ವಿವೇಕಾನಂದ ಕಾಲೇಜು: ‘ಜಾಗೃತಿ' ವಾರ್ಷಿಕ ಸಂಚಿಕೆ ಬಿಡುಗಡೆ
Vivekananda College: ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ 'ಜಾಗೃತಿ' ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಜಾಗೃತಿ ಸಮಿತಿ, ಸೌರಭ ಪ್ರಸಾರಾಂಗ & ಐಕ್ಯೂಎಸಿ ಘಟಕದ ಸಂಯುಕ್ತಾಶ್ರಯದಲ್ಲಿ ಈಚೆಗೆ 2026-27ನೇ ಸಾಲಿನ 'ಜಾಗೃತಿ' ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಥೆ, ಕವನ, ಲೇಖನ ಮುಂತಾದ ವಿವಿಧ ಬರಹ ಪ್ರಕಾರಗಳನ್ನು ದಾಖಲಿಸಲು ಈ ವಾರ್ಷಿಕ ಸಂಚಿಕೆಯು ಬಹುದೊಡ್ಡ ಮಾಧ್ಯಮವಾಗಿದೆ. ಇಂದು ಬರಹಗಳನ್ನು ದಾಖಲಿಸಲು ಹಲವಾರು ವೇದಿಕೆಗಳಿವೆ. ಆದರೆ, ಪುಸ್ತಕ ರೂಪದಲ್ಲಿ ದಾಖಲಾದಾಗ ಅದಕ್ಕಿರುವ ಮಾನ್ಯತೆ ತುಂಬಾ ದೊಡ್ಡದು. ಒಂದು ಬರಹಕ್ಕೆ ನಮ್ಮ ಜೀವನವನ್ನು ಬದಲಾಯಿಸುವ ಹಾಗೂ ಇತರರನ್ನು ಬೆಳೆಸುವ ಶಕ್ತಿಯಿದೆ. ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ, ಕಳೆದ ವರ್ಷದ ಶೈಕ್ಷಣಿಕ ಚಟುವಟಿಕೆಗಳು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಬರಹಗಳನ್ನು ಹೊತ್ತಂತಹ ಒಂದು ವಾರ್ಷಿಕ ಸಂಚಿಕೆ 'ಜಾಗೃತಿ'. ಇದು ಸುಂದರವಾಗಿ ಮೂಡಿ ಬರಬೇಕಾದರೆ, ಅದರ ಹಿಂದಿನ ಕಷ್ಟಗಳು ಅದರಲ್ಲಿ ತೊಡಗಿಸಿಕೊಂಡವರಿಗೆ ಮಾತ್ರ ತಿಳಿದಿರುತ್ತದೆ ಎಂದರು.
ಈ ವೇಳೆ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಹಾಗೂ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಾಗೃತಿ ವಾರ್ಷಿಕ ಸಂಚಿಕೆಯ ಸಂಪಾದಕಿ, ವಿಶೇಷ ಅಧಿಕಾರಿ (ಶಿಕ್ಷಕ ಅಭಿವೃದ್ಧಿ) ಮತ್ತು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ ಎಸ್ ಸ್ವಾಗತಿಸಿದರು. ಸೌರಭ ಪ್ರಸರಂಗದ ನಿರ್ದೇಶಕ, ವಿಶೇಷ ಅಧಿಕಾರಿ (ಆಡಳಿತ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಂ ವಂದಿಸಿದರು. ಬಿಎ ವಿಭಾಗದ ವಿದ್ಯಾರ್ಥಿನಿ ಕೃತಿಕಾ ಕಣಿಯಾರು ನಿರೂಪಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.