ದಿನ ಭವಿಷ್ಯ: ಇಂದು 'ವರಮಹಾಲಕ್ಷ್ಮಿ' ಹಬ್ಬ ಯಾರಿಗೆ ಶುಭ?
Daily Horoscope: ಇಂದು (ಶುಕ್ರವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಲಕ್ಷ್ಮಿಯ ಅನುಗ್ರಹದಿಂದ ಎಲ್ಲವೂ ಶುಭ.. ಉದ್ಯೋಗದಲ್ಲಿ ತಡೆಯಿಲ್ಲದ ಮುನ್ನಡೆ. ಸಹಚರರ ನಡುವೆ ಸೌಹಾರ್ದ ವೃದ್ಧಿ. ಉದ್ಯಮಗಳ ಆರ್ಥಿಕ ಸ್ಥಿತಿ ಸುಧಾರಣೆ. ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ. ಸಾಂಸಾರಿಕ ತಾಪತ್ರಯಗಳು ದೂರ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ಶನಿಮಹಾತ್ಮೆ ಓದಿ.
ವೃಷಭ:
ಕೆಲಸಗಳ ಮರುಹೊಂದಾಣಿಕೆ.. ಸಣ್ಣ ಉದ್ಯಮಗಳಿಗೆ ನಿರಾಳ ಸ್ಥಿತಿ. ವ್ಯವಹಾರ ಕ್ಷೇತ್ರ ವಿಸ್ತರಣೆ ನಿರ್ವಿಘ್ನ. ಲೇವಾದೇವಿ ವ್ಯವಹಾರಸ್ಥರಿಗೆ ಅಲ್ಪ
ಲಾಭ. ದಾಂಪತ್ಯ ಜೀವನದಲ್ಲಿ ಸೌಖ್ಯ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪಂಚರತ್ನ ಓದಿ.
ಮಿಥುನ:
ಹೆಚ್ಚುಕಡಿಮೆ ಎಲ್ಲ ಕ್ಷೇತ್ರಗಳಲ್ಲಿ ಅನುಕೂಲ.. ಉದ್ಯೋಗ, ವ್ಯವಹಾರಗಳಲ್ಲಿ ಉನ್ನತಿ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ರಕ್ಷಣಾ ರಂಗದಲ್ಲಿ ಸೇವೆ ಸಲ್ಲಿಸುವವರಿಗೆ ಜವಾಬ್ದಾರಿ. ಸಾಹಿತ್ಯ, ಸಂಗೀತ ಸಾಧಕರಿಗೆ ಗೌರವ ಪ್ರಾಪ್ತಿ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ವಿಶ್ವನಾಥಾಷ್ಟಕ ಓದಿ.
ಕರ್ಕಾಟಕ:
ವಯಸ್ಸು, ವಿದ್ವತ್ತಿಗೆ ಗೌರವ ಪ್ರಾಪ್ತಿ.. ಉದ್ಯಮದಲ್ಲಿ ಪೈಪೋಟಿಯ ಸಾಧ್ಯತೆ. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಪರಿಸರ ರಕ್ಷಣೆಯ ಚಟುವಟಿಕೆಗಳಲ್ಲಿ ಆಸಕ್ತಿ. ಸರ್ಕಾರಿ ನೌಕರರಿಗೆ ಸಾಮಾನ್ಯ ಅನುಕೂಲ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಸಿಂಹ:
ಉದ್ಯೋಗದಲ್ಲಿ ಉನ್ನತ ಸ್ಥಾನ ಸಂಭವ.. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಹತ್ತಿರದ ದೇವಾಲಯಕ್ಕೆ ಭೇಟಿ. ಉತ್ತರ ದಿಕ್ಕಿನಿಂದ ಶುಭ ಸಮಾಚಾರ. ಹೊಸ ಪಾಲುದಾರಿಕೆ ಪ್ರಸ್ತಾವದಿಂದ ಅನುಕೂಲ. ಗಣೇಶ ಸ್ತೋತ್ರ, ಹನುಮತ್ಕವಚ, ಮಹಿಷಮರ್ದಿನಿ ಸ್ತೋತ್ರ ಓದಿ.
