ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾವಳಿ: ವಿವೇಕಾನಂದ ಪಿಯು ಕಾಲೇಜಿನ ಬಾಲಕರ ತಂಡಕ್ಕೆ ದ್ವಿತೀಯ ಪ್ರಶಸ್ತಿ
Taluk Level Football Tournament: ಪುತ್ತೂರು ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ವಿವೇಕಾನಂದ ಪಿಯು ಕಾಲೇಜಿನ ಬಾಲಕರ ತಂಡಕ್ಕೆ ದ್ವಿತೀಯ ಪ್ರಶಸ್ತಿಯನ್ನು ಪಡೆದಿದೆ.
ಪುತ್ತೂರು: ಇಲ್ಲಿನ ವಿವೇಕಾನಂದ ಪಿಯು ಕಾಲೇಜು ಕ್ರೀಡಾಂಗಣದಲ್ಲಿ, ಈಚೆಗೆ 'ಶಾಲಾ ಶಿಕ್ಷಣ ಇಲಾಖೆ' ಪದವಿಪೂರ್ವ ವಿಭಾಗದ ವತಿಯಿಂದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾವಳಿ ನಡೆಯಿತು. ಇದೇ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ.
ಈ ತಂಡದ ಪರವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಧ್ಯಾನೇಶ್ ಎಸ್, ರಿಥನ್ ಗೌಡ ಎಸ್.ಪಿ, ಶ್ರೀಶಾಂತ್, ಮೋಹಿತ್ ಬಿ.ಕೆ, ಭುವನ್ ಗೌಡ ಜಿ.ಎನ್, ದೈವಿಕ್ ದರ್ಶನ್ ಡಿ.ವಿ, ಪವನ್ ಕುಮಾರ್ ಟಿ, ಲೋಕೇಶ್ ಕೆ.ಜಿ, ತಸ್ಮೈ ಪಿ ಗೌಡ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ನಿಹಾನ್ ಶೆಟ್ಟಿ ವಿ ಆರ್, ಉಜ್ವಲ್ ಮನೋಜ್ ತಾರಾ, ಚಿರಾಗ್ ಜಿ.ಯು, ಪವನ್ ವಿ. ವಿ, ವಿಲಾಸ್ ಬಿ.ಜಿ, ಗಗನ್ ಸಿ.ಎನ್, ಶ್ರೀಶಾಂತ್ ಎಸ್ ಭಾಗವಾಗಿಸಿದ್ದರು.
ಇವರುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್ ಅವರು ತರಬೇತಿಯನ್ನು ನೀಡಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.