ಲಕ್ಷಾಂತರ ಮರಗಳನ್ನು ಮನುಕುಲಕ್ಕೆ ಉಳಿಸಿದ ಹಿರಿಮೆ.. ಪುತ್ತೂರಿನ ಎಸ್.ಕೆ.ಆನಂದ್ ಕುಮಾರ್ ಎಂಬ ಮಾಸ್ಟರ್ ಮೈಂಡ್!
Master Plannery: ಸಾಂಪ್ರದಾಯಿಕ ನಿರ್ಮಾಣ ಪದ್ಧತಿಗೆ ಪರ್ಯಾಯವಾಗಿ ಮರದ ಅವಲಂಬನೆಯನ್ನು ಕಡಿಮೆ ಮಾಡಿ, ಕಾಂಕ್ರೀಟ್ ಆಧಾರಿತ ಪ್ರೀಕಾಸ್ಟ್ ತಂತ್ರಜ್ಞಾನದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ರೂಪಿಸುವ ಸಂಸ್ಥೆಯಾಗಿ 'ಮಾಸ್ಟರ್ ಪ್ಲ್ಯಾನರಿ' ಹೊರಹೊಮ್ಮಿದೆ.
Master Plannery: ಮನೆ ಕಟ್ಟಬೇಕು ಎಂದರೆ ಮರ ಬೇಕು.. ಇದು ಬಹುತೇಕ ಎಲ್ಲರ ಸಾಮಾನ್ಯ ಕಲ್ಪನೆ. ಆದರೆ ಮರದ ಬಳಕೆಯನ್ನು ಕಡಿಮೆ ಮಾಡಿ, ಆಧುನಿಕ ತಂತ್ರಜ್ಞಾನ ಮತ್ತು ನವೀನ ನಿರ್ಮಾಣ ವಿಧಾನಗಳ ಮೂಲಕ ಬಲಿಷ್ಠ, ಸುಂದರ ಹಾಗೂ ಪರಿಸರ ಸ್ನೇಹಿ ಮನೆ ನಿರ್ಮಿಸಬಹುದು ಎಂಬ ವಿಭಿನ್ನ ಚಿಂತನೆಗೆ ರೂಪ ನೀಡಿದವರು ಪುತ್ತೂರಿನ ಮಾಸ್ಟರ್ ಪ್ಲ್ಯಾನರಿ ಸಂಸ್ಥೆಯ ಎಸ್.ಕೆ.ಆನಂದ್ ಕುಮಾರ್.
ಸುಮಾರು 3-4 ದಶಕಗಳ ಹಿಂದೆಯೇ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಕುರಿತು ಚಿಂತನೆ ಆರಂಭಿಸಿದ ಆನಂದ್ ಕುಮಾರ್, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಪರಿಸರ ಸಂರಕ್ಷಣೆಯನ್ನು ಒಂದೇ ದಾರಿಯಲ್ಲಿ ಕೊಂಡೊಯ್ಯುವ ಪ್ರಯತ್ನ ನಡೆಸಿದರು. ಆ ಚಿಂತನೆಯ ಫಲವಾಗಿ ಮೂಡಿಬಂದ ಮಹತ್ವದ ಪರಿಕಲ್ಪನೆಯೇ 'Concood'.

ಸಾಂಪ್ರದಾಯಿಕ ನಿರ್ಮಾಣ ಪದ್ಧತಿಗೆ ಪರ್ಯಾಯವಾಗಿ, ಮರದ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾಂಕ್ರೀಟ್ ಆಧಾರಿತ ಪ್ರೀಕಾಸ್ಟ್ ತಂತ್ರಜ್ಞಾನದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ರೂಪಿಸುವ ಈ ಪ್ರಯತ್ನ, ನಿರ್ಮಾಣ ಕ್ಷೇತ್ರದಲ್ಲಿ ವಿಭಿನ್ನ ಮಾದರಿಯಾಗಿ ಗುರುತಿಸಿಕೊಂಡಿದೆ.
'Cconcood' ಕೇವಲ ಒಂದು ನಿರ್ಮಾಣ ಉತ್ಪನ್ನವಲ್ಲ. ಭವಿಷ್ಯದ ಮನೆ ನಿರ್ಮಾಣದ ಕುರಿತು ಹೊಸ ಚಿಂತನೆ. ವೇಗವಾದ ನಿರ್ಮಾಣ, ಗುಣಮಟ್ಟ, ಬಾಳಿಕೆ, ವೆಚ್ಚ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆ-ಈ ಎಲ್ಲ ಅಂಶಗಳನ್ನು ಒಟ್ಟುಗೂಡಿಸುವ ಪ್ರಯತ್ನ.

'ಮನೆ ನಿರ್ಮಿಸುವಾಗ ಒಂದು ಮರವನ್ನು ಉಳಿಸಬಹುದಾದರೆ, ಅದು ಕೇವಲ ನಿರ್ಮಾಣದ ಯಶಸ್ಸಲ್ಲ. ಪರಿಸರದ ಮೇಲಿನ ನಮ್ಮ ಜವಾಬ್ದಾರಿಯೂ ಹೌದು' ಎಂಬ ಆಶಯದೊಂದಿಗೆ ಮಾಸ್ಟರ್ ಪ್ಲ್ಯಾನರಿ ತನ್ನ ಪಯಣವನ್ನು ಮುಂದುವರಿಸಿದೆ.

ನಿರ್ಮಾಣ ಕ್ಷೇತ್ರದಲ್ಲಿ ನವೀನತೆ ಮತ್ತು ತಂತ್ರಜ್ಞಾನ ಅಳವಡಿಕೆಗೆ ನೀಡಿದ ಕೊಡುಗೆಗಾಗಿ ಎಸ್.ಕೆ.ಆನಂದ್ ಕುಮಾರ್ ಅವರಿಗೆ Engineer of the Year, B.R. Samaga Best Engineer, Outstanding Concrete Engineer of Karnataka, Eminent Engineer from Industry, NITTE-KBL MSME Business Excellence Award, Distinguished Alumnus Award ಸೇರಿದಂತೆ ಹಲವು ಗೌರವಗಳು ಸಂದಿವೆ. 2026ರ ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿಯೂ ಅವರ ಸಾಧನೆಗೆ ಸಂದ ಮತ್ತೊಂದು ಪ್ರಮುಖ ಗೌರವವಾಗಿದೆ.
ಪುತ್ತೂರಿನಿಂದ ಆರಂಭವಾದ ಈ ಚಿಂತನೆ ಇಂದು ಸುಸ್ಥಿರ ನಿರ್ಮಾಣ, ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ವಾಸ್ತುಶಿಲ್ಪದ ಹೊಸ ಸಾಧ್ಯತೆಗಳತ್ತ ದಾರಿ ತೋರಿಸುವ ಪ್ರಯತ್ನವಾಗಿ ರೂಪುಗೊಂಡಿದೆ.

ದಶಕಗಳ ಅನುಭವ.. ಸಂಶೋಧನಾ ಮನೋಭಾವ.. ನವೀನತೆಯ ನಿರಂತರ ಹುಡುಕಾಟ.. ಇವೆಲ್ಲದರ ಫಲವೇ 'Concood' ಮರವನ್ನು ಉಳಿಸಿ, ಮನೆ ನಿರ್ಮಿಸುವ ಅಪೂರ್ವ ಪರಿಕಲ್ಪನೆಯಾಗಿ ಹೊರಹೊಮ್ಮಿದೆ.