ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?

Daily Horoscope: ಇಂದು (ಸೋಮವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Aug 17, 2026 - 08:58
ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?

ಮೇಷ:

ನಾಗರಪಂಚಮಿಯ ಶುಭದಿನ.. ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ, ವ್ಯವಹಾರದಲ್ಲಿ ಜಯ. ಅಧಿಕಾರಿ ವರ್ಗಕ್ಕೆ ಸಮಾಧಾನ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ನೆಮ್ಮದಿ. ಎಚ್ಚರಿಕೆಯ ನಡೆಯಿಂದ ಕ್ಷೇಮ. ಗಣೇಶ ಕವಚ, ಶಿವ ಸಹಸ್ರನಾಮ, ಶನಿ ಮಹಾತ್ಮೆ ಓದಿ.

ವೃಷಭ:

ಎಚ್ಚರಿಕೆಯಿಂದ ವ್ಯವಹರಿಸಿ.. ಮನೆಯವರ  ಆರೋಗ್ಯದ ಕಡೆಗೆ ಗಮನ ಇರಲಿ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಮನೆಮಂದಿಯ ಪಾಲಿಗೆ ನಿರಾತಂಕದ ದಿನ. ದೂರ ಪ್ರಯಾಣ ಮುಂದಕ್ಕೆ ಹಾಕಿರಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಮಿಥುನ:

ಕೆಲವರಿಗೆ ಹವಾಮಾನದ ತೊಂದರೆ.. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಮಂದಗತಿ. ವ್ಯವಹಾರದಲ್ಲೂ ಸ್ವಲ್ಪ ನಿಧಾನ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಸಣ್ಣಪುಟ್ಟ ಸಮಸ್ಯೆಗಳಿಗೆ ಅಂಜಬೇಡಿ. ಗಣೇಶ ಅಷ್ಟಕ, ಕಾರ್ತಿಕೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

ಕರ್ಕಾಟಕ:

ನಾಗದೇವರ ಪೂರ್ಣಾನುಗ್ರಹ.. ಪ್ರಾಚೀನ ಜೀವನ ವಿಧಾನದಿಂದ ಆರೋಗ್ಯ ಪ್ರಾಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ. ಪಾಲುದಾರಿಕೆಯಲ್ಲಿ ಪಾರದರ್ಶಕತೆಯಿಂದ ಶುಭ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಸಿಂಹ:

ಮುಂದಿಟ್ಟ ಹೆಜ್ಜೆ ಹಿಂದಿಡದಿರಿ.. ತಪ್ಪು ಅಭಿಪ್ರಾಯಕ್ಕೆ ಎಡೆಗೊಡಬೇಡಿ. ಮಾಜಿ ಪಾಲುದಾರನಿಂದ ಮತ್ತೊಮ್ಮೆ ಹೊಸ ಪ್ರಸ್ತಾವ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲ. ಅಧ್ಯಾಪಕ ವರ್ಗದವರು ಎಚ್ಚರಿಕೆಯಲ್ಲಿ ಸಾಗಿ.ಗಣೇಶ ಕವಚ, ಶಿವ ಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಕನ್ಯಾ:

ಮುಂದಾಲೋಚನೆಯಿಂದ ಕ್ರಮ ತೆಗೆದುಕೊಳ್ಳಿ.. ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ವಿದ್ಯಾರ್ಥಿವೃಂದಕ್ಕೆ ಮುಂದಿನ ಯೋಚನೆ. ರೈಲ್ವೆ ಪ್ರಯಾಣದಲ್ಲಿ ಜಾಗರೂಕತೆ ಇರಲಿ. ಬಾಲ್ಯದ ಗುರುಗಳ ಭೇಟಿಯ ಸಾಧ್ಯತೆ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನರಸಿಂಹ ಕವಚ ಓದಿ.

ತುಲಾ:

ನಾಗನ ಕ್ಷೇತ್ರಕ್ಕೆ ಭೇಟಿ. ಆರೋಗ್ಯ ಸುಧಾರಣೆಗಾಗಿ ಧನವ್ಯಯ. ಪ್ರಾಕೃತಿಕ ತಾಣಕ್ಕೆ ಸಣ್ಣ ಭೇಟಿ. ಹಿಂದೆ ಕಲಿತಿದ್ದ ಕಲೆ ಉಪಯೋಗಕ್ಕೆ. ಧಾರ್ಮಿಕ ಕೂಟಗಳಲ್ಲಿ ಭಾಗಿ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.

ವೃಶ್ಚಿಕ:

ದೂರದಲ್ಲಿರುವ ಕುಟುಂಬಸ್ಥರ ಭೇಟಿ.. ಉದ್ಯೋಗಸ್ಥರಿಗೆ ಸಪ್ತಾಹ ಅಂತ್ಯದ ಆನಂದ. ಪರಿಸರ ರಕ್ಷಣೆಯ ಕಾರ್ಯಗಳಲ್ಲಿ ಭಾಗಿ. ಗೃಹೋದ್ಯಮಗಳಿಗೆ ಅನುಕೂಲದ ದಿನ. ತಾಯಿಯ ಕಡೆಯ ಬಂಧುಗಳ ಆಗಮನ. ಗಣೇಶ ಸ್ತೋತ್ರ, ವೇದಸಾರ ಶಿವಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಧನು:

ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ.. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಅನುಕೂಲ. ಬೌದ್ಧಿಕ ಕೆಲಸಗಳಿಗೆ ಒದಗಿದ ವಿಘ್ನ ದೂರ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವಕಾಶ. ಬೀದಿಬದಿಯ ವ್ಯಾಪಾರಿಗಳಿಗೆ ಅನುಕೂಲದ ದಿನ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಮಕರ:

ಸಪ್ತಾಹದ ಮೊದಲ ದಿನದಿಂದ ಹೊಸ ವಿಭಾಗದ ಹೊಷೆಗಾರಿಕೆ.. ತಾಯಿಯ ಆರೋಗ್ಯದ ಕಡೆಗೆ ಗಮನ. ಗೃಹೋಪಯೋಗಿ ಸಾಮಗ್ರಿಗಳ ಖರೀದಿಗೆ ಧನವ್ಯಯ. ನಾಗನ ಕ್ಷೇತ್ರ ಭೇಟುಯ ಸಾಧ್ಯತೆ. ದೂರ ಪ್ರವಾಸದಿಂದ ಆನಂದ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ:

ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ನಾಳೆಯ ಸಾಮಾಜಿಕ ಕಾರ್ಯಗಳಿಗೆ ಸಿದ್ಧತೆ. ಮಕ್ಕಳ ವ್ಯವಹಾರ ಸ್ಥಿರಗೊಳಿಸಲು ಸಹಾಯ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ.ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಶನಿ ಮಹಾತ್ಮೆ ಓದಿ.

ಮೀನ:

ಸಪ್ತಾಹದ ಮೊದಲ  ದಿನ ಎಲ್ಲವೂ ಶುಭ.. ಅಧಿಕಾರಿ ವರ್ಗದಿಂದ ಅನುಕೂಲಕರ ಸ್ಪಂದನ. ಖಾದ್ಯ ಪದಾರ್ಥ ಉದ್ಯಮಿಗಳಿಗೆ ಹೆಚ್ಚು ಅನುಕೂಲದ ಸೂಚನೆ. ಮಕ್ಕಳ ಅಧ್ಯಯನಾಸಕ್ತಿಗೆ ಪ್ರೋತ್ಸಾಹ. ಸ್ವಂತದ ಆರೋಗ್ಯದ ಕಡೆಗೆ ಗಮನ ಇರಲಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.