ದಿನ ಭವಿಷ್ಯ: ಇಂದು ಯಾವ ರಾಶಿಯವರಿಗೆ ಶುಭ ಫಲ?

Daily Horoscope: ಇಂದು (ಶುಕ್ರವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Sep 25, 2026 - 09:51
ದಿನ ಭವಿಷ್ಯ: ಇಂದು ಯಾವ ರಾಶಿಯವರಿಗೆ ಶುಭ ಫಲ?

ಮೇಷ:

ಸಪ್ತಾಹ ಮುಗಿಯುತ್ತಿದ್ದಂತೆ ವೇಗದ ನಡಿಗೆ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದಷ್ಡು ವ್ಯಾಪಾರ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಸಮಾಧಾನಗಳ ವಾತಾವರಣ. ಗೃಹಿಣಿಯರಿಗೆ ಆನಂದದ ಅನುಭವ. ಯಂತ್ರೋಪಕರಣ ಮಾರಾಟಗಾರರಿಗೆ ಅನುಕೂಲ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

ವೃಷಭ:

ಕೆಲವರಿಗೆ ಸಪ್ತಾಹದ ಕಾರ್ಯಗಳನ್ನು ಮುಗಿಸುವ ಆತುರ.. ಪ್ರವಾಸದಲ್ಲಿರುವವರಿಗೆ ಹಳೆಯ ಗೆಳೆಯರ ಭೇಟಿ. ಬಂಧುಗಳ ಮನೆಯಲ್ಲಿ ದೇವತಾಕಾರ್ಯ. ಇಷ್ಟದೇವರ ಆಲಯ ಸಂದರ್ಶನ. ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ವಿಶೇಷ ಸಂದರ್ಭ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಮಿಥುನ:

ಶಾರೀರಿಕ, ಮಾನಸಿಕ ಆರೋಗ್ಯ ಉತ್ತಮ.. ಉದ್ಯೋಗಸ್ಥರಿಗೆ ಅಪರಿಮಿತ ಉತ್ಸಾಹ. ಪಿತ್ರಾರ್ಜಿತ ಆಸ್ತಿ ಅಭಿವೃದ್ಧಿ ಕಾರ್ಯ ಮುಂದುವರಿಕೆ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಪರಿಸರ ರಕ್ಷಣಾ ಕಾರ್ಯದಲ್ಲಿ ಶ್ರಮದಾನ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.

ಕರ್ಕಾಟಕ:

ಉದ್ಯೋಗ, ವ್ಯವಹಾರಗಳಲ್ಲಿ ಆನಂದ.. ವಸ್ತ್ರ, ಸಿದ್ಧ ಉಡುಪು,ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಕೈತುಂಬಾ  ಲಾಭ. ಕೃಷಿಯಲ್ಲಿ ನಿಲ್ಲದ ಹೊಸ ಪ್ರಯೋಗಗಳು. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಶಸ್ತ್ರವೈದ್ಯರಿಗೆ ಕೀರ್ತಿ ತರುವ ಕ್ಷಣಗಳು. ಗಣೇಶ ಪಂಚರತ್ನ, ಶಿವ ಸಹಸ್ರನಾಮ, ಗುರುಸ್ತೋತ್ರ ಓದಿ.

ಸಿಂಹ:

ಕಿರಿಯರಲ್ಲಿ ಉತ್ಸಾಹ ತುಂಬುವ ಕ್ರಮಗಳು.. ಉದ್ಯೋಗಾಸಕ್ತ ಹುಡುಗರಿಗೆ ಮಾರ್ಗದರ್ಶನ. ಐಟಿ ಉದ್ಯೋಗಿಗಳಿಗೆ  ಆಪ್ತಸಲಹಾ ಕಾರ್ಯಕ್ರಮ. ಬಂಧುಗಳ ಮನೆಯ ಸಂಭ್ರಮದಲ್ಲಿ ಭಾಗಿ. ಹಿರಿಯರು, ಮಹಿಳೆಯರು, ಮಕ್ಕಳಿಗೆ  ಆನಂದದ  ದಿನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಕನ್ಯಾ:

ಸರ್ಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ನೆಮ್ಮದಿ.. ಹಳೆಯ ಒಡನಾಡಿಯ ಪುನರ್ಮಿಲನ. ಕುಟುಂಬದ ಹಿರಿಯರ ಭೇಟಿ. ಕುಲದೇವರ ದೇವಾಲಯ, ನಾಗಸನ್ನಿಧಿ ಸಂದರ್ಶನ. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ. ಗಣೇಶ ಅಷ್ಟಕ, ಹನುಮತ್ಕವಚ, ನವಗ್ರಹ ಸ್ತೋತ್ರ ಓದಿ.

