Red Sandalwood: ರಕ್ತಚಂದನದ ಉಪಯೋಗಗಳು ಏನು ಗೊತ್ತಾ?
Red Sandalwood: ರಕ್ತಚಂದನವು ಅತ್ಯಮೂಲ್ಯವಾದ ಮರವಾಗಿದ್ದು, ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.
ರಕ್ತಚಂದನ (Red Sandalwood) ಅತ್ಯಮೂಲ್ಯವಾದ ಮರವಾಗಿದೆ. ಇದು ಆಂಧ್ರಪ್ರದೇಶದ ಶೇಷಾಚಲಂ ಬೆಟ್ಟಗಳಲ್ಲಿ ಮುಖ್ಯವಾಗಿ ಬೆಳೆಯುತ್ತದೆ. ಈ ಮರದ ಕಾಂಡದ ಒಳಭಾಗವು ಕೆಂಪು ಬಣ್ಣದಿಂದ ಕೂಡಿದ್ದು, ಸುವಾಸನೆಭರಿತವಾಗಿದೆ.
ಆಯುರ್ವೇದದ ಪ್ರಕಾರ, ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಜ್ವರ, ಉರಿಯೂತ ಹಾಗೂ ಚರ್ಮರೋಗಕ್ಕೆ ಸಹಕಾರಿಯಾಗಿದೆ. ಈ ಮರದಿಂದ ಮೂರ್ತಿಗಳು, ಸಂಗೀತ ವಾದ್ಯಗಳು ಹಾಗೂ ಸುಗಂಧ ದ್ರವ್ಯಗಳನ್ನು ತಯಾರಿಸಲಾಗುತ್ತದೆ.
ಅತಿ ಹೆಚ್ಚಿನ ಬೇಡಿಕೆಯಿಂದಾಗಿ, ಇದನ್ನು ಅಕ್ರಮವಾಗಿ ಕಡಿಯಲಾಗುತ್ತದೆ. ಆದ್ದರಿಂದ ಸರ್ಕಾರವು 'ರಕ್ತಚಂದನ'ವನ್ನು ಸಂರಕ್ಷಿತ ಮರವೆಂದು ಘೋಷಿಸಿದೆ. ಇದು ನಮ್ಮ ನೈಸರ್ಗಿಕ ಸಂಪತ್ತಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯನ್ನು ಹೊಂದಿದೆ.
ಇದರ ಎಲೆಗಳು ಚಿಕ್ಕದಾಗಿ ದುಂಡಾಗಿರುತ್ತವೆ. ಬರಗಾಲವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. ನಿಧಾನವಾಗಿ ಬೆಳೆಯುವ ಈ ಮರವನ್ನು ಬೆಳೆಸಿ ಸಂರಕ್ಷಿಸುವುದು, ನಮ್ಮೆಲ್ಲರ ಕರ್ತವ್ಯವಾಗಿದೆ. ಇದನ್ನು ಭವಿಷ್ಯದ ಪೀಳಿಗೆಗಾಗಿ ಉಳಿಸಬೇಕು. ಜೊತೆಗಿದು ಪರಿಸರ ಸಮತೋಲನಕ್ಕೂ ಅತ್ಯಾವಶಕವಾಗಿದೆ.