Commercial LPG Cylinder: ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ.. ಎಷ್ಟಾಗಿದೆ?

Commercial LPG Cylinder Price Hike: ಇಂದು ತೈಲೋತ್ಪನ್ನ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಏರಿಕೆ ಮಾಡಿವೆ.

Oct 1, 2026 - 10:38
Commercial LPG Cylinder: ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ.. ಎಷ್ಟಾಗಿದೆ?

Commercial LPG Cylinder Price Hike: ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರ ಜೇಬಿಗೆ ಕತ್ತರಿ ಬಿದ್ದಿದೆ. ಇಂದು (ಅ.1) ತೈಲೋತ್ಪನ್ನ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಏರಿಕೆ ಮಾಡಿವೆ. 

ಹಬ್ಬದ ಋತುವಿನಲ್ಲಿಯೇ ಈ ದರ ಹೆಚ್ಚಳಲಾಗಿದೆ. ದೆಹಲಿಯಲ್ಲಿ ರೂ.62.50 ಅಧಿಕಗೊಂಡಿದ್ದು, ರೂ.2,810ಕ್ಕೆ ತಲುಪಿದೆ. ಈ ಹಿಂದೆ, ರೂ.2,747.50 ಇತ್ತು. 

ವಾಣಿಜ್ಯ ನಗರಿ ಮುಂಬೈನಲ್ಲಿ ರೂ.63 ಏರಿಕೆಯಾಗಿ, ರೂ.2,764 ಆಗಿದೆ. ಚೆನ್ನೈನಲ್ಲಿ ರೂ.66.50 ಹೆಚ್ಚಳವಾಗಿ ರೂ.2,983ಕ್ಕೆ ಬಂದಿದೆ. 

ಆದಾಗ್ಯೂ 14.2 ಕೆಜಿ ತೂಕದ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ರೂ.942, ಮುಂಬೈನಲ್ಲಿ ರೂ.941.50 ಮತ್ತು ಚೆನ್ನೈನಲ್ಲಿ 957.50 ಇದೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.