ತುಲಾ:

ಉದ್ಯೋಗದಲ್ಲಿ ನೆಮ್ಮದಿಯ ದಿನ.. ಅವಿವಾಹಿತ ಹುಡುಗ- ಹುಡುಗಿಯರಿಗೆ ಶುಭಕಾಲ ಬರುವ ಸೂಚನೆ. ಮಹಿಳೆಯರ ಸ್ವೋದ್ಯೋಗ ಯೋಜನೆಗೆ ನಿರೀಕ್ಷೆ ಮೀರಿದ ಯಶಸ್ಸು. ಪರಿಸರ, ಪ್ರಕೃತಿ ಸಂರಕ್ಷಣೆಯ ಕಾರ್ಯದಲ್ಲಿ ಭಾಗಿ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ನವಗ್ರಹ ಪಂಚರತ್ನ ಓದಿ.

ವೃಶ್ಚಿಕ:

ವಿವಾಹಾಸಕ್ತರಿಗೆ ಶುಭ ಸಮಾಚಾರ.. ಲೇವಾದೇವಿ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಯಂತ್ರೋಪಕರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಮೆಕಾನಿಕ್ ವೃತ್ತಿಯವರಿಗೆ ಉದ್ಯೋಗಾವಕಾಶ. ಮನೆಯಿಂದ ಕೆಲಸ ಮಾಡುವವರಿಗೆ ಅನುಕೂಲ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಧನು:

ಜಪ, ಧ್ಯಾನದ ಮೂಲಕ ಇಷ್ಟಾರ್ಥ ಸಿದ್ಧಿ.. ಸಾಹಿತ್ಯ ಸಂಗೀತಾದಿ ಕಲಾಸಂಬಂಧಿ ಚಟುವಟಿಕೆಗಳಲ್ಲಿ ಆಸಕ್ತಿ. ಹಳೆಯ ಗೆಳೆಯರ ಸಂಪರ್ಕದಿಂದ ಹರ್ಷ. ಕೃಷಿ ಚಟುವಟಿಕೆಗಳು ಪ್ರಗತಿಯಲ್ಲಿ. ಯಂತ್ರೋಪಕರಣ ಬಿಡಿಭಾಗಗಳಿಗೆ ಅಧಿಕ ಬೇಡಿಕೆ. ಗಣೇಶ ಪಂಚರತ್ನ,ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

ಮಕರ:

ವಾರ ಮುಗಿಯುತ್ತಿದ್ದಂತೆ ಕಾರ್ಯಗಳು ತ್ವರಿತಗತಿಯಲ್ಲಿ.. ಮನೆಮಂದಿಯೊಂದಿಗೆ ದೇವತಾರಾಧನೆ. ಬಂಧುಗಳ ಮನೆಯಲ್ಲಿ ದೇವತಾಕಾರ್ಯ ಟೈಲರಿಂಗ್ ವೃತ್ತಿಯವರಿಗೆ ಅನುಕೂಲ. ಮಕ್ಕಳ ಜೊತೆಯಲ್ಲಿ ದೇವಾಲಯಕ್ಕೆ ಭೇಟಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ:

ಶುಕ್ರವಾರದಂದು ಅವಿಶ್ರಾಂತ ದುಡಿಮೆ.. ಉತ್ಪನ್ನಗಳಿಗಾಗಿ ಬಂದ ಬೇಡಿಕೆಗಳ ಕಡೆಗೆ ಗಮನ ಹರಿಸುವ ಅನಿವಾರ್ಯತೆ. ಸಮಾಜ ಸೇವಾ ಕಾರ್ಯಗಳತ್ತ ಗಮನ. ಮನೆಯಲ್ಲಿ ಹಿರಿಯರು, ಸಂಗಾತಿ, ಮಕ್ಕಳಿಗೆ ಸಂಭ್ರಮ. ರಾತ್ರಿ ಪ್ರಯಾಣದಲ್ಲಿ ಎಚ್ಚರ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ವಾರದ ಮುಗಿಯುತ್ತಿದ್ದಂತೆ ಕ್ಷಿಪ್ರಗತಿಯ ಓಟ.. ತಾಯಿಯ ಯೋಗಕ್ಷೇಮ ವಿಚಾರಣೆ. ಗುರುಹಿರಿಯರ ಭೇಟಿಗಾಗಿ ಸಣ್ಣ ಪ್ರಯಾಣ ಸಂಭವ. ಮನೆಮಂದಿಯ ಆರೋಗ್ಯ ಉತ್ತಮ. ಪಾಲುದಾರಿಕೆಯಲ್ಲಿ ಸಣ್ಣ ಉದ್ಯಮದ ಯೋಜನೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.