ಡಾ.ರಂಜನ್‌ಗೆ ಪ್ರತಿಷ್ಠಿತ ರೋಟರಿ ಚಾಂಪಿಯನ್ ಪ್ರಶಸ್ತಿ

Rotary Champion Award: ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯು ಪ್ರತಿಷ್ಠಿತ 'ನ್ಯಾಷನಲ್ ರೋಟರಿ ಚಾಂಪಿಯನ್ ಪ್ರಶಸ್ತಿ'ಯನ್ನು ಖ್ಯಾತ ಅರಿವಳಿಕೆ ತಜ್ಞ ಡಾ.ರಂಜನ್‌ ಅವರಿಗೆ ಪ್ರಧಾನ ಮಾಡಿದೆ.

Aug 21, 2026 - 14:51
ಡಾ.ರಂಜನ್‌ಗೆ ಪ್ರತಿಷ್ಠಿತ ರೋಟರಿ ಚಾಂಪಿಯನ್ ಪ್ರಶಸ್ತಿ

ಮಂಗಳೂರು: ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯು ಪ್ರತಿಷ್ಠಿತ 'ನ್ಯಾಷನಲ್ ರೋಟರಿ ಚಾಂಪಿಯನ್ ಪ್ರಶಸ್ತಿ'ಯನ್ನು ಖ್ಯಾತ ಅರಿವಳಿಕೆ ತಜ್ಞ ಡಾ.ರಂಜನ್‌ ಅವರಿಗೆ ಪ್ರಧಾನ ಮಾಡಿದೆ.

ಗೋವಾದಲ್ಲಿ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ರೋಟರಿ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಈ ಪುರಸ್ಕಾರ ನೀಡಿ, ಗೌರವಿಸಲಾಯಿತು.

ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷ ಒಲಯೆಂಕಾ ಹಕೀಂ ಬಾಬಲೋಲಾ ಅವರು ಪ್ರಶಸ್ತಿ ಪ್ರಧಾನ ಮಾಡಿ, ಅಭಿನಂದಿಸಿದರು

ಸದ್ಯ, ಡಾ.ರಂಜನ್‌ ಅವರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಅರಿವಳಿಕೆ ವಿಭಾಗದ ಹಿರಿಯ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕೆಎಂಸಿ  ವೈದ್ಯಕೀಯ ಕಾಲೇಜಿನ ಅರಿವಳಿಕೆ ಶಾಸ್ತ್ರ ಪ್ರಾಧ್ಯಾಪಕರು ಹಾಗೂ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಸ್ಥಾಪಕರು ಆಗಿದ್ದಾರೆ. 

ಈ ಕಾರ್ಯಕ್ರಮದಲ್ಲಿ ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷ ಒಲಯೆಂಕಾ ಹಕೀಂ ಪತ್ನಿ ಪ್ರೆಸ್ಸಿ ಬಾಬಲೋಲಾ, ಡಾ.ಲೆನ್ನಿ ಡಿಕೋಸ್ತಾ, ಕೆ.ಪಿ.ನಾಗೇಶ್, ವೆಂಕಟೇಶ್, ಸೂರ್ಯನಾರಾಯಣ ಹಾಗೂ ಡಾ.ಕೇಶವ್ ಇದ್ದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.