Dhamaal-4: ಧಮಾಲ್-4 OTTಯಲ್ಲಿ ಬಿಡುಗಡೆ

Dhamaal-4: ಅಜಯ್ ದೇವಗನ್ ನಟನೆಯ ಕಾಮಿಡಿ ಸಿನಿಮಾ 'ಧಮಾಲ್-4' ಒಟಿಟಿಯಲ್ಲಿ ಬಿಡುಗಡೆಗೊಂಡಿದೆ.

Sep 6, 2026 - 18:26
Dhamaal-4: ಧಮಾಲ್-4 OTTಯಲ್ಲಿ ಬಿಡುಗಡೆ

ಅಜಯ್ ದೇವಗನ್ (Ajay Devgn) ನಟನೆಯ ಕಾಮಿಡಿ ಸಿನಿಮಾ ಧಮಾಲ್-4 (Dhamaal-4) ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ಇದೇ ಶುಕ್ರವಾರದಿಂದ 'ನೆಟ್‌ಫ್ಲಿಕ್ಸ್ ಇಂಡಿಯಾ'ದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಹಿಂದಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. 

ಈ ಚಿತ್ರಕ್ಕೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಇಂದ್ರ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಟಿ-ಸೀರೀಸ್ ಫಿಲ್ಮ್ಸ್, ದೇವಗನ್ ಫಿಲ್ಮ್ಸ್, ಪನೋರಮಾ ಸ್ಟುಡಿಯೋಸ್ ಹಾಗೂ ಮಾರುತಿ ಇಂಟರ್‌ನ್ಯಾಷನಲ್ ಬ್ಯಾನರ್‌ನಡಿ ಜಂಟಿಯಾಗಿ ನಿರ್ಮಿಸಲಾಗಿದೆ. 

ಅಮರ್ ಮೊಹಿಲೆ ಸಂಗೀತ ನೀಡಿದ್ದು, ಸುಧೀರ್ ಕೆ ಚೌಧರಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಪಿಯೂಷ್ ಭಗತ್, ರಾಹುಲ್ ಶೆಟ್ಟಿ ಹಾಗೂ ಶಜಿಯಾ ಸಮ್ಜಿರ ಕೊರಿಯಾಗ್ರಾಫ್ ಇದೆ.  

ರಿತೇಶ್ ದೇಶಮುಖ್, ಅರ್ಷದ್ ವಾರ್ಸಿ, ಜಾವೇದ್ ಜಾಫೇರಿ, ಸಂಜಯ್ ಮಿಶ್ರಾ, ರವಿ ಕಿಶನ್ ಮತ್ತು ಉಪೇಂದ್ರ ಲಿಮಾಯೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.