iQOO Z11: ಐಕ್ಯೂಒ ಜಡ್11 ಫೋನ್ ಬಿಡುಗಡೆ.. ಬೆಲೆ ಎಷ್ಟು?
iQOO Z11: ನೂತನ 'ಐಕ್ಯೂಒ ಜಡ್11' ಸ್ಮಾರ್ಟ್‌ಫೋನ್ ಈಚೆಗೆ ಬಿಡುಗಡೆಗೊಂಡಿದೆ.
ನೂತನ ಐಕ್ಯೂಒ ಜಡ್11 (iQOO Z11) ಸ್ಮಾರ್ಟ್‌ಫೋನ್ ಈಚೆಗೆ ಆದ್ದೂರಿಯಾಗಿ ಬಿಡುಗಡೆಗೊಂಡಿದೆ. ಆ.25 ರಿಂದ ಗ್ರಾಹಕರ ಖರೀದಿಗೆ ಲಭ್ಯವಿದೆ.
ಇದು 6GB RAM + 128GB, 8GB RAM + 128GB, 8GB RAM + 256GB ಹಾಗೂ 12GB RAM + 256GB ಇಂಟರ್ನಲ್ ಸ್ಟೋರೇಜ್‌ನ್ನು ಹೊಂದಿದೆ. ಕ್ರಮವಾಗಿ ರೂ.34,999, ರೂ.39,999, ರೂ.44,999 ಮತ್ತು ರೂ.49,999 ದರವನ್ನು ಹೊಂದಿದೆ.
ಈ ಫೋನ್ 7,050mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಜೊತೆಗೆ 44W ಫಾಸ್ಟ್ ಚಾರ್ಜರ್ ಆಯ್ಕೆಯನ್ನು ಬೆಂಬಲಿಸುತ್ತದೆ.
ಇದೊಂದು ಆಂಡ್ರಾಯ್ಡ್ ಚಾಲಿತ ಸ್ಮಾರ್ಟ್‌ಫೋನ್ ಆಗಿದ್ದು, 6.83-ಇಂಚಿನ 1.5K (2800×1260p) 3D ಅಮೋಲೆಡ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. 144Hz ರಿಫ್ರೆಶ್ ರೇಟ್, HDR10+ ಮತ್ತು 2,000 nits ಬ್ರೈಟ್‌ನೆಸ್‌ನ್ನು ಪಡೆದಿದೆ.
ಡುಯಲ್-ಸಿಮ್, ಟೈಪ್-ಸಿ ಯುಎಸ್‌ಬಿ ಪೋರ್ಟ್, ಸ್ಟೀರಿಯೊ ಸ್ಪೀಕರ್‌ಗಳು ಹಾಗೂ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ನ್ನು ಹೊಂದಿದೆ. ಡುಯಲ್-ಕ್ಯಾಮೆರಾ ಸೆಟಪ್ ಸಹ ಇದ್ದು, 50MP ಮೇನ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.
ಮೀಡಿಯಾ ಟೆಕ್ ಡೈಮೆನ್ಸಿಟಿ 7500 ಟರ್ಬೊ ಪ್ರೊಸೆಸರ್‌ನ್ನು ಪಡೆದಿದೆ. ಅರೋರಾ ಗ್ರೀನ್ ಹಾಗೂ ಸೆಲೆಸ್ಟಿಯಲ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.