Vivo T5 5G: ಇಂದಿನಿಂದ ವಿವೋ ಟಿ5 5ಜಿ ಸ್ಮಾರ್ಟ್‌ಫೋನ್ ಸೇಲ್ ಶುರು.. ವಿಶೇಷತೆಗಳೇನು?

Vivo T5 5G: ಹೊಚ್ಚ ಹೊಸ 'ವಿವೋ ಟಿ5 5ಜಿ' ಸ್ಮಾರ್ಟ್‌ಫೋನ್ ಈಚೆಗೆ ಬಿಡುಗಡೆಗೊಂಡಿತ್ತು. ಇಂದಿನಿಂದ (ಸೆ.9) ಮಾರಾಟವು ಶುರುವಾಗಿದೆ.

Sep 9, 2026 - 13:27
Vivo T5 5G: ಇಂದಿನಿಂದ ವಿವೋ ಟಿ5 5ಜಿ ಸ್ಮಾರ್ಟ್‌ಫೋನ್ ಸೇಲ್ ಶುರು.. ವಿಶೇಷತೆಗಳೇನು?

Vivo T5 5G: ಹೊಚ್ಚ ಹೊಸ 'ವಿವೋ ಟಿ5 5ಜಿ' ಸ್ಮಾರ್ಟ್‌ಫೋನ್ ಈಚೆಗೆ ಬಿಡುಗಡೆಗೊಂಡಿತ್ತು. ಇಂದಿನಿಂದ (ಸೆ.9) ಮಾರಾಟವು ಶುರುವಾಗಿದೆ. ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ & ಎಲ್ಲ ಚಿಲ್ಲರೆ ಮಳಿಗೆಗಳಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. 

ಇದು 6GB + 128GB, 8GB + 128GB, 8GB + 256GB ಹಾಗೂ 12GB + 256GB ಇಂಟರ್ನಲ್ ಸ್ಟೋರೇಜ್‌ನ್ನು ಒಳಗೊಂಡಿದೆ. ಕ್ರಮವಾಗಿ ರೂ.34,999, ರೂ.39,999 ರೂ.44,999 ಮತ್ತು ರೂ.49,999 ಬೆಲೆಯನ್ನು ಹೊಂದಿದೆ. 

ಬೃಹದಾಕಾರದ 7050mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. 44W ಫ್ಲ್ಯಾಶ್‌ ಚಾರ್ಜ್‌ರ್ ಸಪೋರ್ಟ್ ಮಾಡುತ್ತದೆ. ಕೇವಲ 30 ನಿಮಿಷಗಳಲ್ಲಿ ಈ ಬ್ಯಾಟರಿಯು ಶೇಕಡ 1% ರಿಂದ 44% ಚಾರ್ಜ್ ಆಗಿ ಬಿಡುತ್ತದೆ.  6.83-ಇಂಚಿನ 1.5K 3D ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇಯನ್ನು ತನ್ನದಾಗಿಸಿಕೊಂಡಿದೆ. 

ಈ ಫೋನ್ 50MP ಸೋನಿ IMX882 ಮೇನ್ ಕ್ಯಾಮೆರಾವನ್ನು ಪಡೆದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7500 ಟರ್ಬೊ ಪ್ರೊಸೆಸರ್‌ನ್ನು ಒಳಗೊಂಡಿದೆ. ಕಾಸ್ಮಿಕ್ ಬ್ಲ್ಯಾಕ್ & ಗ್ಲೇಸಿಯರ್ ಬ್ಲೂ ಎಂಬ ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.