ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?

Daily Horoscope: ಇಂದು (ಭಾನುಭಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Aug 23, 2026 - 11:50
Aug 23, 2026 - 12:34
ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?

ಮೇಷ:

ವಿರಾಮದ ಆನಂದವನ್ನು ಅನುಭವಿಸಿ.. ಸಂಸಾರದ ಕಡೆಗೆ ಗಮನ ನೀಡಿಕೆ. ಉದ್ಯಮಿಗಳಿಗೆ ವ್ಯವಹಾರದ ಚಿಂತೆ ಇಲ್ಲ. ಹೊಸ ಕ್ಷೇತ್ರಗಳಿಗೆ ಪಾದಾರ್ಪಣೆ. ದೇವತಾ ಕಾರ್ಯಗಳಲ್ಲಿ ಮಗ್ನತೆ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ. 

ವೃಷಭ:

ಎಣಿಸದ ಮೂಲದಿಂದ ಧನಾಗಮ.. ಉದ್ಯಮಗಳ ಬೆಳವಣಿಗೆ ಅಬಾಧಿತ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಲಾಭ. ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಗೆ ಪ್ರೋತ್ಸಾಹ ಪ್ರಕೃತಿ ಸಂರಕ್ಷಣೆಯ ಕಾರ್ಯಳಿಗೆ ಪ್ರೋತ್ಸಾಹ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.

ಮಿಥುನ:

ವಿರಾಮದ ದಿನ ಹೊಸ ಕನಸುಗಳು.. ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು. ಪ್ರಾಮಾಣಿಕ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ. ಮಕ್ಕಳ   ಜ್ಞಾನ ವಿಸ್ತರಣೆಗೆ ವಿಶೇಷ ವ್ಯವಸ್ಥೆ. ಮನೆಯವರ ಆರೋಗ್ಯ ಉತ್ತಮ. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ಗುರುಸ್ತೋತ್ರ ಓದಿ.

ಕರ್ಕಾಟಕ:

ಮಹತ್ವದ ಸಾಮಾಜಿಕ ಕಾರ್ಯ ಸಾಧನೆ.. ಜ್ಞಾನವೃದ್ಧಿಯ ಪ್ರಯತ್ನಕ್ಕೆ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಪ್ರಾಪ್ತ ವಯಸ್ಕರಿಗೆ ಕಂಕಣ ಭಾಗ್ಯ. ಹೋಟೆಲ್ ಉದ್ಯಮಿಗಳಿಗೆ ಲಾಭ. ಗಣೇಶ ಪಂಚರತ್ನ, ಗಜೇಂದ್ರಮೋಕ್ಷ ಸ್ತೋತ್ರ, ಶನಿಸ್ತೋತ್ರ ಓದಿ.

ಸಿಂಹ:

ಪ್ರಕೃತಿಯ ಇಚ್ಛೆಗೆ ತಲೆಬಾಗಿ ನಡೆಯಿರಿ.. ಒಡನಾಡಿಗಳ ಸ್ವಾಭಿಮಾನಕ್ಕೆ ಗೌರವ ಸಲ್ಲಲಿ.. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಹತ್ತಿರದ ದೇವಾಲಯಕ್ಕೆ ಸಂದರ್ಶನ. ಕುಟುಂಬದಲ್ಲಿ ಸರ್ವರಿಗೂ ಆರೋಗ್ಯ ವೃದ್ಧಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಕನ್ಯಾ:

ನಿರ್ದಿಷ್ಟ ಗುರಿಯ ಕಾರ್ಯಗಳ ಮುನ್ನಡೆ. ಶಿಸ್ತಿನ ಬದುಕಿಗೆ ಸಮಾಜದ ಗೌರವ. ಸರ್ಕಾರಿ ಅಧಿಕಾರಿಗಳಿಗೆ ಕೊಂಚ ನೆಮ್ಮದಿ. ಶಿಕ್ಷಿತರಿಗೆ  ಸೂಕ್ತ ಅವಕಾಶಗಳು ಗೋಚರ.. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ.ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ರವಿಸ್ತೋತ್ರ ಓದಿ.

