Marnemida Gauji: ಕುಂಬ್ರದಲ್ಲಿಅ.17ಕ್ಕೆ 'ಮಾರ್ನೆಮಿದ ಗೌಜಿ' ಸಂಭ್ರಮ.. ಆಮಂತ್ರಣ ಪತ್ರಿಕೆ ಬಿಡುಗಡೆ
Marnemida Gauji: ಕುಂಬ್ರದಲ್ಲಿಅ.17ಕ್ಕೆ 'ಮಾರ್ನೆಮಿದ ಗೌಜಿ' ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಪುತ್ತೂರು: ತುಳುನಾಡಿನ ನವರಾತ್ರಿ ಸಂಭ್ರಮದ ವಿಶೇಷ ಆಕರ್ಷಣೆಯಾಗಿರುವ ಕುಂಬ್ರದ 'ಮಾರ್ನೆಮಿದ ಗೌಜಿ ' ಈ ಬಾರಿ 4ನೇ ವರ್ಷಕ್ಕೆ ಕಾಲಿಟ್ಟಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅದ್ದೂರಿಯಾಗಿ ನೆರವೇರಿತು.
ಕುಂಬ್ರದ 'ಬಾಂತಲಪ್ಪು ಜನಸೇವಾ ಸಮಿತಿ' ಆಶ್ರಯದಲ್ಲಿ, ಮಂಗಳೂರಿನ 'ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ' ಸಹಯೋಗದೊಂದಿಗೆ, ಮಾರ್ನೆಮಿದ ಗೌಜಿ (ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆ) ನಡೆಯಲಿದೆ.
'ಸ್ಥಳೀಯ ವೇಷಧಾರಿಗಳನ್ನು ಪ್ರೋತ್ಸಾಹಿಸುವುದು ಮತ್ತು ಮಾರ್ನೆಮಿಯ ಸೊಗಡನ್ನು ಸಂಭ್ರಮಿಸುವುದರೊಂದಿಗೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸಿವುದು ನಮ್ಮ ಆದ್ಯತೆಯಾಗಿದೆ' ಎಂದು ಬಾಂತಲಪ್ಪು ಜನಸೇವಾ ಸಮಿತಿ ಹೇಳಿದೆ.
ಈ ನಿಟ್ಟಿನಲ್ಲಿ ಆರಂಭಿಸಿದ 'ಕುಂಬ್ರದ ಮಾರ್ನೆಮಿದ ಗೌಜಿ' ಯಶಸ್ವಿಯಾಗಿ 4ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ವರ್ಷದ ಗೌಜಿ ಕಾರ್ಯಕ್ರಮವು ಅ.17ರಂದು ಕುಂಬ್ರ ಜಂಕ್ಷನ್‌ನಲ್ಲಿ (ಕುಂಬ್ರ ಚೆನ್ನಪ್ಪ ರೈ - ಕುಂಬ್ರ ಜತ್ತಪ್ಪ ರೈ ಸ್ಮಾರಕ ಅಶ್ವತಕಟ್ಟೆ ಬಳಿ) ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 2 ಮುಡಿ ಅಕ್ಕಿ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ತಲಾ 1 ಮುಡಿ ಅಕ್ಕಿಯೊಂದಿಗೆ, ಟ್ರೋಫಿ ನೀಡಲಾಗುತ್ತದೆ. ಜೊತೆಗೆ ಭಾಗವಹಿಸಿದ ಎಲ್ಲಾ ತಂಡಗಳಿಗೂ ನಗದು ಬಹುಮಾನ ಕೊಟ್ಟು, ಗೌರವಿಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಂತಲಪ್ಪು ಜನಸೇವಾ ಸಮಿತಿಯ ಗೌರವಾಧ್ಯಕ್ಷ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಅಧ್ಯಕ್ಷ ರಕ್ಷಿತ್ ರೈ, ಸಂಚಾಲಕ ಶಶಿಕಿರಣ್ ರೈ, ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ, ಉಪಾಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಸದಸ್ಯರಾದ ವಿಶ್ವನಾಥ್ ಗೌಡ, ಬೊಳ್ಳಾಡಿ ಪುರಂದರ ಶೆಟ್ಟಿ ಮುಡಾಲ, ಬಶೀರ್ ಕೌಡಿಚ್ಚರ್ ಶೀನಪ್ಪ ನಾಯ್ಕ್ ಬೊಳ್ಳಾಡಿ, ಹರೀಶ್ ರೈ ಮುಗೇರು, ಸುಮಿತ್ ರೈ ಕುಂಬ್ರ, ಬದ್ರುನ್ನಿಸಾ ಪರ್ಪುಂಜ , ಶೇಖರ್ ರೈ ಕುರಿಕ್ಕಾರ , ವಸಂತ ಶೆಟ್ಟಿ ಕಲ್ಲಡ್ಕ, ದಿನೇಶ್ ರೈ ಬಡಕೋಡಿ, ಮಹಮ್ಮದ್ ಬೊಳ್ಳಾಡಿ, ಅಜೀಜ್ ನಿರ್ಪಾಡಿ , ರಾಜಶೇಖರ ಶೆಟ್ಟಿ ಮುಡಾಲ, ನಾರಾಯಣ ದರ್ಬೆತ್ತಡ್ಕ, ಚೆನ್ನ ಬಿಜಿಲ , ಹುಕ್ರಪ್ಪ ಬೊಳ್ಳಾಡಿ, ನಳಿನಿ ಸುರೇಶ್ ರೈ ಕುರಿಕ್ಕಾರ, ಹರಿಣಾಕ್ಷಿ ಎರ್ಕ ಸರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.