ದಿನ ಭವಿಷ್ಯ: ಇಂದು ಯಾರಿಗೆ ಶುಭ?

Daily Horoscope: ಇಂದು (ಶನಿವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Sep 26, 2026 - 10:39
ದಿನ ಭವಿಷ್ಯ: ಇಂದು ಯಾರಿಗೆ ಶುಭ?

ಮೇಷ:

ಶನಿಮಹಾತ್ಮನ ಅನುಗ್ರಹದ ದಿನ.. ಉದ್ಯೋಗ, ಉದ್ಯಮಗಳಲ್ಲಿ ಜಯ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಹೊಸ ಆದಾಯ ಮೂಲಕ್ಕೆ ಹುಡುಕಾಟ. ಲೋಕಹಿತಕ್ಕಾಗಿ ಪ್ರಾರ್ಥನೆಯಲ್ಲಿ ಭಾಗಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

ವೃಷಭ:

ಆಹಾರ, ಪಾನೀಯ, ಔಷಧ ವ್ಯಾಪಾರಿಗಳಿಗೆ ಸಾಮಾನ್ಯ ಲಾಭ.. ಉದ್ಯೋಗಾನ್ವೇಷಿಗಳಿಗೆ ಶುಭವಾರ್ತೆ. ದೀರ್ಘಾವಧಿ ಹೂಡಿಕೆಗಳಲ್ಲಿ ಲಾಭ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಲೇಖನ ಸಾಮಗ್ರಿ, ಪುಸ್ತಕ ವ್ಯಾಪಾರಿಗಳಿಗೆ ಶುಭ.ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಮಿಥುನ:

ಬೌದ್ಧಿಕ ಕೆಲಸಗಾರರಿಗೆ ವಿಶಿಷ್ಟ ಅನುಭವ.. ರಖಂ ವ್ಯಾಪಾರಿಗಳಿಗೆ ಪೈಪೋಟಿಯ ಅನುಭವ. ಅಧ್ಯಾತ್ಮ ಜೀವಿಗಳಿಗೆ ದೈವಿಕ ಅನುಭವ. ಗೃಹಿಣಿಯರಿಗೆ ತಕ್ಕಮಟ್ಟಿಗೆ ಕ್ಷೇಮದ ದಿನ. ಸಜ್ಜನರ ಸಹವಾಸದಿಂದ ಆನಂದ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಕರ್ಕಾಟಕ:

ಅನಿರೀಕ್ಷಿತ ಮೂಲದಿಂದ ಧನಲಾಭ.. ಎಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಅನುಕೂಲ. ದೂರದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಹೋಟೆಲ್ ಉದ್ಯಮಿಗಳಿಗೆ ನೌಕರರ ಸಮಸ್ಯೆ. ತೋಟಗಾರಿಕೆ, ಜೇನು ವ್ಯವಸಾಯ ಹವ್ಯಾಸಕ್ಕೆ ಉತ್ತೇಜನ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಸಿಂಹ:

ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ.. ಸಾಮಾಜಿಕ  ಕಾರ್ಯಕರ್ತರಿಗೆ ಪ್ರಯಾಸದ ಕ್ಷಣಗಳು. ಆಸ್ತಿ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಸರ್ಕಾರಿ ನೌಕರರಿಗೆ ರಾಜಕಾರಣಿಗಳ ಕಾಟ. ರಾತ್ರಿಯ ಹೊತ್ತಿನಲ್ಲಿ ದೂರ ಪ್ರಯಾಣ ಬೇಡ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕನ್ಯಾ:

ಹೊಲಿಗೆ, ಕಸೂತಿ ಬಲ್ಲವರಿಗೆ ಅದೃಷ್ಟದ ದಿನ.. ಬಂಧುಗಳ ಮನೆಯ ಶುಭಕಾರ್ಯಕ್ಕೆ ಸಹಾಯ. ಹಳೆಯ ಗೆಳೆಯರೊಡನೆ ಸಮಾಗಮ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ತೋಟಗಾರಿಕೆ ಬೆಳೆಗಳಿಂದ ಲಾಭ. ಗಣೇಶ ತ್ರಿಶತಿ ಸ್ತೋತ್ರ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.

