ದಿನ ಭವಿಷ್ಯ: ಇಂದು ಯಾರಿಗೆ ಶುಭ ಫಲ?

Daily Horoscope: ಇಂದು (ಬುಧವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Sep 2, 2026 - 10:09
ದಿನ ಭವಿಷ್ಯ:  ಇಂದು ಯಾರಿಗೆ ಶುಭ ಫಲ?

ಮೇಷ:

ಶಾರೀರಿಕ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ.. ಉದ್ಯಮಗಳಿಗೆ ಬಹಳಷ್ಟು ಅನುಕೂಲ. ಪ್ರಕೃತಿಯ ಜೊತೆಯಲ್ಲಿ ಸಾಮರಸ್ಯದಿಂದ ಆನಂದ. ವಾಹನ ಚಾಲನೆಯಲ್ಲಿ ಎಚ್ಚರ. ದೇವೀ ಕ್ಷೇತ್ರ ದರ್ಶನದ ಸಾಧ್ಯತೆ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.

ವೃಷಭ:

ಸಂಸಾರ, ವ್ಯವಹಾರಗಳಲ್ಲಿ ಸಮತೋಲನ.. ಉದ್ಯೋಗ ಸ್ಥಾನದಲ್ಲಿ ಸಹಕಾರ. ಗೃಹೋದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ವೃತ್ತಿಪರರಿಗೆ ಸಮಯದ ಸವಾಲು. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಮಿಥುನ:

ಉದ್ಯಮಿಗಳ ಪಾಲಿಗೆ ಒಳ್ಳೆಯ ದಿನ.. ಅವಕಾಶಗಳ ಸಕಾಲಿಕ ಉಪಯೋಗದಿಂದ ಲಾಭ. ಅಕಸ್ಮಾತ್ ಧನಲಾಭ ಸಂಭವ. ಎಳೆಯರ ಮನೋವಿಕಾಸಕ್ಕೆ ಸೂಕ್ತ ಪ್ರಯತ್ನ. ಅನ್ಯರ ಭಾವನೆಗಳನ್ನು ಧಿಕ್ಕರಿಸದೆ ಗೌರವಿಸಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಹನುಮತ್ಕವಚ ಓದಿ.

ಕರ್ಕಾಟಕ:

ಎಲ್ಲರ ಮೇಲೆ ಸದ್ಭಾವನೆ ಇರಲಿ.. ಖಾದಿ ಉತ್ಪನ್ನ ವ್ಯಾಪಾರಿಗಳಿಗೆ ಲಾಭ. ಹಿರಿಯರ ಆರೋಗ್ಯ ಗಮನಿಸಿ. ಸದ್ಗ್ರಂಥ ವಾಚನದಲ್ಲಿ ಆಸಕ್ತಿ. ಹತ್ತಿರದ ಬಂಧುಗಳ ಕಡೆಯಿಂದ ಶುಭವಾರ್ತೆ. ಗಣೇಶ. ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ,  ಗುರುಸ್ತೋತ್ರ ಓದಿ.

ಸಿಂಹ:

ಹೊಸ ಪ್ರಯೋಗಗಳ ಶುಭಾರಂಭ.. ನಿರಂತರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಅಧಿಕ ಲಾಭ. ಪ್ರಕೃತಿ ರಕ್ಷಣೆಯ ಪ್ರಯತ್ನಗಳಲ್ಲಿ ಭಾಗಿ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

ಕನ್ಯಾ:

ಗೃಹೋಪಕರಣ ಖರೀದಿಗೆ ಧನವ್ಯಯ.. ತೋಟಗಾರಿಕೆ ಉದ್ಯಮಿಗಳಿಗೆ ಅನುಕೂಲ. ಹೊಲಿಗೆ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ. ರಕ್ಷಣಾ ವಿಭಾಗಗಳಲ್ಲಿ ಸೇವೆ ಸಲ್ಲಿಸುವವರಿಗೆ ಶುಭ. ದೇಹ ದಣಿಯುವಷ್ಟು ಪ್ರಯಾಣ ಬೇಡ. ಗಣೇಶ ದ್ವಾದಶನಾಮ ಸ್ತೋತ್ರ , ಶಿವಪಂಚಾಕ್ಷರ ಸ್ತೋತ್ರ,  ಲಕ್ಷ್ಮೀಸ್ತೋತ್ರ ಓದಿ.

