Today Gold Price: ಚಿನ್ನದ ದರ ಮತ್ತೆ ಇಳಿಕೆ

Today Gold Price: : ಚಿನಿವಾರ ಪೇಟೆಯಲ್ಲಿ ಇಂದು ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯೂ ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.

Oct 7, 2026 - 11:37
Oct 7, 2026 - 11:38
Today Gold Price: ಚಿನ್ನದ ದರ ಮತ್ತೆ ಇಳಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯೂ ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.
 
ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.650 ಕಡಿಮೆಯಾಗಿ ರೂ.1,49,570 ಇದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.600 ಇಳಿಕೆಯಾಗಿ ರೂ.1,37,100ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.490 ಕಡಿಮೆಯಾಗಿ ರೂ.1,12,180 ಆಗಿದೆ.
 
ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಗ್ರಾಹಕರ ಖರೀದಿಗೆ ದೊರೆಯಲಿದೆ. 
 
ಷೇರುಪೇಟೆ: ನಕಾರಾತ್ಮಕ ವಹಿವಾಟು
 
ಭಾರತದ ಷೇರುಪೇಟೆ ವಹಿವಾಟು ಇಂದು ನಕಾರಾತ್ಮಕವಾಗಿದೆ. ಸೆನ್ಸೆಕ್ಸ್ 102.43 ಅಂಕಗಳು ಕುಸಿದು 72,965.38 ಅಂಕಗಳಿಗೆ ತಲುಪಿದೆ. ನಿಫ್ಟಿ 85.65 ಅಂಕಗಳು ಇಳಿದು 22,690.45 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
 
ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್‌ಟೆಲ್, ಕೋಟಕ್ ಬ್ಯಾಂಕ್ ಹಾಗೂ ಟೆಕ್ ಮಹೀಂದ್ರಾ ಷೇರುಗಳು ಲಾಭದಲ್ಲಿವೆ. ಟೈಟಾನ್, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎಂ&ಎಂ ಮತ್ತು ಎಲ್‌&ಟಿ ನಷ್ಟದಲ್ಲಿವೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.