Hanuman Ansh: ರೂ.155 ಕೋಟಿ ಕಲೆಕ್ಟಿನ್ ಮಾಡಿದ ಹನುಮಾನ್ ಅಂಶ್!
Hanuman Ansh: ಸದ್ದಿಲ್ಲದೇ ಬಂದ ಹನುಮಾನ್ ಅಂಶ್ ಸಿನಿಮಾವು ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಸದ್ದಿಲ್ಲದೇ ಬಂದ ಹನುಮಾನ್ ಅಂಶ್ (Hanuman Ansh) ಸಿನಿಮಾವು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 32ನೇ ದಿನವಾದ ಸೋಮವಾರವು ಚೆನ್ನಾಗಿಯೇ ಬ್ಯುಸಿನೆಸ್ ಮಾಡಿದೆ. ಭಾರತದಲ್ಲಿ ರೂ.9.50 ಕೋಟಿ ನೆಟ್ ಗಳಿಕೆ ಕಂಡಿದ್ದು, 7,343 ಶೋಗಳು ಪ್ರದರ್ಶನಗೊಂಡಿವೆ. ಈ ಮೂಲಕ ಒಟ್ಟು ರೂ.155.65 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇದು ಸಂತ ನೀಮ್ ಕರೋಲಿ ಬಾಬಾರ ಜೀವನವನ್ನು ಆಧರಿಸಿದೆ. ಡಾ.ವಿಶಾಲ್ ಚತುರ್ವೇದಿ, ತಮ್ಮ ಸ್ವಂಭು ಮೀಡಿಯಾ ನೆಟ್‌ವರ್ಕ್ ಬ್ಯಾನರ್‌ನಡಿ ನಿರ್ಮಿಸಿದ್ದಾರೆ. ಹಾಗೆಯೇ ಆಕ್ಷನ್ ಕಟ್ ಸಹ ಹೇಳಿದ್ದಾರೆ.
ಶೋಭಿನವ್ ಸತ್ಯ, ಚಂದನ್ ಆನಂದ್, ವಿಹಾನ್ ಶೆಡ್ಗೆ, ಪೂರ್ಣಿಮಾ ತಿವಾರಿ, ಅನಿಲ್ ರಾಸ್ತೋಗಿ ಹಾಗೂ ಗುಲ್ಶನ್ ಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶಾಲ್ ಬಾವಾ ಕ್ಯಾಮೆರಾ ವರ್ಕ್ ಮಾಡಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.