ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ?

Daily Horoscope: ಇಂದು (ಭಾನುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Aug 30, 2026 - 09:27
ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ?

ಮೇಷ:

ದುಡಿದು ಬಳಲಿದವರಿಗೆ ವಿರಾಮದ ಆನಂದ.. ಸ್ಥಿರಾಸ್ತಿ ವಿಸ್ತರಣೆಗೆ ಕಾರ್ಯಯೋಜನೆ. ಅಭಿವೃದ್ಧಿ ಕಾರ್ಯಗಳ ಅವಲೋಕನ. ಕುಟುಂಬದಲ್ಲಿ ಹರ್ಷದ ಘಟನೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಸಮಾಧಾನಗಳ ವಾತಾವರಣ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.

 ವೃಷಭ:

ಆರು ದಿನಗಳ ಪರಿಶ್ರಮದ ಬಳಿಕ ವಿರಾಮದ ಆನಂದ.. ದೂರ ದೇಶದಲ್ಲಿರುವ ಮಕ್ಕಳೊಡನೆ ಸಂಭಾಷಣೆ. ಬಂಧುಗಳ ಮನೆಯಲ್ಲಿ ದೇವತಾಕಾರ್ಯ. ಆಪ್ತಮಿತ್ರನ ಹಠಾತ್ ಭೇಟಿ. ಇಷ್ಟದೇವರ ಆಲಯ ಸಂದರ್ಶನ.ಮನೆಯಲ್ಲಿ ಪ್ರೀತಿ, ಸೌಹಾರ್ದದ ವಾತಾವರಣ. ಗಣಪತಿ ಅಥರ್ವಶೀರ್ಷ, ಹನುಮಾನ್ ಚಾಲೀಸಾ, ಆದಿತ್ಯ ಹೃದಯ ಓದಿ.

ಮಿಥುನ:

ಭಗವಂತನ ಅನುಗ್ರಹದಿಂದ  ಕ್ಷೇಮದ ಅನುಭವ.. ಉದ್ಯೋಗ ಸ್ಥಾನದ ಮಿತ್ರರ ಆಗಮನ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ದರ್ಶನ. ಪಿತ್ರಾರ್ಜಿತ ಆಸ್ತಿ ಅಭಿವೃದ್ಧಿ ಕಾರ್ಯ ಮುಂದುವರಿಕೆ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಶಿವಪಂಚಾಕ್ಷರ ಸ್ತೋತ್ರ ಓದಿ.

ಕರ್ಕಾಟಕ:

ರಜೆಯನ್ನು ಪೂರ್ಣವಾಗಿ ಅನುಭವಿಸಿ.. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ  ಕೈತುಂಬಾ ಲಾಭ. ಕೃಷಿಕಾರ್ಯಗಳಿಗೆ ಅಸ್ಥಿರ ಹವೆಯಿಂದ ತೊಂದರೆ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ. ಗಣೇಶ ಅಷ್ಡಕ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಸಿಂಹ:

ಆರು ದಿನಗಳ ಸಾಧನೆಗಳ ಸಿಂಹಾವಲೋಕನ.. ಮನೆಗೆ ಬಂದ ಕಿರಿಯ ಸಹೋದ್ಯೋಗಿಗಳಿಂದ ಗೌರವಾರ್ಪಣೆ. ಉದ್ಯೋಗಾಸಕ್ತ ಹುಡುಗರಿಗೆ  ಮಾರ್ಗದರ್ಶನ. ಐಟಿ ಉದ್ಯೋಗಿಗಳಿಗೆ ಆಪ್ತಸಲಹಾ ಕಾರ್ಯಕ್ರಮ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಆನಂದದ ದಿನ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

ಕನ್ಯಾ:

ಹಿತಶತ್ರುಗಳ ಪೀಡೆಯಿಂದ ಬಿಡುಗಡೆ.. ಸರ್ಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ನೆಮ್ಮದಿ. ಹಳೆಯ ಒಡನಾಡಿಯ ಪುನರ್ಮಿಲನ.  ಕುಟುಂಬದ ಹಿರಿಯರ ಭೇಟಿ. ದೂರದಲ್ಲಿರುವ ಕುಲದೇವರ ದೇವಾಲಯ, ನಾಗಸನ್ನಿಧಿ ಸಂದರ್ಶನ. ಗಣೇಶ ತ್ರಿಶತಿ ಸ್ತೋತ್ರ, ನರಸಿಂಹ ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ತುಲಾ:

