ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ: ವಿವೇಕಾನಂದ ಪಿಯು ಕಾಲೇಜಿನ ಬಾಲಕಿಯರ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Vivekananda PU College: ವಿದ್ಯಾಭಾರತಿ ರಾಜ್ಯ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ, ವಿವೇಕಾನಂದ ಪದವಿ-ಪೂರ್ವ ಕಾಲೇಜಿನ ಬಾಲಕಿಯರ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.

Sep 30, 2026 - 16:56
ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ: ವಿವೇಕಾನಂದ ಪಿಯು ಕಾಲೇಜಿನ ಬಾಲಕಿಯರ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಬೆಂಗಳೂರು: ಜೈ ಗೋಪಾಲ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಈಚೆಗೆ ವಿದ್ಯಾಭಾರತಿ ರಾಜ್ಯ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ನಡೆಯಿತು. ಇಲ್ಲಿ ವಿವೇಕಾನಂದ ಪದವಿ-ಪೂರ್ವ ಕಾಲೇಜಿನ ಬಾಲಕಿಯರ ತಂಡ ಜಯಿಸಿದ್ದು, ರಾಷ್ಟ್ರ ಮಟ್ಟಕ್ಕೂ ಆಯ್ಕೆಯಾಗಿದೆ. 
 
ಈ ತಂಡದಲ್ಲಿ ದ್ವಿತೀಯ  ಪಿಯುಸಿ ವಿದ್ಯಾರ್ಥಿನಿಯರಾದ ಹೆಚ್ ಮನ್ಮಿತಾ, ಆತ್ಮಿಕಾ ಹಾಗೂ ಶರಣ್ಯ ಹೆಚ್.ಎನ್ ಸ್ಥಾನ ಪಡೆದಿದ್ದರು.   

ಇವರುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್, ಡಾ.ಜ್ಯೋತಿ ಹಾಗೂ ಯತೀಶ್ ತರಬೇತಿಯನ್ನು ನೀಡಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಬಾಲಕರ ತಂಡಕ್ಕೆ ದ್ವಿತೀಯ ಸ್ಥಾನ:

ಇದೇ ಪಂದ್ಯಾವಳಿಯಲ್ಲಿ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಈ ತಂಡದ ಪರವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿ ಕೆ.ವಿ.ನಿಖಿಲ್ ಕುಮಾರ್ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಭಿಲಾಷ್ ಭಾಗವಹಿಸಿದ್ದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.