ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ?

Daily Horoscope: ಇಂದು (ಸೋಮವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Aug 31, 2026 - 09:54
ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ?

ಮೇಷ:

ಸಪ್ತಾಹದ ದೊಡ್ಡ ಸಾಧನೆಗಳ ದಿನ.. ಕಟ್ಟಡ ನಿರ್ಮಾಪಕರಿಗೆ ಅನುಕೂಲ. ಕೃಷ್ಯುತ್ಪನ್ನಗಳ ಮಾರಾಟ ವೃದ್ಧಿ. ಅಪರೂಪದ  ಬಂಧುಗಳ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ.ಗಣೇಶ ಸ್ತೋತ್ರ, ವಿಶ್ವನಾಥಾಷ್ಟಕ, ಶನಿಮಹಾತ್ಮೆ ಓದಿ.

ವೃಷಭ:

ಹಣಕಾಸು ವ್ಯವಹಾರ ಸುಗಮ.. ಸರ್ಕಾರಿ ನೌಕರರಿಗೆ ಕೊಂಚ ಆತಂಕ. ಹಿರಿಯರ ಮನೆಯಲ್ಲಿ ದೇವತಾರಾಧನೆ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗೃಹೋತ್ಪನ್ನ ಖಾದ್ಯಗಳಿಂದ ಅಧಿಕ ಆದಾಯ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

ಮಿಥುನ:

ದೀರ್ಘಕಾಲದ ಕಾಟದಿಂದ ಬಿಡುಗಡೆ.. ಹಿತಶತ್ರುಗಳ ಪೀಡೆಯಿಂದ ಮುಕ್ತಿ. ವ್ಯವಹಾರಸ್ಥರಿಗೆ ಅನುಕೂಲದ ದಿನ. ದೃಢವಾದ ಆತ್ಮವಿಶ್ವಾಸದಿಂದ  ಕಾರ್ಯಜಯ. ಗೃಹಿಣಿಯರು,ಮಕ್ಕಳಿಗೆ ನೆಮ್ಮದಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಕರ್ಕಾಟಕ:

ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ ನೆಮ್ಮದಿ.. ಪಾಲುದಾರಿಕೆ ವ್ಯವಹಾರ ಮುನ್ನಡೆ. ಭೂಮಿ ಖರೀದಿ-ಮಾರಾಟ  ವ್ಯವಹಾರಸ್ಥರಿಗೆ ಉತ್ತಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ. ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಾಪರಾಧ ಕ್ಷಮಾಪಣಾ ಸ್ತೋತ್ರ, ಗುರುಸ್ತೋತ್ರ ಓದಿ.

ಸಿಂಹ:

ಸ್ವಂತ ವ್ಯವಹಾರಸ್ಥರಿಗೆ ಲಕ್ಷ್ಮೀ ಕಟಾಕ್ಷ.. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಹತ್ತಿರದ ದೇವೀಕ್ಷೇತ್ರಕ್ಕೆ ಸಂದರ್ಶನ.

ಕನ್ಯಾ:

ಅನಿರೀಕ್ಷಿತ ಮೂಲದಿಂದ  ಧನಪ್ರಾಪ್ತಿ.. ಉದ್ಯೋಗಸ್ಥರಿಗೆ ಸಹೋದ್ಯೋಗಿಗಳ ಸಹಾಯ. ವ್ಯವಹಾರಸ್ಥರಿಗೆ ಕಾರ್ಯ ವಿಸ್ತರಿಸಲು ಉತ್ಸಾಹ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಪಂಚರತ್ನ, ನರಸಿಂಹ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ತುಲಾ:

ಉದ್ಯೋಗ ಕ್ಷೇತ್ರದಲ್ಲಿ ಹೊಸ ಬಗೆಯ ಕಾರ್ಯಗಳು.. ನಿವೇಶನ, ಮನೆ ಖರೀದಿ-ಮಾರಾಟ ವ್ಯವಹಾರದಲ್ಲಿ ಲಾಭ. ಕೃಷಿ ಉತ್ಪನ್ನ ಮಾರಾಟಗಾರರಿಗೆ ತೃಪ್ತಿಕರ ಲಾಭ. ಅಧ್ಯಾಪಕ ವೃತ್ತಿಯವರಿಗೆ ಕೆಲಸದ ಹೊರೆ.ಹಿರಿಯರಿಗೆ ಉಲ್ಲಾಸದವಾತಾವರಣ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ವೃಶ್ಚಿಕ:

ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಸಮಾಧಾನ.. ಮಾಲೀಕ-ನೌಕರರ ಬಾಂಧವ್ಯ ವೃದ್ಧಿ. ಆಸ್ತಿ, ಮನೆ ದಳ್ಳಾಳಿಗಳಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ ಸ್ವಲ್ಪಮಟ್ಟಿನ ಲಾಭ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಗಣಪತಿ ಅಥರ್ವಶೀರ್ಷ, ವೆಂಕಟೇಶ್ವರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಧನು:

ಹೊಂದಾಣಿಕೆ, ಕಾರ್ಯನಿಷ್ಠೆಗಳಿಂದ ಯಶಸ್ಸು.. ಸಹೋದ್ಯೋಗಿಗಳಿಂದ ಸಹಕಾರ. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಮಕ್ಕಳ ವ್ಯಾಸಂಗಾಸಕ್ತಿ ಸುಧಾರಣೆ. ಗಣೇಶ ಪಂಚರತ್ನ, ಶಿವ ಕವಚ, ಮಹಿಷಮರ್ದಿನಿನಿ ಸ್ತೋತ್ರ ಓದಿ.

ಮಕರ:

ಉದ್ಯೋಗ ಸ್ಥಾನದಲ್ಲಿ ನೆಮ್ಮದಿ.. ಮನೆಮಂದಿಯ ಸಹಕಾರ,ಉತ್ತಮ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಹೆಚ್ಚಿನವರಿಗೆ ಮಿಶ್ರಫಲಗಳ ಅನುಭವ. ಗಣೇಶ ಕವಚ, ದೇವೀಕವಚ, ಹನುಮಾನ್ ಚಾಲೀಸಾ ಓದಿ.

ಕುಂಭ:

ಸಾಮಾಜಿಕ ಚಟುವಟಿಕೆಗಳ ಒತ್ತಡ.. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಅವಿಶ್ರಾಂತ  ಚಟುವಟಿಕೆಗಳಿಂದ ಆಯಾಸ. ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಕವಚ ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ತ್ವರಿತಗತಿಯಿಂದ ಕಾರ್ಯಗಳ ನಿರ್ವಹಣೆ.. ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ.. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯಿಂದ ವ್ಯವಹಾರದಲ್ಲಿ ಉತ್ತಮ ಸಹಕಾರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ ಶನಿಮಹಾತ್ಮೆ ಓದಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.