Pure And Sure Organic Cafe: ಪ್ಯೂರ್ ಆ್ಯಂಡ್ ಶ್ಯೂರ್‌ನಿಂದ ಆರ್ಗ್ಯಾನಿಕ್ ಕೆಫೆ.. ಎಲ್ಲಿದೆ.. ವಿಶೇಷತೆಗಳೇನು ಗೊತ್ತಾ?

Pure And Sure Organic Cafe: ಬೆಂಗಳೂರಿನ 1 ಎಂಜಿ ಮಾಲ್‌ನ ರಿಲಯನ್ಸ್ ಫ್ರೆಶ್‌ಪಿಕ್‌ನಲ್ಲಿ ಪ್ಯೂರ್ ಆ್ಯಂಡ್ ಶ್ಯೂರ್ ಆರ್ಗ್ಯಾನಿಕ್ ಕೆಫೆ ಆರಂಭಗೊಂಡಿದೆ.

Sep 11, 2026 - 12:15
Sep 11, 2026 - 12:16
Pure And Sure Organic Cafe: ಪ್ಯೂರ್ ಆ್ಯಂಡ್ ಶ್ಯೂರ್‌ನಿಂದ ಆರ್ಗ್ಯಾನಿಕ್ ಕೆಫೆ.. ಎಲ್ಲಿದೆ.. ವಿಶೇಷತೆಗಳೇನು ಗೊತ್ತಾ?

ಬೆಂಗಳೂರು: 'ಆರ್ಗ್ಯಾನಿಕ್' ಆಹಾರ ಉತ್ಪನ್ನಗಳ ಕ್ಷೇತ್ರದಲ್ಲಿ 'ಪ್ಯೂರ್ ಆ್ಯಂಡ್ ಶ್ಯೂರ್' ತನ್ನದೇಯಾದ ಛಾಪು ಮೂಡಿಸಿದೆ. ಇದೀಗ ಉತ್ಪನ್ನ ಮಾರಾಟದೊಂದಿಗೆ, ಗ್ರಾಹಕರಿಗೆ ನೇರ ಆಹಾರ ಅನುಭವ ನೀಡುವ ಹೊಸ ಪರಿಕಲ್ಪನೆಗೆ ಮುಂದಾಗಿದೆ. 

ಸಂಸ್ಥೆಯ ಸಂಸ್ಥಾಪಕ ಸೂರ್ಯ ಶಾಸ್ತ್ರಿ (Surya Shastry) ಅವರ ಪರಿಕಲ್ಪನೆಯಡಿ, ಬೆಂಗಳೂರಿನ 1 ಎಂಜಿ ಮಾಲ್‌ನ ರಿಲಯನ್ಸ್ ಫ್ರೆಶ್‌ಪಿಕ್‌ನಲ್ಲಿ ಪ್ಯೂರ್ ಆ್ಯಂಡ್ ಶ್ಯೂರ್ ಆರ್ಗ್ಯಾನಿಕ್ ಕೆಫೆ (Pure And Sure Organic Cafe) ಆರಂಭಗೊಂಡಿದೆ.

