ದಿನ ಭವಿಷ್ಯ: ಇಂದು ರಾಶಿಗೆ ಶುಭ?
Daily Horoscope: ಇಂದು (ಬುಧವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಚಿತ್ತ ಚಾಂಚಲ್ಯ ಬಾರದಂತೆ ಎಚ್ಚರ ವಹಿಸಿ.. ದೈಹಿಕ, ಬೌದ್ಧಿಕ ಕಾರ್ಯಗಳ ಒತ್ತಡ. ಉದ್ಯೋಗ, ಉದ್ಯಮಗಳಲ್ಲಿ ಸಾಮಾನ್ಯ ತೃಪ್ತಿ. ಆವಶ್ಯಕತೆಗೆ ತಕ್ಕ ನೆರವು ಸಕಾಲದಲ್ಲಿ ಲಭ್ಯ. ಹಿರಿಯ ಮಹಿಳೆಯರ ಆರೋಗ್ಯದಲ್ಲಿ ಎಚ್ಚರ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಕೇಳದೆ ಬರುವ ಅವಕಾಶಗಳು.. ಉದ್ಯೋಗದಲ್ಲಿ ಹೆಚ್ಚು ಸಂತೃಪ್ತಿ. ಸರ್ಕಾರಿ ನೌಕರರಿಗೆ ವರ್ಗಾವಣೆಯ ಭೀತಿ. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ದೇವಿಯ ಆಲಯಕ್ಕೆ ಭೇಟಿಯಿಂದ ಶುಭ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಆದಿತ್ಯ ಹೃದಯ ಓದಿ.
ಮಿಥುನ:
ಈ ಬುಧವಾರ ಶುಭದಾಯಕ.. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯ ಸೂಚನೆ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಅಸ್ವಸ್ಥರಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ. ಲಘು ವ್ಯಾಯಾಮದಿಂದ ಆರೋಗ್ಯ ರಕ್ಷಣೆ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
ಕರ್ಕಾಟಕ:
ಸಾಮಾನ್ಯ ಪರಿಸ್ಥಿತಿ ಮುಂದುವರಿಕೆ.. ಉತ್ಪಾದನೆಗಳಲ್ಲಿ ವೈವಿಧ್ಯಕ್ಕೆ ಆದ್ಯತೆ ಇರಲಿ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ದೀರ್ಘಾವಧಿ ಹೂಡಿಕೆಗಳಿಂದ ಲಾಭ. ಪ್ರೀತಿಯಿಂದ ಸಕಲ ಕಾರ್ಯಸಿದ್ಧಿ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ಸಿಂಹ:
ಸರ್ಕಾರಿ ಉದ್ಯೋಗಿಗಳಿಗೆ ನಿರಾಳ.. ಹೊಸ ಪರಿಚಯ ಸಹಾಯದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾರ್ಯ ವೇಗವೃದ್ಧಿ. ಕೃಷ್ಯುತ್ಪನ್ನ ಮೂಲಕ ಆದಾಯ ವೃದ್ಧಿ. ಬಂಧುಗಳ ಮನೆಯ ಶುಭಕಾರ್ಯದಲ್ಲಿ ಭಾಗಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
ಕನ್ಯಾ:
ಸಂಸಾರದಲ್ಲಿ ಶಾಂತಿ, ಸಾಮರಸ್ಯದ ಅನುಭವ.. ಆತ್ಮೀಯರ ಭೇಟಿಯಿಂದ ಹರ್ಷ. ಉದ್ಯೋಗ ಸ್ಥಾನದಲ್ಲಿ ಹೆಚ್ಚು ಸೌಲಭ್ಯ. ಉದ್ಯೋಗಾಸಕ್ತರಿಗೆ ಆಶಾದಾಯಕ ಅವಕಾಶಗಳು. ಹಣ್ಣು, ತರಕಾರಿ ವ್ಯಾಪಾರದಲ್ಲಿ ಲಾಭ. ಗಣೇಶ ಕವಚ ದತ್ತಪಂಜರ ಸ್ತೋತ್ರ, ನವಗ್ರಹ ಮಂಗಲಾಷ್ಡಕ ಓದಿ.
ತುಲಾ:
ವಿದ್ಯಗೆ ಎಲ್ಲೆಡೆ ಗೌರವ ಪ್ರಾಪ್ತಿ.. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಕೀರ್ತನೆ, ಭಜನೆ ಶ್ರವಣದಿಂದ ಸಮಾಧಾನ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.
ವೃಶ್ಚಿಕ:
ಧಾರ್ಮಿಕ ಚಿಂತನೆಯಿಂದ ಆನಂದ.. ಉದ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಣೆ. ಸಂಸ್ಥೆಯಲ್ಲಿ ಇನ್ನಷ್ಟು ಹೊಣೆಗಾರಿಕೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಗೃಹಿಣಿಯರ ಉದ್ಯಮ ಉನ್ನತ ಸ್ಥಿತಿಯಲ್ಲಿ. ಗಣೇಶ ಅಷ್ಡಕ, ವೇದಸಾರ ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಧನು:
ಪರಿಸ್ಥಿತಿಯನ್ನು ಎದುರು ಹಾಕಿಕೊಳ್ಳದಿರಿ. ಉದ್ಯೋಗ ಸ್ಥಾನದಲ್ಲಿ ಸದಭಿಪ್ರಾಯಕ್ಕೆ ಪಾತ್ರರಾಗುವಿರಿ. ಸಣ್ಣ ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ ನವಗ್ರಹ ಸ್ತೋತ್ರ ಓದಿ.
ಮಕರ:
ಉದ್ಯೋಗ ಸ್ಥಾನದಲ್ಲಿ ಗೌರವ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನಿವೇಶನ ಖರೀದಿ-ಮಾರಾಟ ವ್ಯವಹಾರಸ್ಥರಿಗೆ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.ಬೌದ್ಧಿಕ ಕಾರ್ಯಗಳಿಂದ ನೆಮ್ಮದಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಲಾಭದಾಯಕ ಯೋಜನೆಗಳಲ್ಲಿ ಹೂಡಿಕೆ.. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ ಭೇಟಿ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ. ಗಣೇಶ ಪಂಚರತ್ನ, ನರಸಿಂಹ ಕವಚ, ಶನಿಮಹಾತ್ಮೆ ಓದಿ.
ಮೀನ:
ಸರ್ವತ್ರ ಯಶಸ್ಸಿನ ಅನುಭವ.. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರ್ಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ಅಪರಿಚಿತ ವ್ಯಕ್ತಿಗಳಿಂದ ಅನಿರೀಕ್ಷಿತ ಸಹಾಯ. ಅತಿಥಿ ಸತ್ಕಾರ ಯೋಗ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾಯ್ಮೆ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.