ಕನ್ಯಾ:
ಅಕಸ್ಮಾತ್ ಧನಪ್ರಾಪ್ತಿಯ ಸಾಧ್ಯತೆ.. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ನಿರೀಕ್ಷೆ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಅನಿವಾರ್ಯ. ದೂರದೃಷ್ಟಿಯ ಯೋಜನೆಯಲ್ಲಿ ಹೂಡಿಕೆಯಿಂದ ಲಾಭ. ಸ್ವಂತ ಉದ್ಯಮಗಳಲ್ಲಿ ಅನುಕೂಲ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ತುಲಾ:
ದೇವತಾನುಗ್ರಹ ಪ್ರಾಪ್ತಿಗೆ ತೀವ್ರ ಪ್ರಯತ್ನ.. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯಿಂದ ಕಾರ್ಯನಿರ್ವಹಣೆ. ಆಪ್ತರಿಂದ ಸಕಾಲಿಕ ಸಲಹೆ, ಸಹಕಾರ. ವಿಸ್ತೃತ ವ್ಯವಹಾರ ಕ್ಷೇತ್ರದಲ್ಲಿ ಮುನ್ನಡೆ. ಹಿರಿಯ ಸಹಚರರಿಂದ ನಿರೀಕ್ಷೆ ಮೀರಿದ ಸಹಾಯ.ಗಣೇಶ ಕವಚ, ವೇದಸಾರ ಶಿವ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ವೃಶ್ಚಿಕ:
ಗುರು, ದೇವತಾನುಗ್ರಹದಿಂದ ಯಶಸ್ಸು.. ಉದ್ಯೋಗದಲ್ಲಿ ಅನುಕೂಲ ಪರಿಸರ. ಸರ್ಕಾರಿ ನೌಕರರಿಗೆ ಶುಭ ಸಮಾಚಾರ. ಉದ್ಯಮ ವಿಸ್ತರಣೆಗೆ ಕಾರ್ಯಯೋಜನೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಗಣಪತಿ ತ್ರಿಶತಿ ಸ್ತೋತ್ರ , ಕಾರ್ತಿಕೇಯ ಸ್ತೋತ್ರ ಗುರುಸ್ತೋತ್ರ ಓದಿ.
ಧನು:
ಆರೋಗ್ಯ ಸುಧಾರಣೆಯಿಂದ ಹೆಚ್ಚಿದ ಕಾರ್ಯೋತ್ಸಾಹ.. ಹಳೆಯ ಹಿತೈಷಿಯ ಸಲಹೆಯಿಂದ ಹೊಸ ಅವಕಾಶ ಪ್ರಾಪ್ತಿ. ಉದ್ಯೋಗದಲ್ಲಿ ಗೌರವದ ಸ್ಥಾನ. ಆದಾಯ ಹೆಚ್ಚಳದ ಯೋಜನೆಗಳು ಮುನ್ನಡೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ ,ವೆಂಕಟೇಶ್ವರ ಸ್ತೋತ್ರ ಓದಿ.
ಮಕರ:
ಆತ್ಮಬಲ ವೃದ್ಧಿಗೆ ವಿಶೇಷ ಪ್ರಯತ್ನ..ಕಿರಿಯರಿಗೆ ಸಹಾಯ ಮಾಡಿದ ತೃಪ್ತಿ. ಸ್ತ್ರೀಯರಿಗೆ ಪತಿಗೃಹದವರಿಂದ ಸಹಾಯ. ಉದ್ಯೋಗ ಪರಿವರ್ತನೆ ಪ್ರಯತ್ನಕ್ಕೆ ಹಂತಹಂತವಾಗಿ ಯಶಸ್ಸು. ಕೌಟುಂಬಿಕ ರಂಗದಲ್ಲಿ ಅನಿರೀಕ್ಷಿತ ಪ್ರಗತಿ. ಗಣೇಶ ಕವಚ, ದೇವೀಸ್ತೋತ್ರ , ಹನುಮಾನ್ ಚಾಲೀಸಾ ಓದಿ.
ಕುಂಭ:
ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ ಮುಂದುವರಿಕೆ.. ಸ್ವಂತ ಉದ್ಯಮದ ಹಿತ ಅಬಾಧಿತ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಉತ್ತಮ ಆದಾಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸೇವಾ ಚಟುವಟಿಕೆಗಳಿಗೆ ಮನೆಮಂದಿಯ ಸಂಪೂರ್ಣ ಬೆಂಬಲ. ಗಣೇಶ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಸುಲಭವಾಗಿ ಆಗುವ ಕಾರ್ಯಗಳು.. ಉದ್ಯೋಗ ಸ್ಥಾನದಲ್ಲಿ ಅನುಕೂಲದ ಸ್ಥಿತಿ. ಸಕಲ ಕಾರ್ಯಗಳಿಗೆ ಅನುಕೂಲದ ವಾತಾವರಣ. ಸರ್ಕಾರಿ ಅಧಿಕಾರಿಗಳ ಹಾಗೂ ನೌಕರರ ಉತ್ತಮ ಸ್ಪಂದನ. ಸಂಸಾರದಲ್ಲಿ ಮನೆಮಂದಿಯ ಸಹಕಾರ .ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.