ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ?
Daily Horoscope: ಇಂದು (ಬುಧವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಗುರುದೇವರ ಸಂಪೂರ್ಣ ಅನುಗ್ರಹ.. ಎಲ್ಲ ಕ್ಷೇತ್ರಗಳಲ್ಲೂ ವಿಜಯ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಅಶಕ್ತರಿಗೆ ನೆರವಾಗುವ ಅವಕಾಶ. ಎಲ್ಲ ಬಗೆಯ ನಿರಾಶೆಗಳು ದೂರ. ಗಣೇಶಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಉದರದ ಆರೋಗ್ಯದ ವಿಷಯದಲ್ಲಿ ಕಾಳಜಿ ಇರಲಿ.. ಉದ್ಯೋಗಾನ್ವೇಷಿಗಳಿಗೆ ಶುಭಸೂಚನೆ. ಅಲ್ಪಾವಧಿ ಹೂಡಿಕೆಗಳು ಬೇಡ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಸ್ಟೇಶನರಿ, ಪುಸ್ತಕ ವ್ಯಾಪಾರಿಗಳಿಗೆ ಅನುಕೂಲ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಕಾರ್ತಿಕೇಯ ಸ್ತೋತ್ರ ಓದಿ.
ಮಿಥುನ:
ಬುದ್ಧಿಯನ್ನು ಚುರುಕಾಗಿಟ್ಟುಕೊಳ್ಳಿ.. ಅಧ್ಯಾತ್ಮ ಜೀವಿಗಳಿಗೆ ಶಾಂತಿ, ಸಮಾಧಾನ. ಗೃಹಿಣಿಯರಿಗೆ ತಕ್ಕಮಟ್ಟಿಗೆ ಕ್ಷೇಮದ ದಿನ. ಸಜ್ಜನರ ಸಹವಾಸದಿಂದ ಆನಂದ. ಗಣೇಶ ದ್ವಾದಶನಾಮ ಸ್ತೋತ್ರ, ಹನುಮತ್ಕವಚ, ನವಗ್ರಹ ಮಂಗಲಾಷ್ಟಕ ಓದಿ.
ಕರ್ಕಾಟಕ:
ಸಜ್ಜನರನ್ನು ಗುರುತಿಸಿ ಸಹಾಯ ಮಾಡಿ.. ಎಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಅನುಕೂಲ. ದೂರದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಹೋಟೆಲ್ ಉದ್ಯಮಿಗಳಿಗೆ ಗುಣಮಟ್ಟದ ಸವಾಲು. ತೋಟಗಾರಿಕೆ, ಜೇನು ವ್ಯವಸಾಯ ಹವ್ಯಾಸಕ್ಕೆ ಉತ್ತೇಜನ. ಗಣೇಶ ಅಷ್ಟಕ, ದತ್ತಾತ್ರೇಯ. ಸ್ತೋತ್ರ, ಲಕ್ಷ್ಮೀಸ್ತೋತ್ರ. ಓದಿ.
ಸಿಂಹ:
ಸತ್ಕಾರ್ಯಗಳನ್ನು ಮಾಡಲು ಅಂಜಿಕೆ ಬೇಡ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಆಸ್ತಿ .ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಸರ್ಕಾರಿ ನೌಕರರಿಗೆ ರಾಜಕಾರಣಿಗಳ ಕಾಟ. ರಾತ್ರಿಯ ಹೊತ್ತಿನಲ್ಲಿ ದೂರ ಪ್ರಯಾಣ ಬೇಡ. ಗಣಪತಿ ಅಥರ್ವಶೀರ್ಷ, ದಾರಿದ್ರ್ಯದಹನ ಶಿವಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
ಕನ್ಯಾ:
ಕನಿಕರದ ಪರಿಸ್ಥಿತಿಯಿಂದ ಪಾರು.. ಹೊಲಿಗೆ, ಕಸೂತಿ ಬಲ್ಲವರಿಗೆ ಅದೃಷ್ಟದ ದಿನ. ಬಂಧುಗಳ ಮನೆಯ ಶುಭಕಾರ್ಯಕ್ಕೆ ಸಹಾಯ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ತೋಟಗಾರಿಕೆ ಬೆಳೆಗಳಿಂದ ಲಾಭ. ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ ಓದಿ.
