ಪಟ್ಟೆಯಲ್ಲಿ ಸೆ.5ಕ್ಕೆ ಶ್ರೀಕೃಷ್ಣ ಲೀಲೆ-2026 & ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭ

Puttur: ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಆವರಣದಲ್ಲಿ, ಸೆ.05 ಶನಿವಾರದಂದು 'ಶ್ರೀಕೃಷ್ಣ ಲೀಲೆ-2026' ಹಾಗೂ ಪ್ರತಿಷ್ಠಿತ 'ಸಾಂದೀಪನಿ ಗುರುಪ್ರಶಸ್ತಿ' ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ.

Sep 3, 2026 - 14:33
ಪಟ್ಟೆಯಲ್ಲಿ ಸೆ.5ಕ್ಕೆ ಶ್ರೀಕೃಷ್ಣ ಲೀಲೆ-2026 & ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭ

ಪುತ್ತೂರು (ಬಡಗನ್ನೂರು): ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಆವರಣದಲ್ಲಿ, ಸೆ.05 ಶನಿವಾರದಂದು 'ಶ್ರೀಕೃಷ್ಣ ಲೀಲೆ-2026' ಹಾಗೂ ಪ್ರತಿಷ್ಠಿತ 'ಸಾಂದೀಪನಿ ಗುರುಪ್ರಶಸ್ತಿ' ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ.

ದ್ವಾರಕಾ ಪ್ರತಿಷ್ಠಾನ ಸಂಸ್ಥೆ ಆಶ್ರಯದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು, ಹಳೆಯ ವಿದ್ಯಾರ್ಥಿ ಸಂಘ, ವಿವಿಧ ಸ್ಥಳೀಯ ಯುವಕ ಮಂಡಲಗಳು ಮತ್ತು ಭಜನಾ ಮಂಡಳಿಗಳ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ಕಾರ್ಯಕ್ರಮಗಳ ವಿವರ:

ಅಂದು ಬೆಳಗ್ಗೆ 9ಕ್ಕೆ 'ಶ್ರೀಕೃಷ್ಣ ಸ್ತುತಿ'ಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. 10 ಗಂಟೆಗೆ ಮಕ್ಕಳ 'ಶ್ರೀಕೃಷ್ಣ ವೇಷ ಸ್ಪರ್ಧೆ' ಹಾಗೂ ಸಾಹಸಮಯ 'ಮೊಸರು ಕುಡಿಕೆ ಸ್ಪರ್ಧೆ' ನಡೆಯಲಿದೆ. ಸಾರ್ವಜನಿಕರಿಗಾಗಿ ರೋಮಾಂಚಕ ವಾಲಿಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ಜರುಗಲಿವೆ. 

ಮಧ್ಯಾಹ್ನ 12ಕ್ಕೆ ವೈಭವದ 'ಸಭಾ ಕಾರ್ಯಕ್ರಮ' ಮತ್ತು ಶಿಕ್ಷಣ/ ಸಮಾಜ ಸೇವೆಯ ಸಾಧಕರಿಗೆ 'ಸಾಂದೀಪನಿ ಗುರುಪ್ರಶಸ್ತಿ' ಪ್ರದಾನ ಮಾಡಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಆಕರ್ಷಕ ಸ್ತಬ್ದಚಿತ್ರಗಳೊಂದಿಗೆ 'ಶ್ರೀಕೃಷ್ಣ ರಥ'ದ ಭವ್ಯ ಮೆರವಣಿಗೆಯೂ ನಡೆಯಲಿದೆ. 

ಈ ಕಾರ್ಯಕ್ರಮದ ಯಶಸ್ವಿಗೆ ಎಸ್.ಕೆ.ಫ್ರೆಂಡ್ಸ್ (ಮುಡಿಪಿನಡ್ಕ), ಶ್ರೀಕೃಷ್ಣ ಯುವಕಮಂಡಲ (ಪಟ್ಟೆ), ಶ್ರೀಕೃಷ್ಣ ಹಿರಿಯ ವಿದ್ಯಾರ್ಥಿ ಸಂಘ (ಪಟ್ಟೆ), ಶ್ರೀಕೃಷ್ಣ ಭಜನಾ ಮಂಡಳಿ (ಮುಡಿಪಿನಡ್ಕ), ಅಯ್ಯಪ್ಪ ಭಜನಾ ಮಂಡಳಿ (ಪೆರಿಗೇರಿ) ಮತ್ತು ನವಚೈತನ್ಯ ಯುವಕಮಂಡಲ (ಪೆರಿಗೇರಿ) ಕೂಡ ಸಹಕಾರ ನೀಡಿದೆ.

ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪೋಷಕರು - ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕಾಗಿ ಸಂಘಟಕರು ಕೋರಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.