ದಿನ ಭವಿಷ್ಯ: ಯಾವ ರಾಶಿಗೆ ಶುಭ?
Daily Horoscope: ಇಂದು (ಶನಿವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಕೆಲಸಗಳು ಸಕಾಲದಲ್ಲಿ ಮುಗಿದು ವಿಶ್ರಾಂತಿ.. ವೈಯಕ್ತಿಕ ಕೆಲಸಗಳಿಗೆ ಸಮಯ. ಸಂಸಾರದಲ್ಲಿ ಎಲ್ಲರ ಸಹಕಾರ. ವಾಹನ ಚಾಲನೆಯಲ್ಲಿ ಎಚ್ಚರ. ವಸ್ತ್ರ ವ್ಯಾಪಾರಿಗಳಿಗೆ ವಿಶೇಷ ಲಾಭ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.
ವೃಷಭ:
ಸಹಕಾರ, ಸದ್ಭಾವನೆಯಿಂದ ಜೀವನ ಸುಗಮ.. ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಆರೋಗ್ಯದ ಕುರಿತು ಸಕಾಲಿಕ ಜಾಗ್ರತೆ. ಉದ್ಯೋಗಾಸಕ್ತರಿಗೆ ನೌಕರಿ ಸಿಗುವ ಸೂಚನೆ. ವಿವಾಹಾಪೇಕ್ಷಿಗಳಿಗೆ ಶುಭ ಸೂಚನೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಮಿಥುನ:
ಅನಾರೋಗ್ಯದ ವಿರುದ್ಧ ಹೋರಾಟದಲ್ಲಿ ವಿಜಯ.. ಉದ್ಯಮಿಗಳ ಕೀರ್ತಿ ವರ್ಧನೆಗೆ ಪೂರಕ ವಾತಾವರಣ. ಪಿತ್ರಾರ್ಜಿತ ಆಸ್ತಿಯಲ್ಲಿ ಫಸಲು ಹೆಚ್ಚಳ. ಪರಿಸರ ರಕ್ಷಣೆಗೆ ಶ್ರಮದಾನ. ಮನೆಮಂದಿಯ ನಡುವೆ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಕರ್ಕಾಟಕ:
ವ್ಯವಹಾರದಲ್ಲಿ ಆಮಿಷಗಳ ಬಗೆಗೆ ಎಚ್ಚರ.. ಹಿರಿಯರ ಆರೋಗ್ಯ ಸಮಸ್ಯೆ ನಿವಾರಣೆ. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ದೇವತಾರಾಧನೆ, ಸತ್ಸಂಗಗಳ ಕಡೆಗೆ ಸೆಳೆತ. ಆಭರಣ ತಯಾರಿ ಬಲ್ಲವರಿಗೆ ಉದ್ಯೋಗಾವಕಾಶ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ನವಗ್ರಹ ಮಂಗಲಾಷ್ಟಕ ಓದಿ.
ಸಿಂಹ:
ಸಪ್ತಾಹದ ಕಾರ್ಯಗಳ ಸಿಂಹಾವಲೋಕನ.. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ಇಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಕೈತುಂಬಾ ಕೆಲಸ. ಮನೆಯವರೊಂದಿಗೆ ದೇವೀಕ್ಷೇತ್ರಕ್ಕೆ ಭೇಟಿ. ವಿದೇಶದಲ್ಲಿ ನೆಲೆಸಿರುವ ಮಿತ್ರನಿಂದ ಕರೆ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
ಕನ್ಯಾ:
ಉದ್ಯೋಗಸ್ಥರ ಪಾಲಿಗೆ ನೆಮ್ಮದಿಯ ದಿನ. ಎಲೆಕ್ಟ್ರಾನಿಕ್ಸ್ , ಎಲೆಕ್ಟ್ರಿಕಲ್ಸ್ ವ್ಯಾಪಾರ ವೃದ್ಧಿ. ವೃತ್ತಿ ಪರಿಣತಿ ಹೆಚ್ಚಿಸಿಕೊಳ್ಳಲು ನುರಿತವರ ಮಾರ್ಗದರ್ಶನ. ಕುಟುಂಬದ ಮನೆಯಲ್ಲಿ ವಿವಾಹ ಸಂಭ್ರಮ. ಮಕ್ಕಳ ಆತ್ಮವಿಶ್ವಾಸ ವೃದ್ಧಿಗೆ ಪ್ರಯತ್ನ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
ತುಲಾ:
ನಿರಾಳವಾದ ಮನಸ್ಥಿತಿಯ ಅನುಭವ.. ಉದ್ಯೋಗ ಸ್ಥಾನದ ಚಿಂತೆ ಇಂದು ಬೇಡ. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ. ತಾಯಿಯ ಕಡೆಯ ಬಂಧುಗಳ ಆಗಮನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ದೇವೀಕವಚ ಓದಿ.
