Hanuman Ansh: ದಾಖಲೆಯ ಕಲೆಕ್ಷನ್‌ನತ್ತ ಹನುಮಾನ್ ಅಂಶ್!
Hanuman Ansh: ಸದ್ದಿಲ್ಲದೇ ಆಗಸ್ಟ್ 7 ರಂದು ಬಿಡುಗಡೆಯಾದ 'ಹನುಮಾನ್ ಅಂಶ್' ಸಿನಿಮಾವು ದಾಖಲೆಯ ಕಲೆಕ್ಷನ್‌ನತ್ತ ಮುನ್ನುಗುತ್ತಿದೆ.
Hanuman Ansh: ಸದ್ದಿಲ್ಲದೇ ಆಗಸ್ಟ್ 7 ರಂದು ಬಿಡುಗಡೆಯಾದ 'ಹನುಮಾನ್ ಅಂಶ್' ಸಿನಿಮಾವು ದಾಖಲೆಯ ಕಲೆಕ್ಷನ್‌ನತ್ತ ಮುನ್ನುಗುತ್ತಿದೆ. 45ನೇ ದಿನವಾದ ಭಾನುವಾರವು ಭರ್ಜರಿಯಾಗಿ ಗಳಿಕೆ ಕಂಡಿದೆ.
ಸ್ಯಾಕ್ನಿಲ್ಕ್ ಪ್ರಕಾರ ದೇಶಾದ್ಯಂತ ರೂ.13.75 ಕೋಟಿ (ನೆಟ್) ಚಾಚಿದ್ದು, 7,628 ಶೋಗಳು ಪ್ರದರ್ಶನಗೊಂಡಿವೆ. ಈ ಮೂಲಕ ವಿಶ್ವದೆಲ್ಲೆಡೆ ರೂ.347.05 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇದು ಸಂತ ನೀಮ್ ಕರೋಲಿ ಬಾಬಾರ ಜೀವನವನ್ನು ಆಧರಿಸಿದೆ. ವಿಶಾಲ್ ಚತುರ್ವೇದಿ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಬಂಡವಾಳವು ಹೂಡಿದ್ದಾರೆ. ಇವರಿಗೆ ಅನುಪ್ರಿಯಾ ನಗರ್, ರಾಗಿಣಿ ಸೋನಾ ಹಾಗೂ ನಮ್ರತಾ ಸಿಂಗ್ ಸಾಥ್ ನೀಡಿದ್ದಾರೆ.
ಶೋಭಿನವ್ ಸತ್ಯ, ಚಂದನ್ ಆನಂದ್, ವಿಹಾನ್ ಶೆಡ್ಗೆ, ಪೂರ್ಣಿಮಾ ತಿವಾರಿ, ಅನಿಲ್ ರಾಸ್ತೋಗಿ ಮತ್ತು ಗುಲ್ಶನ್ ಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶಾಲ್ ಬಾವಾ ಕ್ಯಾಮೆರಾ ವರ್ಕ್ ಮಾಡಿದ್ದು, ಧೀರೇಂದ್ರ ಮುಲ್ಕಲ್ವಾರ್ ಹಾಗೂ ಸಾಧು ಸುಶೀಲ್ ತಿವಾರಿ ಅವರ ಸಂಗೀತವಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.