ದಿನ ಭವಿಷ್ಯ: ಇವತ್ತು ಯಾವ ರಾಶಿಗೆ ಶುಭ ಫಲ?

Daily Horoscope: ಇಂದು (ಸೋಮವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Sep 28, 2026 - 10:46
ದಿನ ಭವಿಷ್ಯ: ಇವತ್ತು ಯಾವ ರಾಶಿಗೆ ಶುಭ ಫಲ?

ಮೇಷ:

ಕಳೆದ ಸಪ್ತಾಹದ ಹಿನ್ನೋಟದಿಂದ ತೃಪ್ತಿ.. ಉದ್ಯೋಗದಲ್ಲಿ ಸ್ಥಿರವಾದ ಪ್ರಗತಿ. ಸಹಚರರ ನಡುವೆ ಸೌಹಾರ್ದ ವೃದ್ಧಿ. ಉದ್ಯಮಗಳ ಆರ್ಥಿಕ ಸ್ಥಿತಿ ಸುಧಾರಣೆ. ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ. ಸಂಸಾರದ ಸದಸ್ಯರಲ್ಲಿ ಸಾಮರಸ್ಯ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

ವೃಷಭ:

ಉದ್ಯೋಗಸ್ಥರಿಗೆ ಸಂಪೂರ್ಣ ನಿಶ್ಚಿಂತೆ.. ಸ್ವಂತ ಉದ್ಯಮದಲ್ಲಿ ಲಾಭ  ವೃದ್ಧಿ. ವ್ಯವಹಾರ ಕ್ಷೇತ್ರ ವಿಸ್ತರಣೆ ಶುಭಾರಂಭ. ಲೇವಾದೇವಿ ವ್ಯವಹಾರಸ್ಥರಿಗೆ ಅಲ್ಪ ಲಾಭ. ದಾಂಪತ್ಯ ಜೀವನದಲ್ಲಿ ಸೌಖ್ಯ. ಗಣಪತಿ ಅಥರ್ವಶೀರ್ಷ, ಆದಿತ್ಯ ಹೃದಯ, ಶನಿಸ್ತೋತ್ರ ಓದಿ.

ಮಿಥುನ:

ಸರ್ವತೋಮುಖ ಏಳಿಗೆಯ ಲಕ್ಷಣಗಳು.. ಉದ್ಯೋಗ, ವ್ಯವಹಾರಗಳಲ್ಲಿ ಉನ್ನತಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ಧ್ಯಾನ, ಯೋಗ ಸಾಧನೆಯಲ್ಲಿ ಮುನ್ನಡೆ. ರಕ್ಷಣಾ ರಂಗದಲ್ಲಿ ಸೇವೆ ಸಲ್ಲಿಸುವವರಿಗೆ ವಿಶಿಷ್ಟ ಗೌರವ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ ನವಗ್ರಹ ಸ್ತೋತ್ರ ಓದಿ.

ಕರ್ಕಾಟಕ:

ವಯಸ್ಸು, ವಿದ್ವತ್ತಿಗೆ ಗೌರವ ಪ್ರಾಪ್ತಿ.. ಉದ್ಯಮದಲ್ಲಿ ಸಾಧಾರಣ  ತೃಪ್ತಿಕರ ಲಾಭ. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಪರಿಸರ ರಕ್ಷಣೆಯ ಚಟುವಟಿಕೆಗಳಲ್ಲಿ ಆಸಕ್ತಿ. ಸಾಮಾಜಿಕರಿಂದ ಗೌರವ. ಗಣೇಶ ದ್ವಾದಶನಾಮ ಸ್ತೋತ್ರ, ಶಿವನಾಮಾವಲ್ಯಷ್ಟಕ, ಗೌರೀಸ್ತೋತ್ರ ಓದಿ.

ಸಿಂಹ:

ನಿಮ್ಮ ಮುನ್ನಡೆ, ನೆಮ್ಮದಿಗೆ ಭಂಗ ಇಲ್ಲ.. ಉದ್ಯೋಗದಲ್ಲಿ ಉನ್ನತ ಸ್ಥಾನ ಹೊಂದುವ ಪ್ರಯತ್ನ. ಸ್ವಂತ  ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಹತ್ತಿರದ ದೇವಾಲಯಕ್ಕೆ ಭೇಟಿ. ಪೂರ್ವ ದಿಕ್ಕಿನಿಂದ ಶುಭ ಸಮಾಚಾರ. ಗಣೇಶ ಕವಚ, ಶಿವಸಹಸ್ರನಾಮ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಕನ್ಯಾ:

ಸ್ವಂತ ವ್ಯವಹಾರದಲ್ಲಿ ಯಶಸ್ಸು.. ಅಕಸ್ಮಾತ್ ಧನಪ್ರಾಪ್ತಿಯ ಸಾಧ್ಯತೆ. ಸರ್ಕಾರಿ ಉದ್ಯೋಗಿಗಳಿಗೆ ದಿಢೀರ್ ವರ್ಗಾವಣೆ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಪ್ರಥಮ ಪ್ರಾಶಸ್ತ್ಯ.ದೂರದೃಷ್ಟಿಯ ಯೋಜನೆಯಲ್ಲಿ ಹೂಡಿಕೆಯಿಂದ ಲಾಭ. ಗಣೇಶ ತ್ರಿಶತಿ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶಿವಾಷ್ಟಕ ಓದಿ.