ತುಲಾ:

ಆಧ್ಯಾತ್ಮಿಕ ಕಾರ್ಯಕ್ರಮಗಳತ್ತ ಒಲವು.. ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಒಲಿಯುವ ಅದೃಷ್ಟ. ಲಲಿತಕಲೆಗಳಲ್ಲಿ ಪರಿಶ್ರಮ ಉಳ್ಳವರಿಗೆ ಸಂತೃಪ್ತಿ. ಸಾಮೂಹಿಕ ಪ್ರಾರ್ಥನೆಯಿಂದ ಸಮಾಜಕ್ಕೆ ಒಳಿತು. ಕರಕುಶಲ ಸಾಮಗ್ರಿ ವ್ಯಾಪಾರದಲ್ಲಿ ಲಾಭ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ಮಹಿಷಮರ್ದಿನಿ ಸ್ಗೋತ್ರ ಓದಿ.

ವೃಶ್ಚಿಕ:

ಉದ್ಯೋಗ, ಉದ್ಯಮಗಳಲ್ಲಿ ಸಾಮಾನ್ಯ ಮುನ್ನಡೆ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ದೂರದಲ್ಲಿರುವ ಬಂಧುಗಳ ಆಗಮನ. ಕೈಮಗ್ಗದ ಕೆಲಸ ಬಲ್ಲವರಿಗೆ ಅವಕಾಶ. ಕೇಟರಿಂಗ್ ವ್ಯವಹಾರಸ್ಥರು ಗುಣಮಟ್ಟ ಪಾಲನೆಯಲ್ಲಿ ಎಚ್ಚರ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಧನು:

ನೆಲ, ಜಲ ಸಂರಕ್ಷಣೆಯ ಕಾರ್ಯಗಳಲ್ಲಿ ಭಾಗಿ.. ಸಹೋದ್ಯೋಗಿ ಮಿತ್ರರಿಗೆ ಮಾರ್ಗದರ್ಶನ. ಸಣ್ಣ ಹೂಡಿಕೆಗಳಲ್ಲಿ ಸಾಮಾನ್ಯ ಲಾಛ
ಶಿಕ್ಷಕ ವರ್ಗದ ಹಿತರಕ್ಷಣೆಗೆ ಪ್ರಯತ್ನ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಗೌರೀದಶಕ ಓದಿ.

ಮಕರ:

ಉದ್ಯೋಗ ಸ್ಥಾನದಲ್ಲಿ ಅಪಾರ ಸಮಾಧಾನ.. ನಿತ್ಯೋಪಯೋಗಿ ಸಾಮಗ್ರಿ ವಿತರಕರಿಗೆ ಸಡಿಲಾದ ಪೂರೈಕೆ ಒತ್ತಡ. ಹಿರಿಯರ ಆರೋಗ್ಯ ಸುಧಾರಣೆ. ನಷ್ಟವಿಲ್ಲದ ಪರೋಪಕಾರ ಮಾಡುವ ಅವಕಾಶ. ದುರ್ಬೋಧನೆಗಳನ್ನು ನಿರ್ಲಕ್ಷಿಸಿರಿ. ಗಣೇಶ ಕವಚ, ಕಾರ್ತಿಕೇಯ ಸ್ತೋತ್ರ , ಹನುಮಾನ್ ಚಾಲೀಸಾ ಓದಿ.

ಕುಂಭ:

ನಿಲ್ಲದೆ ಬರುವ ಸಂಪತ್ತಿನ ಪ್ರವಾಹ.. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಗ್ನತೆ. ಯಂತ್ರೋಪಕರಣ ವ್ಯಾಪಾರಿಗಳ ಪಾಲಿಗೆ ಶುಭದಿನ. ಯುವಜನರ ಪಾಲುಗೊಳ್ಳುವಿಕೆಯಲ್ಲಿ ಶ್ರಮದಾನ. ಗುರುಸ್ಥಾನಕ್ಕೆ ಭೇಟಿಯಿಂದ ಶುಭ. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ಉದ್ಯೋಗ, ವ್ಯವಹಾರಗಳಲ್ಲಿ ಅನುಕೂಲ.. ಬಂಧುವರ್ಗದ  ಮನೆಯ ಸಂಭ್ರಮದಲ್ಲಿ ಭಾಗಿ. ಹಿರಿಯರಿಗೆ ಪೂರ್ಣಾರೋಗ್ಯದ ಅನುಭವ. ಬಂಗಾರದ ಕೆಲಸ ಬಲ್ಲವರಿಗೆ ಸದವಕಾಶ. ತಿಂಡಿ, ತಿನಿಸು ವ್ಯಾಪಾರಿಗಳಿಗೆ ಅನುಕೂಲದ ದಿನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ. 

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.