ಆ ರೋಚಕ Flight ಸ್ಟೋರಿ.. Day2Day News ಸಂದರ್ಶನದಲ್ಲಿ ಈಶ್ವರ ಮಂಗಲದ ಡಾಕ್ಟರ್: Video
Dr.Sreekumar Katribailu: ಇತ್ತೀಚೆಗೆ ಇಂಡಿಗೋ ವಿಮಾನದಲ್ಲಿ ನೌಕಾಪಡೆ ಸಿಬ್ಬಂದಿಯೊಬ್ಬರಿಗೆ ಹೃದಯಾಘಾತವಾಗಿದೆ. ಆ ವ್ಯಕ್ತಿಗೆ ಡಾ.ಶ್ರೀಕುಮಾರ್ ಕತ್ರಿಬೈಲು ಪ್ರಥಮ ಚಿಕಿತ್ಸೆ ನೀಡಿ, ಮರುಜನ್ಮ ನೀಡಿದ್ದಾರೆ.
Dr.Sreekumar Katribailu: ಡಾ.ಶ್ರೀಕುಮಾರ್ ಕತ್ರಿಬೈಲು ಅವರು ಪುತ್ತೂರಿನ ಈಶ್ವರ ಮಂಗಲದಲ್ಲಿರುವ ಪ್ರಸಿದ್ಧ ವೈದ್ಯರು. ಈ ಭಾಗದಲ್ಲಿ ಇವರು 80 ರೂಪಾಯಿ ಡಾಕ್ಟರ್ ಎಂದೇ ಪ್ರಖ್ಯಾತರಾಗಿದ್ದು, ಹೆರಿಗೆ ಮಾಡಿಸುವುದರಿಂದ ಹಿಡಿದು ರೋಗಿಗಳ ಮನೆ ಬಾಗಿಲಿಗೇ ಹೋಗಿ ಚಿಕಿತ್ಸೆ ನೀಡುವ ಅಪರೂಪದ ವೈದ್ಯರು ಹೌದು.
ಈ ಕಾರಣದಿಂದ ಡಾ.ಕತ್ರಿಬೈಲು, ಜನಸಾಮಾನ್ಯರ ಪಾಲಿಗೆ ಅತ್ಯಂತ ಕಡಿಮೆ ದರದಲ್ಲಿ ಟ್ರೀಟ್‌ಮೆಂಟ್ ಕೊಡುವ ಅಚ್ಚು-ಮೆಚ್ಚಿನ ಡಾಕ್ಟರ್ ಆಗಿದ್ದಾರೆ. ಅವರು ಇತ್ತೀಚೆಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಬೇಕಾದರೆ, ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದೆ.
ಸುಮಾರು 35 ಸಾವಿರ ಅಡಿ ಎತ್ತರದಲ್ಲಿ ಆ ವ್ಯಕ್ತಿಗೆ ಆ ಸಮಯಪ್ರಜ್ಞೆ ಮೆರೆದು ಪ್ರಥಮ ಚಿಕಿತ್ಸೆ ಕೊಟ್ಟಿ ಬದುಕಿಸುವುದೇ ದೊಡ್ಡ ಸವಾಲಾಗಿತ್ತು. ಆದರೆ, ಡಾ.ಶ್ರೀಕುಮಾರ್ ಕತ್ರಿಬೈಲು, ಆ ಯೋಧನಿಗೆ ಮರುಜನ್ಮ ಕೊಟ್ಟು, ತಮ್ಮ ವೈದ್ಯ ವೃತ್ತಿಯಲ್ಲಿ ಸಾರ್ಥಕತೆ ಭಾವ ಮೂಡಿಸಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.