ಪ್ಯಾಕೇಜ್ಡ್ ಆರ್ಗ್ಯಾನಿಕ್ ಆಹಾರ ಉತ್ಪನ್ನಗಳ ಬ್ರ್ಯಾಂಡ್ ಆಗಿ ಬೆಳೆದಿರುವ 'ಪ್ಯೂರ್ ಆ್ಯಂಡ್ ಶ್ಯೂರ್‌'ನ ಉತ್ಪನ್ನಗಳನ್ನು ಕೇವಲ ಶೆಲ್ಫ್‌ನಲ್ಲಿ ನೋಡುವುದರಿಂದ ಅದರ ಗುಣಮಟ್ಟ ಮತ್ತು ಬಳಕೆಯ ಸಂಪೂರ್ಣ ಅನುಭವ ಗ್ರಾಹಕರಿಗೆ ದೊರೆಯುವುದಿಲ್ಲ. 'ಒಂದು ಪದಾರ್ಥವನ್ನು ಅರ್ಥಮಾಡಿಕೊಳ್ಳಲು ಕೆಲವೊಮ್ಮೆ ಅದರಿಂದ ತಯಾರಿಸಿದ ಆಹಾರವನ್ನು ಗ್ರಾಹಕರಿಗೆ ಪರಿಚಯಿಸುವುದೇ ಉತ್ತಮ ಮಾರ್ಗ' ಎಂಬ ಆಲೋಚನೆಯೇ ಈ ಕೆಫೆ ಪರಿಕಲ್ಪನೆಗೆ ಮೂಲವಾಗಿದೆ ಎಂದು ಸೂರ್ಯ ಶಾಸ್ತ್ರಿ ತಮ್ಮ ಲಿಂಕ್ಡ್ಇನ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಕೆಫೆಯ ವಿಶೇಷತೆಗಳೇನು:

ಇಲ್ಲಿ ಸಿದ್ಧಪಡಿಸುವ ಆಹಾರಗಳಲ್ಲಿ 'ಪ್ಯೂರ್ ಆ್ಯಂಡ್ ಶ್ಯೂರ್‌'ನ ವಿವಿಧ ಉತ್ಪನ್ನಗಳನ್ನೇ ಬಳಸಲಾಗುತ್ತದೆ. ಧಾನ್ಯಗಳು, ಬೇಳೆ, ಸಿರಿಧಾನ್ಯಗಳು, ಮಸಾಲೆಗಳು, ಎ2 ತುಪ್ಪ, ತೆಂಗಿನ ಹಾಲು, ನೈಸರ್ಗಿಕ ಸಿಹಿಕಾರಕಗಳು ಸೇರಿದಂತೆ, ನಾನಾ ಉತ್ಪನ್ನಗಳನ್ನು ಆಹಾರದ ಮೂಲಕ ಗ್ರಾಹಕರಿಗೆ ಪರಿಚಯಿಸಲಾಗುತ್ತಿದೆ.

ಉದಾಹರಣೆಗೆ, ಘೀ ರೋಸ್ಟ್ ಪನೀರ್ ಸವರ್‌ಡೋನಲ್ಲಿ 'ಪ್ಯೂರ್ ಆ್ಯಂಡ್ ಶ್ಯೂರ್‌'ನ ಎ2 ತುಪ್ಪ ಮತ್ತು ಬ್ಯಾಡಗಿ ಮೆಣಸಿನಕಾಯಿ ಬಳಕೆಯಾಗುತ್ತದೆ. ಅದೇ ರೀತಿ ಥಾಯ್ ಕರಿ ಬೌಲ್‌ನಲ್ಲಿ ಥಾಯ್ ಕರಿ ಪೇಸ್ಟ್ ಹಾಗೂ ತೆಂಗಿನ ಹಾಲಿನಂತಹ ಉತ್ಪನ್ನಗಳ ರುಚಿಯನ್ನು ಗ್ರಾಹಕರು ಅನುಭವಿಸಬಹುದು. ಆಹಾರ ಇಷ್ಟವಾದರೆ, ಅದರಲ್ಲಿ ಬಳಸಿರುವ ಉತ್ಪನ್ನಗಳನ್ನು ಕೆಫೆಯ ಸುತ್ತಮುತ್ತಲಿನ ಶೆಲ್ಫ್‌ನಿಂದಲೇ ಖರೀದಿಸುವ ಅವಕಾಶವು ಇದೆ.

ಇದನ್ನು 'ಶೆಲ್ಫ್ ಟು ಪ್ಲೇಟ್' ಪರಿಕಲ್ಪನೆ ಎಂದು ಕರೆಯಲಾಗಿದ್ದು, ಉತ್ಪನ್ನವನ್ನು ನೋಡುವುದರಿಂದ ಹಿಡಿದು ರುಚಿ ಅನುಭವಿಸುವುದು ಹಾಗೂ ಖರೀದಿಸುವವರೆಗೆ ಗ್ರಾಹಕರ ಸಂಪೂರ್ಣ ಪಯಣವನ್ನು ಒಂದೇ ಸ್ಥಳದಲ್ಲಿ ರೂಪಿಸುವ ಪ್ರಯತ್ನವಾಗಿದೆ.