ತುಲಾ:

ಹಗುರವಾದ ಗೃಹಕೃತ್ಯಗಳ ಹೊರೆ.. ಉದ್ಯೋಗಸ್ಥರಿಗೆ ವಿರಾಮದ ಆನಂದ. ಉದ್ಯೋಗಾಸಕ್ತರಿಗೆ  ಸೂಕ್ತ ಅವಕಾಶ. ಮನೆಯಲ್ಲಿ  ಎಲ್ಲರ ಆರೋಗ್ಯ  ಉತ್ತಮ. ಅನಿಯೋಜಿತ ಪ್ರಯಾಣದ ಸಾಧ್ಯತೆ. ಗಣೇಶ ದ್ವಾದಶನಾಮ ಸ್ತೋತ್ರ, ಹನುಮಾನ್ ಕವಚ, ಅಷ್ಡಲಕ್ಷ್ಮೀ ಸ್ತೋತ್ತ ಓದಿ.

ವೃಶ್ಚಿಕ:

ವೃತ್ತಿಪರರಿಗೆ ತೃಪ್ತಿಯ ಅನುಭವ.. ಉದ್ಯಮದಲ್ಲಿ ಅಪೂರ್ವ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯಿಂದ ಲಾಭ. ಲೇವಾದೇವಿ ಹಾಗೂ ಸಟ್ಟಾ ವ್ಯವಹಾರದಿಂದ ದೂರವಿರಿ. ಸಂಗೀತ, ಹರಿಕಥೆ ಶ್ರವಣಕ್ಕೆ ಸಮಯ ಮೀಸಲು. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಧನು:

ಉದ್ಯೋಗದ ಚಿಂತೆಗಳಿಗೆ ವಿರಾಮ.. ಪಾಲುದಾರಿಕೆ ಉದ್ಯಮ ಆರಂಭಕ್ಕೆ ವಿಘ್ನ. ಕೃಷಿ ಕ್ಷೇತ್ರದಲ್ಲಿ ಹೊಸ ಬಗೆಯ ಬೆಳೆಗಳ ಪ್ರಯೋಗ ತೃಪ್ತಿಕರ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಆದಾಯ ಹೆಚ್ಚಳ. ಪೂರ್ವ ದಿಕ್ಕಿನಿಂದ ಶುಭ ಸಮಾಚಾರ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

ಮಕರ:

ನಾಳೆಯ ಚಿಂತೆ  ಇಂದು ಬೇಡ.. ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸಿದ ತೃಪ್ತಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ  ಅಧಿಕ ಲಾಭ. ಯಂತ್ರೋಪಕರಣ ಬಿಡಿಭಾಗಗಳಿಗೆ ಬೇಡಿಕೆ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ , ಹನುಮಾನ್  ಚಾಲೀಸಾ ಓದಿ.

ಕುಂಭ:

ಸಮಾಜದ ಕರೆಗೆ ಸ್ಪಂದನ.. ಉತ್ಪನ್ನಗಳ ಗುಣಮಟ್ಟ ಸುಧಾರಣೆಯಿಂದ ಹೆಚ್ಚಿದ ಬೇಡಿಕೆ. ಯಂತ್ರೋಪಕರಣಗಳ ಖರೀದಿಯ ಊಧನವ್ಯಯ. ಗೃಹೋತ್ಪನ್ನಗಳಿಗೆ ಗ್ರಾಹಕರ ಮೆಚ್ಚುಗೆ. ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ, ಸಾಮರಸ್ಯ ವೃದ್ಧಿ. ಗಣೇಶ ದ್ವಾದಶನಾಮ ಸ್ತೋತ್ರ, ಕೃಷ್ಣಾಷ್ಟೋತ್ತರ ಶತನಾಮಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ಸಮಾಜ ಸೇವಕರಿಗೆ ಸಮ್ಮಾನ.. ಸಾಮಾಜಿಕ ವಲಯದಲ್ಲಿ  ಅನುಕೂಲಕರ ಸ್ಪಂದನ. ಧಾರ್ಮಿಕ ರಂಗದಲ್ಲಿ  ಗೌರವ ವೃದ್ಧಿ.  ಕೃಷಿಕರಿಗೆ ಆನಂದ ತರುವ ದಿನ. ಸಂಸಾರದಲ್ಲಿ ನೆಮ್ಮದಿಯ ಅನುಭವ. ಗಣೇಶ ಕವಚ, ದತ್ತಾತ್ರೇಯ ಸ್ಗೋತ್ರ, ಶನಿಮಹಾತ್ಮೆ ಓದಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.