆಶ್ರಮದಲ್ಲಿ ಮೃತಪಟ್ಟ ನಿರ್ಗತಿಕರ ಅಂತ್ಯಕ್ರಿಯೆಯನ್ನೂ ಉಗ್ರಯ್ಯ ಅವರು ಸ್ವತಃ ನೆರವೇರಿಸಿರುವುದು ಅವರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಪ್ರತ್ಯೇಕ ಕೊಠಡಿಗಳು, ವೈದ್ಯಕೀಯ ಸೌಲಭ್ಯ, ಆರೋಗ್ಯ ಆರೈಕೆ ಹಾಗೂ ಪರಿಶುದ್ಧ ಸಸ್ಯಾಹಾರಿ ಆಹಾರದ ವ್ಯವಸ್ಥೆ ಸೇರಿದಂತೆ ಹಿರಿಯರ ಅಗತ್ಯಗಳಿಗೆ ಅನುಗುಣವಾದ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಆಶ್ರಮವಾಸಿಗಳಿಂದ ಯಾವುದೇ ಹಣಕಾಸಿನ ನೆರವು ಪಡೆಯದೆ, ದಾನಿಗಳು ಹಾಗೂ ಸಮಾಜದ ಸಹಕಾರದಿಂದ ಸಂಸ್ಥೆ ನಡೆಯುತ್ತಿದೆ. ದಾನಿಗಳಿಗೆ ತೆರಿಗೆ ವಿನಾಯಿತಿ ಸೌಲಭ್ಯವೂ ಇದೆ.

ಅನೇಕ ಶಾಲೆಗಳ ಮುಖ್ಯಸ್ಥರು ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆತಂದು ಹಿರಿಯರ ಜೀವನ, ಮಾನವೀಯತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅನಿವಾರ್ಯ ಕಾರಣಗಳಿಂದ ತಂದೆ–ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದ ಕುಟುಂಬಗಳಿಗೂ ಈ ಆಶ್ರಮ ಆಸರೆಯಾಗಿದೆ.
ಗಾಂಧೀ ಜಯಂತಿಯ ಸಂದರ್ಭದಲ್ಲಿ 25 ವರ್ಷಗಳ ಸೇವಾ ಪಯಣವನ್ನು ಪೂರೈಸುತ್ತಿರುವ ಗಾಂಧೀ ಓಲ್ಡ್ ಏಜ್ ಹೋಮ್, ಗಾಂಧೀಜಿಯ ಮಾನವೀಯತೆಯ ಸಂದೇಶವನ್ನು ಕಾರ್ಯರೂಪದಲ್ಲಿ ತೋರಿಸುತ್ತಿರುವ ಅಪರೂಪದ ಸಂಸ್ಥೆಯಾಗಿದೆ. ಇಂತಹ ಸೇವಾ ಕಾರ್ಯವನ್ನು ಮುನ್ನಡೆಸುತ್ತಿರುವ ಡಾ. ಉಗ್ರಯ್ಯ ಹಾಗೂ ಅವರ ತಂಡದ ಸೇವೆಗೆ ಒಂದು ಶಹಭಾಸ್ ಹೇಳಲೇಬೇಕು.

ಸಂಪರ್ಕ: ಡಾ.ಲಯನ್ ಉಗ್ರಯ್ಯ - 92431 23730
ವಿಳಾಸ: ಗಾಂಧೀ ಓಲ್ಡ್ ಏಜ್ ಹೋಮ್, ಕಡಬಗೆರೆ ಕ್ರಾಸ್, ಮಾಗಡಿ ಮುಖ್ಯ ರಸ್ತೆ, ಎಸ್‌ಬಿಐ ಬ್ಯಾಂಕ್ ಸಮೀಪ, ಬೆಂಗಳೂರು