ಜಿಲ್ಲಾ ಮಟ್ಟದ ಗಣಿತ-ವಿಜ್ಞಾನ ಮೇಳ: ಅಂಬಿಕಾ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಬಹುಮಾನ
Puttur: ವಿದ್ಯಾಭಾರತಿ ವತಿಯಿಂದ ನೆಹರು ನಗರದ ವಿವೇಕಾನಂದ ಸಿಬಿಎಸ್ಇ ಶಾಲೆಯಲ್ಲಿ, ಈಚೆಗೆ ಜರುಗಿದ ಜಿಲ್ಲಾಮಟ್ಟದ 'ಗಣಿತ-ವಿಜ್ಞಾನ ಮೇಳ' ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪುತ್ತೂರು: ವಿದ್ಯಾಭಾರತಿ ವತಿಯಿಂದ ನೆಹರು ನಗರದ ವಿವೇಕಾನಂದ ಸಿಬಿಎಸ್ಇ ಶಾಲೆಯಲ್ಲಿ, ಈಚೆಗೆ ಜರುಗಿದ 'ಜಿಲ್ಲಾಮಟ್ಟದ ಗಣಿತ-ವಿಜ್ಞಾನ ಮೇಳ' ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿಶೋರ್ ವರ್ಗ ಬಾಲಕರ ವಿಭಾಗದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊಟ್ಟೆತ್ತಡ್ಕದ ನಿವಾಸಿ ಎರದಾಸಪ್ಪ ಇ ಹಾಗೂ ಜ್ಯೋತಿ ಇ ದಂಪತಿಯ ಪುತ್ರ 9ನೇ ತರಗತಿಯ ಪ್ರೇಮ್ ಇ ವೈದಿಕ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಂಪ್ಯದ ನಿವಾಸಿ ಸತೀಶ್ ಬಿ ಮತ್ತು ನಳಿನಿ ಬಿ ದಂಪತಿಯ ಪುತ್ರ 9ನೇ ತರಗತಿಯ ಮೋಕ್ಷಿತ್ ಬಿ.ಎಸ್ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿಶೋರ ವರ್ಗ ಬಾಲಕಿಯರ ವಿಭಾಗದ ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ, ದರ್ಬೆಯ ನಿವಾಸಿ ಜಯಂತ್ ಕುಮಾರ್ ಹಾಗೂ ರೇಖಾ ಆರ್ ದಂಪತಿಯ ಪುತ್ರಿ 10ನೇ ತರಗತಿಯ ಸೋನಾ ಪೃಥ್ವಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
ಗಣಿತ ಪ್ರಯೋಗ ಸ್ಪರ್ಧೆಯಲ್ಲಿ, ಮೊಟ್ಟೆತ್ತಡ್ಕದ ನಿವಾಸಿ ಶಿವಶಂಕರ ಎಸ್ ದಾನೆಗೊಂಡರ್ ಮತ್ತು ಕೆ ವನಿತಾ ದಂಪತಿಯ ಪುತ್ರಿ 9ನೇ ತರಗತಿಯ ಸೌಪರ್ಣಿಕಾ ಎಸ್ ದಾನೆಗೊಂಡರ್ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಬಾಲ ವರ್ಗ ಬಾಲಕಿಯರ ವಿಭಾಗದಲ್ಲಿ ಗಣಿತ ಮಾದರಿ ಸ್ಪರ್ಧೆಯಲ್ಲಿ ಪೆರ್ನೆಯ ನಿವಾಸಿ ಗಿರೀಶ್ ಗೌಡ ಹೆಚ್ ಹಾಗೂ ಸುಮಿತ್ರ ದಂಪತಿಯ ಪುತ್ರಿ 8ನೇ ತರಗತಿಯ ಸಾನ್ವಿ ಜಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ, ಕೋಡಿಂಬಾಡಿಯ ನಿವಾಸಿ ಬಿ ವಸಂತ ಗೌಡ ಮತ್ತು ಮೀನಾಕ್ಷಿ ದಂಪತಿಯ ಪುತ್ರಿ 7ನೇ ತರಗತಿಯ ಶ್ರೀಯಾ ವಿ.ಎಂ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ, ಪರ್ಲಡ್ಕದ ನಿವಾಸಿ ವಿನೋದ್ ಕುಮಾರ್ ಪಿ.ಸಿ ಹಾಗೂ ಯಶೋಧಾ ಕೆ ದಂಪತಿಯ ಪುತ್ರಿ 6ನೇ ತರಗತಿಯ ನೈಮಿಶಾ ಪಿ.ವಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಬಾಲ ವರ್ಗ ಬಾಲಕರ ವಿಭಾಗದ ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಲ್ನಾಡಿನ ನಿವಾಸಿ ಚೇತನ್ ರಾಮ್ ಕೆ ಮತ್ತು ಸುಜಯ ಎ.ಎಸ್ ದಂಪತಿಯ ಪುತ್ರ 8ನೇ ತರಗತಿಯ ಸುಧನ್ವ ಕೆ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಸಂಪ್ಯದ ನಿವಾಸಿ ಲೋಕನಾಥ್ ಶೆಟ್ಟಿ ಹಾಗೂ ದಿವ್ಯಾ ರೈ ಪಿ ದಂಪತಿಯ ಪುತ್ರ 7ನೇ ತರಗತಿಯ ಸುಧಾಂಶು ಎಲ್ ಶೆಟ್ಟಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.