ತುಲಾ:
ಮಾತು ಸೌಮ್ಯವಾಗಿದ್ದರೂ ಸ್ಪಷ್ಟವಾಗಿರಲಿ.. ಕೆಲವು ವರ್ಗದ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ. ಲಲಿತಕಲೆಗಳಲ್ಲಿ ಪರಿಶ್ರಮ ಉಳ್ಳವರಿಗೆ ಸಂತೃಪ್ತಿ. ಸಾಮೂಹಿಕ ಪ್ರಾರ್ಥನೆಯಿಂದ ಸಮಾಜಕ್ಕೆ ಒಳಿತು. ಕರಕುಶಲ ಸಾಮಗ್ರಿ ವ್ಯಾಪಾರದಲ್ಲಿ ಲಾಭ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ಸುಬ್ರಹ್ಮಣ್ಯ ಭುಗ ಸ್ತೋತ್ರ ಓದಿ.
ವೃಶ್ಚಿಕ:
ಯಾವುದೇ ದೃಷ್ಟಿಯಲ್ಲಿ ಸೋಲು ಇಲ್ಲ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ದೂರದಲ್ಲಿರುವ ಬಂಧುಗಳ ಆಗಮನ. ಕೈಮಗ್ಗದ ಕೆಲಸ ಬಲ್ಲವರಿಗೆ ಅವಕಾಶ. ಕೇಟರಿಂಗ್ ವ್ಯವಹಾರಸ್ಥರ ಸಮಸ್ಯೆ ಪರಿಹಾರ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
ಧನು:
ಪರಿಸರಪ್ರೇಮಿ ಯೋಜನೆಗಳಿಗೆ ಸಹಾಯ.. ಸಹೋದ್ಯೋಗಿ ಮಿತ್ರರಿಗೆ ಮಾರ್ಗದರ್ಶನ. ಸಣ್ಣ ಹೂಡಿಕೆಗಳಲ್ಲಿ ಸಾಮಾನ್ಯ ಲಾಭ. ಶಿಕ್ಷಕ ವರ್ಗದ ಹಿತರಕ್ಷಣೆಗೆ ಪ್ರಯತ್ನ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಮಕರ:
ಆಪ್ತಮಿತ್ರರಿಗೆ ನೆರವಾಗುವ ಅವಕಾಶ.. ನಿತ್ಯೋಪಯೋಗಿ ಸಾಮಗ್ರಿ ವಿತರಕರಿಗೆ ಸಡಿಲಾದ ಪೂರೈಕೆ ಒತ್ತಡ. ಹಿರಿಯರ ಆರೋಗ್ಯ ಸುಧಾರಣೆ. ಸುಲಭಸಾಧ್ಯ ಪರೋಪಕಾರ ಮಾಡುವ ಅವಕಾಶ. ದುರ್ಬೋಧನೆಗಳನ್ನು ನಿರ್ಲಕ್ಷಿಸಿರಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ನಿರಂತರ ಲಕ್ಷ್ಮೀ ಕಟಾಕ್ಷದ ಅನುಗ್ರಹ.. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಗ್ನತೆ. ಯಂತ್ರೋಪಕರಣ ವ್ಯಾಪಾರಿಗಳ ಪಾಲಿಗೆ ಶುಭದಿನ. ಯುವಜನರ ಪಾಲುಗೊಳ್ಳುವಿಕೆಯಲ್ಲಿ ಶ್ರಮದಾನ. ಇಷ್ಟದೇವರ ದರ್ಶನದಿಂದ ಶುಭ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ಮೀನ:
ಉದ್ಯೋಗ, ವ್ಯವಹಾರಗಳಲ್ಲಿ ಅನುಕೂಲ.. ಬಂಧುವರ್ಗದ ಮನೆಯ ಸಂಭ್ರಮದಲ್ಲಿ ಭಾಗಿ. ಹಿರಿಯರಿಗೆ ಪ್ರಾಚೀನ ಪದ್ಧತಿಯಿಂದ ಆರೋಗ್ಯ. ಬಂಗಾರದ ಕೆಲಸ ಬಲ್ಲವರಿಗೆ ಸದವಕಾಶ. ತಿಂಡಿ, ತಿನಿಸು ವ್ಯಾಪಾರಿಗಳಿಗೆ ಅನುಕೂಲದ ದಿನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.