ತುಲಾ:

ದೇವತಾನುಗ್ರಹ ಪ್ರಾಪ್ತಿಗೆ ತೀವ್ರ ಪ್ರಯತ್ನ.. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯಿಂದ ಕಾರ್ಯನಿರ್ವಹಣೆ. ಆಪ್ತರಿಂದ ಸಕಾಲಿಕ ಸಲಹೆ ಹಾಗೂ ಸಹಕಾರ. ವಿಸ್ತೃತ ವ್ಯವಹಾರ ಕ್ಷೇತ್ರದಲ್ಲಿ ಮುನ್ನಡೆ. ಶಕ್ತಿ ದೇವತೆಯ ಕ್ಷೇತ್ರದರ್ಶನದ ಯೋಗ. ಗಣಪತಿ ಅಥರ್ವಶೀರ್ಷ, ರಾಜರಾಜೇಶ್ವರಿ ಅಷ್ಟಕ, ಹನುಮಾನ್ ಚಾಲೀಸಾ ಓದಿ.

ವೃಶ್ಚಿಕ: 

ಪರಶಿವನ ದಯದಿಂದ ಯಶಸ್ಸು.. ಉದ್ಯೋಗದಲ್ಲಿ ವೇತನ ಏರಿಕೆ ಸಂಭವ. ಸರ್ಕಾರಿ ನೌಕರರಿಗೆ ಶುಭ ಸಮಾಚಾರ. ಸ್ವಂತ ಉದ್ಯಮ ವಿಸ್ತರಣೆಗೆ ಕಾರ್ಯಯೋಜನೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಡಕ ಓದಿ.

ಧನು:

ಆರೋಗ್ಯ ಸುಧಾರಣೆಯಿಂದ ನೆಮ್ಮದಿ.. ಹಳೆಯ ಒಡನಾಡಿಗಳ ಭೇಟಿಯಿಂದ ನವೋತ್ಸಾಹ. ಉದ್ಯೋಗದಲ್ಲಿ ಗೌರವದ ಸ್ಥಾನ. ಆದಾಯ ಹೆಚ್ಚಳದ ಯೋಜನೆಗಳು ಮುನ್ನಡೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.

ಮಕರ:

ಆತ್ಮಬಲ ವೃದ್ಧಿಗೆ ವಿಶೇಷ ಪ್ರಯತ್ನ.. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ಸ್ತ್ರೀಯರಿಗೆ ಪತಿ ಗೃಹದವರಿಂದ ಸಹಾಯ. ಉದ್ಯೋಗ ಪರಿವರ್ತನೆ ಪ್ರಯತ್ನಕ್ಕೆ ಹಂತಹಂತವಾಗಿ ಯಶಸ್ಸು. ಆಪ್ತರಿಂದ ಸಕಾಲಕ್ಕೆ ಸಹಾಯ. ಗಣೇಶ ಕವಚ,ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ:

ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ ಮುಂದುವರಿಕೆ. ಸ್ವಂತ ಉದ್ಯಮದ ಹಿತ ಅಬಾಧಿತ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ  ಉತ್ತಮ ಆದಾಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸೇವಾ ಚಟುವಟಿಕೆಗಳಿಗೆ ಮನೆಮಂದಿಯ ಸಂಪೂರ್ಣ ಬೆಂಬಲ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.

ಮೀನ:

ಎಲ್ಲ ಕ್ಷೇತ್ರಗಳಲ್ಲಿ ಸಾಧನೆ  ಸುಗಮ.. ಉದ್ಯೋಗ ಸ್ಥಾನದಲ್ಲಿ ಅನುಕೂಲದ ಸ್ಥಿತಿ. ಸೇವಾರೂಪದ ಕಾರ್ಯಗಳಿಗೆ ಅನುಕೂಲದ ವಾತಾವರಣ. ಸರ್ಕಾರಿ ಅಧಿಕಾರಿಗಳ ಮತ್ತು ನೌಕರರ ಉತ್ತಮ ಸ್ಪಂದನ. ಸಂಸಾರದಲ್ಲಿ ಸಂಗಾತಿಯ ಪೂರ್ಣ ಸಹಕಾರ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.