ದಿನ ಭವಿಷ್ಯ: ಇಂದು ಯಾರಿಗೆ ಶುಭ?

Daily Horoscope: ಇಂದು (ಶುಕ್ರವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Sep 11, 2026 - 09:53
ದಿನ ಭವಿಷ್ಯ: ಇಂದು ಯಾರಿಗೆ ಶುಭ?

ಮೇಷ:

ಸಪ್ತಾಹದ ಅಂತ್ಯಕ್ಕೆ ಸಿದ್ಧತೆ.. ಬಂಧುವರ್ಗದಲ್ಲಿ ಧಾರ್ಮಿಕ ಕಾರ್ಯಕ್ರಮ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಅಧ್ಯಾಪಕ ವೃಂದಕ್ಕೆ ಶಿಷ್ಯರ ಸಾಧನೆಯಿಂದ ಆನಂದ. ಮಹಿಳಾ ಉದ್ಯಮಿಗಳಿಗೆ ಕೀರ್ತಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

ವೃಷಭ: 

ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡಿರಿ.. ಜಲಾಧಾರಿತ ಉದ್ಯಮಕ್ಕೆ ಪ್ರಾರಂಭಿಕ ವಿಘ್ನ. ಉದ್ಯೋಗಾನ್ವೇಷಿಗಳಿಗೆ ಶುಭವಾರ್ತೆ. ಕಮಿಷನ್ ಏಜೆಂಟರಿಗೆ  ಶುಭ ಸೂಚನೆ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಆದಿತ್ಯ ಹೃದಯ ಓದಿ.

ಮಿಥುನ:

ಬೌದ್ಧಿಕ ಕಾರ್ಯಗಳಲ್ಲಿ ಸಾಮಾನ್ಯ ಪ್ರಗತಿ.. ವಾಹನ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಅವಿವಾಹಿತರಿಗೆ ಜೋಡಿ ಹುಡುಕಲು ಸಹಾಯ. ಗೃಹಿಣಿಯರಿಗೆ ತಕ್ಕಮಟ್ಟಿಗೆ ಕ್ಷೇಮದ ದಿನ. ಸಾಧಕರ ಭೇಟಿಯಿಂದ ಲಾಭ. ಗಣಪತಿ ಅಥರ್ವಶೀರ್ಷ, ಹನುಮತ್ಕವಚ, ಗುರುಸ್ತೋತ್ರ ಓದಿ.

ಕರ್ಕಾಟಕ:

ದಾಯಾದಿ ಕಲಹ ರಾಜಿಯಲ್ಲಿ ಮುಕ್ತಾಯ.. ಅನಿರೀಕ್ಷಿತ ಮೂಲದಿಂದ ಧನಾಗಮ. ವಿದ್ಯುತ್ ಉಪಕರಣಗಳಿಗೆ ಹಠಾತ್ ಹಾನಿ. ದೂರದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಕೇಟರಿಂಗ್ ವೃತ್ತಿಯವರಿಗೆ ಸತ್ವಪರೀಕ್ಷೆಯ ಸನ್ನಿವೇಶ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಸಿಂಹ:

ಸಣ್ಣ ವ್ಯವಹಾರದಲ್ಲಿ ದೊಡ್ಡ ಲಾಭ.. ಕಿರಿಯರಿಗೆ ಕೆಲಸದಲ್ಲಿ ಮಾರ್ಗದರ್ಶನ. ಚಿನ್ನ, ಬೆಳ್ಳಿ ವ್ಯಾಪಾರಿಗಳ ನಡುವೆ ಪೈಪೋಟಿ. ಸಾಮಾಜಿಕ  ಕಾರ್ಯಕರ್ತರಿಗೆ ಪ್ರಯಾಸದ ಕ್ಷಣಗಳು.. ವ್ಯವಹಾರದ ಸಂಬಂಧ ಪರ ಊರಿಗೆ ಪ್ರಯಾಣ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಕನ್ಯಾ:

ಯಂತ್ರೋಪಕರಣ ವ್ಯಾಪಾರಿಗಳಿಗೆ ಅದೃಷ್ಟದ ದಿನ.. ಬಂಧುಗಳ ಮನೆಯ ಶುಭಕಾರ್ಯಕ್ಕೆ ಸಹಾಯ. ಹಳೆಯ ಗೆಳೆಯರೊಡನೆ ಸಮಾಗಮ. ಅಸ್ವಸ್ಥರಾಗಿದ್ದ ಹಿರಿಯರ ಚೇತರಿಕೆ. ಉದ್ಯೋಗಾಸಕ್ತರಿಗೆ ಶುಭ ಸೂಚನೆ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ  ಓದಿ.

