ವಿವೇಕಾನಂದ ಪದವಿ ಕಾಲೇಜು: ನೇಚರ್ ಕ್ಲಬ್ ಉದ್ಘಾಟನೆ
Vivekananda Degree College: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ನೇಚರ್ ಕ್ಲಬ್ ಉದ್ಘಾಟನೆ ನಡೆಯಿತು.
ಪುತ್ತೂರು: ವಿದ್ಯಾರ್ಥಿಗಳು ಡಿಜಿಟಲ್ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಪರಿಸರ ಸಂರಕ್ಷಣೆ ಕುರಿತು ಅರ್ಥಪೂರ್ಣ ವಿಷಯಗಳನ್ನು ಸೃಷ್ಟಿಸಬೇಕು ಎಂದು ನಿವೃತ್ತ ಸಹಾಯಕ ಪ್ರಾಧ್ಯಾಪಕ ಪ್ರೊ.ದೇವಿಪ್ರಸಾದ್ ಕೆ.ಎನ್ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ನೇಚರ್ ಕ್ಲಬ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನೇಚರ್ ಕ್ಲಬ್ ಕೇವಲ ಒಳಾಂಗಣ ಚಟುವಟಿಕೆಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಪ್ರಕೃತಿಯೊಂದಿಗೆ ನೇರ ಸಂಪರ್ಕ ಕಲ್ಪಿಸಲು ನಿಯಮಿತವಾಗಿ ಪ್ರಕೃತಿ ಶಿಬಿರಗಳು ಹಾಗೂ ಹೊರಾಂಗಣ ಚಟುವಟಿಕೆಗಳನ್ನು ಆಯೋಜಿಸಬೇಕು ಎಂದರು.
ನೇಚರ್ ಕ್ಲಬ್‌ನ ಸಂಯೋಜಕ ಡಾ.ಸುಹಾಸ್ ಕೃಷ್ಣ ಕ್ಲಬ್‌ನ ಉದ್ದೇಶಗಳು ಮತ್ತು ಮುಂಬರುವ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಸೌಮಿತ್ರಾ, ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ದಿವ್ಯಶ್ರೀ ಮತ್ತು ವಿದ್ಯಾರ್ಥಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಸೌಜನ್ಯ ಸ್ವಾಗತಿಸಿದರು. ಪ್ರೇರಣಾ ವಂದಸಿದರು. ಜೀವಿತಾ ನಿರೂಪಿಸಿದರು.