Bengaluru: ಸ್ವಿಗ್ಗಿಯಿಂದ ಕಮಿಷನ್ ದಂಧೆ.. ತಿರುಗಿಬಿದ್ದ ಹೋಟೆಲ್ ಮಾಲೀಕರು, ಜುಲೈ 28ಕ್ಕೆ ಸಮಾಲೋಚನಾ ಸಭೆ

Bengaluru: ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸ್ವಿಗ್ಗಿ ಸಂಸ್ಥೆಯ ಮೋಸದ ವ್ಯವಹಾರ ಹಾಗೂ ಅತಿಯಾದ ಕಮಿಷನ್ ದಂಧೆಯ ವಿರುದ್ಧ ಹೋಟೆಲ್ ಮಾಲೀಕರು ತಿರುಗಿಬಿದ್ದಿದ್ದಾರೆ. ಜುಲೈ 28 ರಂದು ಸಮಾಲೋಚನಾ ಸಭೆ ಕರೆದಿದ್ದಾರೆ.

Jul 25, 2026 - 14:40
Jul 25, 2026 - 14:42
Bengaluru: ಸ್ವಿಗ್ಗಿಯಿಂದ ಕಮಿಷನ್ ದಂಧೆ.. ತಿರುಗಿಬಿದ್ದ ಹೋಟೆಲ್ ಮಾಲೀಕರು, ಜುಲೈ 28ಕ್ಕೆ ಸಮಾಲೋಚನಾ ಸಭೆ

ಬೆಂಗಳೂರು: ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸ್ವಿಗ್ಗಿ (Swiggy) ಸಂಸ್ಥೆಯ ಮೋಸದ ವ್ಯವಹಾರ ಹಾಗೂ ಅತಿಯಾದ ಕಮಿಷನ್ ದಂಧೆಯ ವಿರುದ್ಧ ಹೋಟೆಲ್ ಮಾಲೀಕರು ತಿರುಗಿಬಿದ್ದಿದ್ದಾರೆ. ಸ್ವಿಗ್ಗಿಯ ದೌರ್ಜನ್ಯದ ವಿರುದ್ಧ ಧ್ವನಿಯಾಗಲು ಮತ್ತು ಒಕ್ಕೋರಲಿನಿಂದ ಹೋರಾಟ ನಡೆಸಲು ಹೋಟೆಲ್ ಮಾಲೀಕರ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ.

ಈ ಮೊದಲು ಶೇ.18 ರಿಂದ 22% ಇದ್ದ ಕಮಿಷನ್, ಸದ್ಯ 45% ರಿಂದ 50% ವರೆಗೆ ಏರಿಕೆಯಾಗಿದೆ. ಇದಕ್ಕೆ ಇಂಟರ್ಮೀಡಿಯೇಟ್ ಚಾರ್ಜ್ & ಇತರೆ ಶುಲ್ಕಗಳು ಸೇರಿ ಹೋಟೆಲ್ ಮಾಲೀಕರಿಗೆ ಉಳಿಯುವುದು ಕೇವಲ ಅಲ್ಪ ಲಾಭ ಮಾತ್ರ. ಒಂದು ರೂ.100ರ ಆರ್ಡರ್‌ಗೆ ರೂ.45 ರಿಂದ ರೂ.50 ಮೊತ್ತವನ್ನು ಸ್ವಿಗ್ಗಿ ಕಮಿಷನ್ ರೂಪದಲ್ಲಿ ಪಡೆಯುತ್ತಿದೆ. ಇದರಿಂದ ಸಣ್ಣ ಹಾಗೂ ಮಧ್ಯಮ ಹೋಟೆಲ್ ಉದ್ಯಮಗಳು ನಷ್ಟದ ಸುಳಿಯಲ್ಲಿ ಸಿಲುಕಿವೆ. ಗುಣಮಟ್ಟದ ಆಹಾರ ನೀಡುವ ಹೋಟೆಲ್‌ಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿವೆ.

ಈ ಹಿನ್ನೆಲೆ, ಸ್ವಿಗ್ಗಿಯ ಈ ಸುಲಿಗೆ ನೀತಿಯನ್ನು ಖಂಡಿಸಿ, ಎಲ್ಲಾ ಹೋಟೆಲ್ ಮಾಲೀಕರು ಒಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ. 'ಬನ್ನಿ ಚರ್ಚಿಸೋಣ, ಒಕ್ಕೋರಲಿನಿಂದ ಕಮಿಷನ್ ದಂಧೆ ವಿರುದ್ಧ ಧ್ವನಿಯಾಗೋಣ' ಎಂಬ ಘೋಷಣೆಯಡಿ ಈ ಸಭೆ ಆಯೋಜಿಸಲಾಗಿದೆ.

ಇದೇ ಜುಲೈ  28 ರಂದು ಸಂಜೆ 4 ಗಂಟೆಗೆ ಸ್ವಾತಿ ರೆಸ್ಟೋರೆಂಟ್, ರಾಜಾಜಿನಗರದಲ್ಲಿ ಈ ಸಭೆ ನಡೆಯುತ್ತಿದೆ. ಇಲ್ಲಿ ಸ್ವಿಗ್ಗಿ ವಿಧಿಸುತ್ತಿರುವ ಅಕ್ರಮ ಕಮಿಷನ್, ಗುಪ್ತ ಶುಲ್ಕಗಳು, ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮತ್ತು ಹೋಟೆಲ್ ಮಾಲೀಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿಸ್ತೃತ ಚರ್ಚೆ ಮಾಡಲಾಗುತ್ತದೆ. ಆ ಬಳಿಕ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಬೆಂಗಳೂರಿನ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ದರ್ಶಿನಿ ಹಾಗೂ ಫಾಸ್ಟ್‌ಫುಡ್ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9844015081, 9591843474ನ್ನು ಸಂಪರ್ಕಿಸಬಹುದು.