ತುಲಾ:

ಚುರುಕುತನದ ಸ್ಪಂದನದಿಂದ ಲಾಭ.. ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ. ಆರಾಧನಾ ಸ್ಥಾನಕ್ಕೆ ಭೇಟಿಯಿಂದ ಹರ್ಷ. ಸಂಗೀತ ಶ್ರವಣದಿಂದ ಆರೋಗ್ಯ ವೃದ್ಧಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ದೇವೀಸ್ತೋತ್ರ ಓದಿ.

ವೃಶ್ಚಿಕ: 

ಒಂದಿಲ್ಲೊಂದು ಬಗೆಯ ಹವ್ಯಾಸಕ್ಕೆ ಸಮಯಾನುಕೂಲ.. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಉದ್ಯೋಗ ಅರಸುವ ಶಿಕ್ಷಿತರಿಗೆ  ಮಾರ್ಗದರ್ಶನ. ಲೌಕಿಕ-ಆಧ್ಯಾತ್ಮಿಕ ಜೀವನ ಸಮನ್ವಯ. ದೇವತಸ ಕಾರ್ಯದಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

ಧನು:

ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ.. ಅಸಹಾಯಕರಿಗೆ ಸಹಾಯ ಮಾಡುವ ಅವಕಾಶ. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಕರಕುಶಲ ಸಾಮಗ್ರಿ ತಯಾರಕರಿಗೆ ಪ್ರೋತ್ಸಾಹ. ನಾಟಿ ಔಷಧಿ ಸೇವನೆಯಿಂದ ಆರೋಗ್ಯ ಪ್ರಾಪ್ತಿ. ಗಣೇಶ ಸ್ತೋತ್ರ, ವೇದಸಾರ ಶಿವಸ್ತೋತ್ರ, ಗೌರೀದಶಕ ಓದಿ.

 ಮಕರ:

ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ  ಲಾಭ.. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ. ಅಶಕ್ತರಿಗೆ ನೆರವಾಗುವ ಅವಕಾಶ. 
ಒಡಹುಟ್ಟುಗಳ ಸಹಾಯದಿಂದ ಕ್ಷೇಮ ಪ್ರಾಪ್ತಿ. ಹೊಸ ಪರಿಚಯಸ್ಥರಿಂದ ಅಯಾಚಿತ ಸಹಾಯ. ಗಣೇಶ ಕವಚ, ದತ್ತಾತ್ರೇಯ.  ಸ್ತೋತ್ರ,  ಹನುಮಾನ್ ಚಾಲೀಸಾ ಓದಿ.

ಕುಂಭ:

ಕಾರ್ಯಕ್ಷೇತ್ರ ವಿಸ್ತರಣೆಯಿಂದ ಸೌಖ್ಯ.. ಉದ್ಯೋಗಸ್ಥರಿಗೆ ಹೊಸ ವಿಭಾಗದಲ್ಲಿ ಯಶಸ್ಸು. ವೃತ್ತಿರಂಗದ ಮಿತ್ರರಿಂದ ಸಹಾಯಕ್ಕೆ ಕೋರಿಕೆ. ಗ್ರಾಹಕರ ವಿಶ್ವಾಸ ಉಳಿಸುವ ಪ್ರಯತ್ನ. ಉದ್ಯೋಗಾಸಕ್ತರಿಗೆ ಅವಕಾಶ ಗೋಚರ. ಗಣೇಶ ಕವಚ, ರಾಮರಕ್ಷಾ ಅದರ, ಶನಿಮಹಾತ್ಮೆ ಓದಿ.

ಮೀನ:

ಕೆಲಸಗಳ ಒತ್ತಡ ಅನಿವಾರ್ಯ.. ಪ್ರಭಾವಿ ವ್ಯಕ್ತಿಯ ನೆರವಿನ ಭರವಸೆ. ನಿರ್ಮಾಣ ವ್ಯವಹಾರದಲ್ಲಿ ಮುನ್ನಡೆ. ಗುರುಸಮಾನರೊಡನೆ ಸಮಾಲೋಚನೆ. ಬಂಧುವರ್ಗದ ಶುಭ ಸಮಾರಂಭದಲ್ಲಿ ಭಾಗಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.