ಇಂದಿನ ದಿನಗಳಲ್ಲಿ ದಿನಸಿ ವಸ್ತುಗಳು ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪುವ ಸಂದರ್ಭದಲ್ಲಿ, ಗ್ರಾಹಕರು ಅಂಗಡಿಗೆ ಬಂದು ಖರೀದಿಸಲು ಕಾರಣವೇನು ಎಂಬ ಪ್ರಶ್ನೆಗೂ ಈ ಪರಿಕಲ್ಪನೆ ಉತ್ತರ ನೀಡುತ್ತದೆ. ಹೊಸ ಉತ್ಪನ್ನಗಳನ್ನು ಕಂಡುಕೊಳ್ಳುವುದು, ಖರೀದಿಸುವ ಮೊದಲು ರುಚಿಯನ್ನು ಅನುಭವಿಸಿ ಬ್ರ್ಯಾಂಡ್‌ನೊಂದಿಗೆ ಸಂವಹನ ನಡೆಸುವುದು ಮತ್ತು ಶಾಪಿಂಗ್ ಜೊತೆಗೆ ತಾಜಾ ಆಹಾರವನ್ನು ಸವಿಯುವುದು ಮುಂದಿನ ದಿನಗಳಲ್ಲಿ ರಿಟೇಲ್ ಕ್ಷೇತ್ರದ ಪ್ರಮುಖ ಅನುಭವಗಳಾಗಬಹುದು ಎಂಬುದು ಸೂರ್ಯ ಶಾಸ್ತ್ರಿ ಅವರ ಅಭಿಪ್ರಾಯವಾಗಿದೆ.

'ಪ್ಯೂರ್ ಆ್ಯಂಡ್ ಶ್ಯೂರ್' ಮತ್ತು ರಿಲಯನ್ಸ್ ನಡುವಿನ ಸಂಬಂಧಕ್ಕೂ ಈ ಬೆಳವಣಿಗೆ ವಿಶೇಷ ಮಹತ್ವ ಹೊಂದಿದೆ. 2012ರಲ್ಲಿ ರಿಲಯನ್ಸ್ ಪ್ಯೂರ್ ಆ್ಯಂಡ್ ಶ್ಯೂರ್‌ನ ಸುಮಾರು 10 ಉತ್ಪನ್ನಗಳನ್ನು ತನ್ನ ಶೆಲ್ಫ್‌ನಲ್ಲಿ ಇರಿಸುವ ಮೂಲಕ ಈ ಸಹಯೋಗ ಆರಂಭಿಸಿತ್ತು. ಸುಮಾರು 14 ವರ್ಷಗಳ ಬಳಿಕ ಅದೇ ರಿಟೇಲ್ ವ್ಯವಸ್ಥೆಯೊಳಗೆ 'ಪ್ಯೂರ್ ಆ್ಯಂಡ್ ಶ್ಯೂರ್' ತನ್ನದೇಯಾದ ಆಹಾರ ಅನುಭವವನ್ನು ರೂಪಿಸಿರುವುದು ಗಮನಾರ್ಹವಾಗಿದೆ.

ಉತ್ಪನ್ನವನ್ನು ಮಾರಾಟ ಮಾಡುವುದಕ್ಕಿಂತ ಮೊದಲು ಅದನ್ನು ಅನುಭವಿಸುವ ಅವಕಾಶ ನೀಡುವುದು - ಇದೇ 'ಪ್ಯೂರ್ ಆ್ಯಂಡ್ ಶ್ಯೂರ್‌'ನ ಹೊಸ ಕೆಫೆ ಪರಿಕಲ್ಪನೆಯ ವಿಶೇಷತೆಯಾಗಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.