Awarapan-2: 150 ಕೋಟಿ ಗಡಿ ದಾಟಿದ ಅವರಪನ್-2..!
Awarapan-2: ಬಾಲಿವುಡ್ ನಟ ಇಮ್ರಾನ್ ಹಶ್ಮಿ ನಟನೆಯ ಅವರಪನ್-2 ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಬಾಲಿವುಡ್ ನಟ ಇಮ್ರಾನ್ ಹಶ್ಮಿ (Emraan Hashmi) ನಟನೆಯ ಅವರಪನ್-2 (Awarapan-2) ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಐದನೇ ದಿನವಾದ ಬುಧವಾರವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ರೂ.150 ಕೋಟಿ ಗಡಿ ದಾಟಿದೆ.
ಸ್ಯಾಕ್ನಿಲ್ಕ್ ಪ್ರಕಾರ, ನಿನ್ನೆ ಒಂದೇ ದಿನ ರೂ.6.75 ಕೋಟಿ (ನೆಟ್) ಗಳಿಕೆ ಕಂಡಿದೆ. 11,071 ಶೋಗಳು ಪ್ರದರ್ಶನಗೊಂಡಿವೆ. ಇದರೊಂದಿಗೆ ವಿಶ್ವಾದ್ಯಂತ ಸರಿ ಸುಮಾರು ರೂ.153.59 ಕೋಟಿ (ಗ್ರಾಸ್) ಬಾಚಿದೆ.
ಈ ಚಿತ್ರಕ್ಕೆ ನಿತಿನ್ ಕಕ್ಕರ್ ಆಕ್ಷನ್ ಕಟ್ ಹೇಳಿದ್ದಾರೆ. ದಿಶಾ ಪಟಾನಿ, ಶಬಾನಾ ಅಜ್ಮಿ ಹಾಗೂ ಖುಷಾ ಕಪಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ 2007ರಲ್ಲಿ ತೆರೆಕಂಡಿದ್ದ 'ಅವರಪನ್-1' ಸೋತಿತ್ತು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.