ತುಲಾ:

ತೆರೆಯ ಮರೆಯಿಂದ ಹೊರಗೆ ಬರುವ ಸಂದರ್ಭ.. ಕುಟುಂಬದ ಯಜಮಾನರಿಗೆ ಶುಭದಿನ. ಆಧ್ಯಾತ್ಮಿಕ ಕಾರ್ಯಕ್ರಮಗಳತ್ತ ಒಲವು. ಸಂಗೀತ, ಹರಿಕಥೆ ಶ್ರವಣಕ್ಕೆ ಅವಕಾಶ. ಲಲಿತಕಲೆಗಳಲ್ಲಿ ಪರಿಶ್ರಮ ಉಳ್ಳವರಿಗೆ ಸಂತೃಪ್ತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.

ವೃಶ್ಚಿಕ:

ಕೀರ್ತಿ ತರುವ ಕಾರ್ಯಗಳಲ್ಲಿ ಭಾಗಿ.. ಸಣ್ಣ ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಅಧ್ಯಾಪಕರಿಂದ ಮಕ್ಕಳಿಗಾಗಿ ಕಾರ್ಯಕ್ರಮ. ದೂರದಲ್ಲಿರುವ ಬಂಧುಗಳ ಆಗಮನ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಧನು:

ಸಮಾಜಸೇವಕರ ಸಮ್ಮಾನ ಕಾರ್ಯದಲ್ಲಿ ಭಾಗಿ.. ಸಹೋದ್ಯೋಗಿ ಮಿತ್ರರಿಗೆ ಮಾರ್ಗದರ್ಶನ. ಕೃಷಿಕರಿಗೆ ಮುದ ನೀಡುವ ಕ್ಷಣಗಳು. ಸಂಗಾತಿಯ ಆರೋಗ್ಯ ಸುಧಾರಣೆ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಪ್ರೋತ್ಸಾಹ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಗೌರೀ ದಶಕ ಓದಿ. 

ಮಕರ:

ಕೆಲಸದ ಭಾರ ಹೆಚ್ಚುವ ಸೂಚನೆ..ನಿತ್ಯದ ಜಂಜಾಟಗಳು ಸ್ವಲ್ಪ ಸಡಿಲು... ಹಿರಿಯರ ಆರೋಗ್ಯ ಸುಧಾರಣೆ. ಔಷಧ ವ್ಯಾಪಾರಿಗಳಿಗೆ ಅನುಕೂಲದ ದಿನ.. ಹತ್ತಿರದ ದೇವಾಲಯ ದರ್ಶನ.ಗಣೇಶ ಕವಚ, ರಾಜರಾಜೇಶ್ವರಿ ಅಷ್ಟಕ, ಹನುಮಾನ್ ಚಾಲೀಸಾ ಓದಿ. 

ಕುಂಭ: 

ಉದ್ಯೋಗ, ವ್ಯವಹಾರಗಳಲ್ಲಿ ತಡೆಯಿಲ್ಲದ ಪಗತಿ.. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಗ್ನತೆ. ಮುದ್ರಣ ಸಾಮಗ್ರಿ, ಸ್ಟೇಷನರಿ ವಿತರಕರಿಗೆ ಬೇಡಿಕೆ ಪೂರೈಕೆಯ ಒತ್ತಡ. ಯಂತ್ರೋಪಕರಣ ವ್ಯಾಪಾರಿಗಳ ಪಾಲಿಗೆ ಶುಭದಿನ. ಗೃಹಿಣಿಯರು, ಮಕ್ಕಳಿಗೆ ಆನಂದದ ಅನುಭವ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

ಮೀನ:

ಉದ್ಯೋಗ, ವ್ಯವಹಾರಗಳಲ್ಲಿ ಅನುಕೂಲ.. ಬಂಧುವರ್ಗದ ಮನೆಯ ಸಂಭ್ರಮದಲ್ಲಿ ಭಾಗಿ. ಹಿರಿಯರ ಆರೋಗ್ಯ ಕ್ಷಿಪ್ರಗತಿಯಲ್ಲಿ ಸುಧಾರಣೆ. ಕೃಷಿ, ಹೈನುಗಾರಿಕೆಗೆ ಅನುಕೂಲ.ವಾಹನ ಚಾಲನೆಯಲ್ಲಿ ಎಚ್ಚರ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.