ಕೆಲಸ ಕಾರ್ಯಗಳು ಮುಗಿದ ಸಮಾಧಾನ.. ಸಹೋದ್ಯೋಗಿಯ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಅವಿವಾಹಿತ ಹುಡುಗ-ಹುಡುಗಿಯರಿಗೆ ಶುಭಕಾಲ ಸನ್ನಿಹಿತ. ಮಕ್ಕಳ ಪ್ರತಿಭೆ ಅನಾವರಣದಿಂದ ಪೋಷಕರಿಗೆ ಹರ್ಷ. ಮಹಿಳೆಯರ ಸ್ವೋದ್ಯೋಗ ಯೋಜನೆಗೆ ನಿರೀಕ್ಷೆ ಮೀರಿದ ಯಶಸ್ಸು.ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ವೃಶ್ಚಿಕ:

ಬರುವ ಸಪ್ತಾಹದ ಕಾರ್ಯನಿರ್ವಹಣೆಗೆ ಸಿದ್ಧತೆ.. ಬಂಧುವರ್ಗದಿಂದ ಶುಭವಾರ್ತೆ. ಲೇವಾದೇವಿ ವ್ಯವಹಾರದಲ್ಲಿ ಮಧ್ಯಮ ಲಾಭ. ಯಂತ್ರೋಪಕರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಮೆಕಾನಿಕ್ ವೃತ್ತಿಯವರಿಗೆ ಉದ್ಯೋಗಾವಕಾಶ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಧನು:

ಆಂತರಿಕ ಸಾಧನೆಯಲ್ಲಿ ಪ್ರಗತಿ.. ಸಾಹಿತ್ಯ ಸಂಗೀತಾದಿ ಕಲಾಸಂಬಂಧಿ ಚಟುವಟಿಕೆಗಳಲ್ಲಿ ಆಸಕ್ತಿ. ಹಳೆಯ ಗೆಳೆಯರ ಸಂಪರ್ಕದಿಂದ ಹರ್ಷ.ಕೃಷಿ ಚಟುವಟಿಕೆಗಳು ಪ್ರಗತಿಯಲ್ಲಿ. ಯಂತ್ರೋಪಕರಣ ಬಿಡಿಭಾಗಗಳಿಗೆ ಅಧಿಕ ಬೇಡಿಕೆ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಮಕರ:

ಕಾರ್ಯರಂಗದ ಒತ್ತಡಗಳಿಗೆ ಒಂದು ದಿನದ ವಿರಾಮ.. ಮನೆಮಂದಿಯೊಂದಿಗೆ ದೇವತಾರಾಧನೆ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಟೈಲರಿಂಗ್ ವೃತ್ತಿಯವರಿಗೆ ಅನುಕೂಲ. ಬಂಧುಗಳ ಜೊತೆಯಲ್ಲಿ ದೇವಾಲಯಕ್ಕೆ ಭೇಟಿ. ಗಣಪತಿ ಅಥರ್ವಶೀರ್ಷ, ಆದಿತ್ಯ ಹೃದಯ, ಹನುಮಾನ್ ಚಾಲೀಸಾ ಓದಿ.

ಕುಂಭ:

ನಿಮಗೆ ಕೆಲಸದ ಬದಲಾವಣೆಯೇ ವಿಶ್ರಾಂತಿ.. ಉತ್ಪನ್ನಗಳಿಗಾಗಿ ಬಂದ ಬೇಡಿಕೆಗಳ ಕಡೆಗೆ ಗಮನ ಹರಿಸುವ ಅನಿವಾರ್ಯತೆ. ಸಮಾಜ ಸೇವಾ ಕಾರ್ಯಗಳತ್ತ ಗಮನ. ಕುಲದೇವರ ಆಲಯ ಸಂದರ್ಶನ. ಮನೆಯಲ್ಲಿ ಹಿರಿಯರು, ಸಂಗಾತಿ, ಮಕ್ಕಳಿಗೆ ಸಂಭ್ರಮ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ಸತತ ದುಡಿಮೆಯ ಬಳಿಕ ಒಂದು ದಿನದ ವಿರಾಮ.. ವೃತ್ತಿಬಾಂಧವರಿಂದ ಕೃತಜ್ಞತೆ ಸಲ್ಲಿಕೆ. ತಾಯಿಯ ಯೋಗಕ್ಷೇಮ ವಿಚಾರಣೆ. ಗುರುಹಿರಿಯರ ಭೇಟಿಗಾಗಿ ಸಣ್ಣ ಪ್ರಯಾಣ ಸಂಭವ. ಮನೆಮಂದಿಯ ಆರೋಗ್ಯ ಉತ್ತಮ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.