ವೃಶ್ಚಿಕ:
ಕಾರ್ಯಸಾಮರ್ಥ್ಯ ಹೆಚ್ಚಿಸಲು ವಿರಾಮದ ಸದುಪಯೋಗ.. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಹೊಲಿಗೆ ಕೆಲಸ ಬಲ್ಲವರಿಗೆ ಕೆಲಸಕ್ಕೆ ಕರೆ. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ಸಂಗೀತಾದಿ ಕಲೆಗಳ ಆಸ್ವಾದನೆಯಿಂದ ಆನಂದ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಅಷ್ಟಲಕ್ಷ್ಮೀ ಸ್ತೋತ್ರ ಓದಿ.
ಧನು:
ಪರಸ್ಪರ ಸಹಕಾರದಿಂದ ಸುಲಭವಾದ ಸಂಸಾರ ನಿರ್ವಹಣೆ.. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಪಾಲುದಾರಿಕೆ ವ್ಯವಹಾರದಲ್ಲಿ ಶೀಘ್ರ ಪ್ರಗತಿ. ಉದ್ಯೋಗಾಸಕ್ತರಿಗೆ ಯೋಗ್ಯ ಅವಕಾಶ ಗೋಚರ. ಮನೆಯಲ್ಲಿ ಇಷ್ಟದೇವತಾರ್ಚನೆ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
ಮಕರ:
ಸಂಸಾರ, ಉದ್ಯೋಗ ಇವೆರಡರ ಸಮತೋಲನದಲ್ಲಿ ತೃಪ್ತಿ.. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ವೃತ್ತಿಪರ ಉದ್ಯೋಗಸ್ಥರಿಗೆ ಸಮಯದ ಸವಾಲು. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ. ಕೆಲವರಿಗೆ ಅತಿಥಿ ಸತ್ಕಾರ ಯೋಗ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಕಾರ್ಯರಂಗದ ಕರೆಗಳಿಗೆ ಸ್ಪಂದನ.. ಉದ್ಯೋಗಸ್ಥರಲ್ಲಿ ಕೆಲವರಿಗೆ ವಿಶ್ರಾಂತಿ ಇಲ್ಲ. ವೃತ್ತಿರಂಗದ ಮಿತ್ರರಿಂದ ಸಹಾಯಕ್ಕೆ ಕೋರಿಕೆ. ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುವ ಒತ್ತಡ. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಶುಭ ದಿನ. ಗಣಪತಿ ಅಥರ್ವಶೀರ್ಷ, ಶಿವಕವಚ, ಶನಿಮಹಾತ್ಮೆ ಓದಿ.
ಮೀನ:
ಸಹಜವಾದ ಕೆಲಸಗಳ ಒತ್ತಡ.. ಜನಸೇವಾ ಕಾರ್ಯಗಳಿಗೆ ಪ್ರೋತ್ಸಾಹ. ಭೂಮಿ ಖರೀದಿ, ಮಾರಾಟದಲ್ಲಿ ಲಾಭ. ಗುರುಸಮಾನ ವ್ಯಕ್ತಿಯ ಮಾರ್ಗದರ್ಶನ. ದೇವಾಲಯ ದರ್ಶನ ಸಂಭವ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.